ಪಿಯೂಷ್ ಗೋಯಲ್ ಅಧಿಕಾರವಧಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆ

ನವದೆಹಲಿ, ಆಗಸ್ಟ್ 27: ಪಿಯೂಷ್ ಗೋಯಲ್ ಕೇಂದ್ರ ಇಂಧನ ಸಚಿವರಾದ ಬಳಿಕ ಕಳೆದೊಂದು ವರ್ಷದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳಾಗಿವೆ. ಹೀಗೊಂದು ಮಾಹಿತಿ ಆಗಸ್ಟ್ ನಲ್ಲಿ ಇಂಡಿಯಾ ಟುಡೇ ವಾಹಿನಿ ನಡೆಸಿದ 'ಮೂಡ್ ಆಫ್ ದಿ ನೇಷನ್' ಸರ್ವೆಯಲ್ಲಿ ಬಹಿರಂಗಪಡಿಸಿದೆ.

ಈ ಸಮೀಕ್ಷೆಯ ಮಾಹಿತಿಗಳ ಪ್ರಕಾರ ದೇಶದ ಶೇಕಡಾ 41 ಜನರು ವಿದ್ಯುತ್ ಸರಬರಾಜಿನಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಶೇಕಡಾ 15ರಷ್ಟು ಜನರು ವಿದ್ಯುತ್ ಸರಬರಾಜಿನಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಶೇಕಡಾ 55 ಜನರು ವಿದ್ಯುತ್ ಪೂರೈಕೆಯಲ್ಲಾಗಿರುವ ಸುಧಾರಣೆಯನ್ನು ಒಪ್ಪಿಕೊಂಡಿದ್ದಾರೆ.

Power supply situation in the country tremendously improved over the past year

ಇನ್ನು ಇಂಧನ ಇಲಾಖೆಯ ಉರ್ಜಾ ಪೋರ್ಟಲ್ ನ ಅಂಕಿ ಅಂಶಗಳ ಪ್ರಕಾರ, 2016ರ ಜುಲೈ ತಿಂಗಳಿನಲ್ಲಿ 16.33ಗಂಟೆ (11ಕಿ.ವ್ಯಾ ಫೀಡರ್) ಪವರ್ ಕಟ್ ನಡೆದಿದ್ದರೆ, ಈ ಬಾರಿ ಕೇವಲ 9.21 ಗಂಟೆ ಪವರ್ ಕಟ್ ನಡೆದಿದೆ. ಈ ಅಂಕಿ ಅಂಶಗಳಾಚೆಗೆ 1000 ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಸುಧಾರಣೆಗಳಾಗಿವೆ.

ಇಂಧನ ಇಲಾಖೆಯ ಈ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ಗ್ರಾಹಕರು ಉರ್ಜಾ ಪೋರ್ಟಲ್ ( www.urjaindia.co.in ) ಗೆ ಭೇಟಿ ನೀಡಬಹುದು. ಇದಲ್ಲದೆ ಇಂಧನ ಇಲಾಖೆಯ 1800 200 3004 ಸಂಖ್ಯೆಗೆ ಮಿಸ್ ಕಾಲ್ ನೀಡಿ ಎಲ್ಲಾ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿ ಈ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

Power supply situation in the country tremendously improved over the past year

ಇನ್ನು ಗ್ರಾಹಕರು ಯಾವುದೇ ಸಮಸ್ಯೆಗಳಿದ್ದರೆ 1912 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. 2016ರ ಜುಲೈನಲ್ಲಿ ಶೇಕಡಾ 16.6 ದೂರುಗಳು ವಿಲೇವಾರಿಯಾಗದೇ ಬಾಕಿ ಉಳಿಯುತ್ತಿದ್ದವು, ಇದೀಗ ಈ ಪ್ರಮಾಣ ಶೇಕಡಾ 9.2ಕ್ಕೆ ಇಳಿಕೆಯಾಗಿದೆ.

ಎಲ್ಲಾ ಮನೆಗಳಿಗೂ 24*7 ವಿದ್ಯುತ್ ಪೂರೈಕೆಯ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದ್ದು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+