• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fake: 'ಪಿಎಂ ಮಾಸ್ಕ್‌ಯೋಜನಾ' ಹೆಸರಿನ ಯಾವ ಯೋಜನೆಯೂ ಇಲ್ಲ

|

ನವದೆಹಲಿ, ಮೇ 2: ಇಡೀ ವಿಶ್ವವೇ ಕೊರೊನಾವೈರಸ್‌ ಭೀತಿಯಲ್ಲಿದೆ. ದೇಶದ ಜನರನ್ನು ಬದುಕಿಸಲು ಏನೇನು ದಾರಿ ಇದೆಯೋ ಅದೆಲ್ಲವನ್ನು ಸರ್ಕಾರ ತುಳಿದಾಗಿದೆ.

ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

ಆದರೆ ಇದರ ಮಧ್ಯದಲ್ಲಿ ಕೊರೊನಾವೈರಸ್‌ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಕೆಲವು ಕಡೆ ನಕಲಿ ಸ್ಯಾನಿಟೈಸರ್ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ನಕಲಿ ಮಾಸ್ಕ್ ಮಾರಾಟವಾಗುತ್ತಿದೆ.

ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪಿಎಂ ಮಾಸ್ಕ್‌ಯೋಜನಾ ಹೆಸರಿನ ಮೆಸೇಜ್‌ಗಳು ಬರತೊಡಗಿವೆ. ಹಾಗಾದರೆ ಆ ಸುದ್ದಿ ಸತ್ಯವೇ ಅಥವಾ ಸುಳ್ಳಾ ಎಂದು ನೋಡೋಣ.

ವಾಟ್ಸಾಪ್‌ ಮೆಸೇಜ್ ಹೀಗಿದೆ' ಕರೋನಾವೈರಸ್‌ ಪ್ರಕೋಪದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಎಲ್ಲಾ ಭಾರತೀಯರಿಗೆ ಕೊರೊನಾ ವೈರಸ್ ಮುಕ್ತ ಮಾಸ್ಕ್‌ ನೀಡಲು ಮುಂದಾಗಿದ್ದಾರೆ' ನೀವು ಕೂಡ ನೀಡಿರುವ ಕೆಲವು ಲಿಂಕ್‌ಗಳನ್ನು ಕ್ಲಿಕ್ ಮಾಡಿ ಉಚಿತ ಮಾಸ್ಕ್ ಆರ್ಡರ್ ಮಾಡಬಹುದಾಗಿದೆ ಎಂದು ಬರೆಯಲಾಗಿದೆ.

ಈ ಸುದ್ದಿ ಕುರಿತು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದಿಂದ ಪಿಎಂ ಮಾಸ್ಕ್ ಯೋಜನಾ ರೀತಿಯ ಯಾವುದೇ ಯೋಜನೆಯನ್ನು ಆರಂಭಿಸುತ್ತಿಲ್ಲ. ನಿಮಗೆ ಈ ರೀತಿಯ ಕೆಲವು ಮೆಸೇಜ್‌ಗಳು ಬಂದಿದ್ದರೆ ದಯವಿಟ್ಟು ಅಂತಹ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಬೇಡಿ. ಫಾರ್ವಡ್ ಮಾಡಬೇಡಿ ಎಂದು ತಿಳಿಸಿದ್ದಾರೆ.

English summary
There is no project named 'PM Mask Yojana' Fro Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X