ಮಹಾರಾಷ್ಟ್ರ ಚುನಾವಣೆ: EVM ಮಷಿನ್ ಬಗ್ಗೆ ಶಾಸಕ ಜೀತೇಂದ್ರ ಅವ್ಹಾದ್ ಪೋಸ್ಟ್ ವೈರಲ್
ಮುಂಬೈ, ನವೆಂಬರ್ 25: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆ 2024ಯಲ್ಲಿ ಎನ್‌ಡಿಎ ನೇತೃತ್ವದ ಮಹಾಯುತಿ ಪಕ್ಷವು ಪ್ರಚಂಡ ಗೆಲುವ ಪಡೆದಿದೆ. ಸದ್ಯ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲ ಉಂಟಾಗಿದೆ. ಈ ಮಧ್ಯೆ ಈ ಗೆಲುವು ಪ್ರಮಾಣಿಕತೆಯಿಂದ ಆಗಿಲ್ಲ. ಮತಯಂತ್ರಗಳ ಕುರಿತು ಪರಾಜಿತ ಅಭ್ಯರ್ಥಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಮಹಾಯುತಿ ಏಕಪಕ್ಷೀಯವಾಗಿದೆ ಗೆದ್ದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 'ಮಹಾಯುತಿ' ಗೆಲುವಿನ ಬಗ್ಗೆ ಕೆಲವರು ನೀಡಿರುವ ಆರೋಪಗಳಿಗೆ ಮಬ್ರಾ ಕಾಳ್ವಾ ಕ್ಷೇತ್ರದಲ್ಲಿ ಬಹುಮತದಿಂದ ಗೆದ್ದು ಬೀಗಿದ ಎನ್‌ಸಿಪಿ -ಎಸ್‌ಪಿ ಶಾಸಕ ಜಿತೇಂದ್ರ ಅಹ್ವಾದ್ ಅವರು ತಿರುಗೇಟು ನೀಡಿದ್ದಾರೆ. ಒಂದು ಪಕ್ಷ ಗೆದ್ದ ಬಳಿಕ ಅದರಲ್ಲೂ ಆಡಳಿತ ಪಕ್ಷ ಗೆದ್ದರೆ ಇವಿಎಂ ತಿರುಚಿ ಗೆದ್ದಿದ್ದಾರೆ ಎಂದು ಬಿಡುತ್ತಾರೆ ಎಂದು ಅವರು ಒಂದಷ್ಟು ಸಂಶಯಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಮಹಾಯುತಿ ಅಮೋಘ ಗೆಲುವು ಸಾಧಿಸಿದ್ದಕ್ಕೆ ಕೆಲವು ಪರಾಜಿತ ಅಭ್ಯರ್ಥಿಗಳ ಮಂತ್ರಯಂತ್ರಗಳ ಹಲವು ಪ್ರಶ್ನಾರ್ಥಕ ಚಿಹ್ನೆಗಳು ಮೂಡಿವೆ. ಆದರೆ ಅಂತಹ ಕೆಲಸ ಆಗಿಲ್ಲ. ನಾವು ಶಿಷ್ಟಾಚಾರ ಪಾಲಿಸಿದ್ದೇವೆ.
ಕಳೆದ ಆಗಸ್ಟ್ ತಿಂಗಳಲ್ಲಿಯೇ ಮತದಾನ ಯಂತ್ರಗಳ ಪ್ರಾಥಮಿಕ ಪರಿಶೀಲನೆ ನಡೆದಿತ್ತು. ಚುನಾವಣಾ ಆಯೋಗ ನೀಡುವ ಸೂಕ್ತ ಮಾರ್ಗಸೂಚಿಯಂತೆ ನಡೆದಿಕೊಳ್ಳಲಾಗುತ್ತಿದೆ. ಇದರ ಮೇಲ್ವೀಚಾರಣೆಗೆ ಆದ್ಯತೆ ನೀಡಲಾಗಿದೆ. 25 ಜನರ ತಂಡವು ಇವಿಎಂ ಕೆಲಸದಲ್ಲಿ ನಿರತರಾಗಿದ್ದರು. ಸೂಚನೆ ಬಂದ ಕೂಡಲೇ ಮೊದಲ ದಿನದಿಂದಲೇ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಲೇ ಬಂದಿದೆ ಎಂದರು.
ಇವಿಎಂ ಪರಿಶೀಲನೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಅಂಗೀಕರಿಸುತ್ತದೆ. ಆಯೋಗ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಿದೆ. ಒಂದು ವೇಳೆ ಚುನಾವಣಾ ಅಧಿಕಾರಿಗಳಿಂದ ಯಡವಟ್ಟುಗಳು ಆದರೆ ಅದನ್ನು ಗಮನಕ್ಕೆ ತನ್ನಿ ಅಂತಲೂ ಸೂಚನೆ ನೀಡಿದ್ದೇ. ಯಾವುದೇ ತೊಂದರೆ ಆದರೂ ನಿವಾರಿಸಲು ಸೂಕ್ತವಾಗಿ ಗಮನ ಹರಿಸಿದ್ದೇವೆ.
ಚುನಾವಣೆ ವೇಳೆ ಪ್ರತಿ ಬಾರಿ ಮತಯಂತ್ರಗಳನ್ನು ಸೂಕ್ತ ರೀತಿಯಲ್ಲಿ ಸಾಗಿಸುವುದು ಮುಖ್ಯ ಗುರಿಯಾಗಿರುತ್ತದೆ. ಚುನಾವಣಾ ಆಯೋಗದ ಅಧಿಕಾರಿಗಳು, ನಾವೆಲ್ಲರು ಪ್ರೋಟೋಕಾಲ್ ಅನುಸರಿಯೇ ಈ ಎಲ್ಲ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಮುಖ್ಯವಾಗಿ ಪೊಲೀಸರ ಬೆಂಗಾವಲು ವಾಹನ ಸಹಿತ ಇವಿಎಂ ಮತಯಂತ್ರಗಳನ್ನು ಹೊತ್ತು ಸ್ಟ್ರಾಂಗ್ ರೂಮಿನಲ್ಲಿ ಇಡಲಾಗುತ್ತದೆ. ಬಳಿಕ ಅವನ್ನೆ ಎಣಿಕೆ ಮಾಡಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಪ್ರಕ್ರಿಯೆಗೆ ಒಳಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿರುತ್ತದೆ. ಇದರಲ್ಲಿ ಸಂದೇಹ ಬೇಡ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications