RCB ಅಂದಿದ್ದು, ಬಿಜೆಪಿಗೆ ಆಗಿದ್ದು: ಇದುವೇ ರಿಯಲ್ ಹೊಸ ಅಧ್ಯಾಯ: ನ್ಯೂ ಚಾಪ್ಟರ್ ಬಿಗಿನ್
ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದಿದೆ. ಭಾರತದಲ್ಲಿ ಚುನಾವಣೆಗಳ ಫಲಿತಾಂಶ ಹೊರ ಬಿದ್ದಿದೆ. ಈಗ ಎಲ್ಲಿ ನೋಡಿದರೂ ಯಾರಿಗೆ ಯಾವ ಖಾತೆ ಎಂಬ ಚರ್ಚೆ ಆರಂಭವಾಗಿದೆ. ಈ ಬೆನ್ನಲ್ಲೆ ಆರ್‌ಸಿಬಿ ಅನ್ ಬಾಕ್ಸ್ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿದ್ದ ಮಾತು ಎಲ್ಲರಿಗೂ ನೆನಪಾಗುತ್ತಿದೆ.
ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದೇ ಐಪಿಎಲ್ ಆರಂಭಿಸಿದ್ದ ಆರ್‌ಸಿಬಿ ಆರಂಭದಲ್ಲಿ ಮುಗ್ಗರಿಸಿ ಬಿದ್ದಿತ್ತು. ಆದರೆ ಬಳಿಕ ಭರ್ಜರಿ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತಹ ಪ್ರದರ್ಶನ ನೀಡಿ, ಎಲಿಮಿನೇಟರ್‌ಗೆ ಕ್ವಾಲಿಫೈ ಆಗಿತ್ತು. ಹಾಗೆ ಬಿಜೆಪಿ ಸಹ ಫಲಿತಾಂಶ ಬರುವ ಮುನ್ನವೇ ಅಬಕಿ ಬಾರ್ 400 ಪಾರ್ ಎಂದೇ ಹೇಳುತ್ತಿತ್ತು. ಆದರೆ ಫಲಿತಾಂಶ ಹೊರ ಬಿದ್ದ ಮೇಲೆ ಹಮ್ ಬನಾಯೆಂಗೆ ಸರ್ಕಾರ್ (ನಾವು ಸರ್ಕಾರ ರಚಿಸುತ್ತೇವೆ) ಎಂದು ಬಿಜೆಪಿ ಹೇಳುತ್ತಿದೆ.

ಕಳೆದ ಒಂದು ವಾರದಲ್ಲಿ ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ರೀತಿ ಆಗಿದೆ. ಹೀಗಾಗಿ ಬಿಜೆಪಿ ಸರ್ಕಾರ ರಚಿಸುವ ಬಿಸಿಬಿಸಿ ಬಾಂಡಲಿಗೆ ಬಿದ್ದು ಬಿಟ್ಟಿದೆ. ನಿಜಕ್ಕೂ ಬಿಜೆಪಿಗೆ ಈಗ ಸಮಿಶ್ರ ಸರ್ಕಾರದ ಎಫೆಕ್ಟ್ ನಿಜಕ್ಕೂ ಅರ್ಥವಾಗಲಿದೆ.
ಮಾಮಾಗೆ ಬುಲಾವ್
ತಾನು ಅಂದುಕೊಂಡಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡಾ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಇವರು ರಾಜೀನಾಮೆ ನೀಡಿದರೆ ಈ ದೊಡ್ಡ ಹುದ್ದೆಯನ್ನು ಅಲಂಕರಿಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಪ್ಲ್ಯಾನ್ ಬಿ ಸಹ ಬಿಜೆಪಿ ಬಳಿ ರೆಡಿ ಇದ್ದಹಾಗೆ ಕಾಣುತ್ತಿದೆ.
ಮಧ್ಯಪ್ರದೇಶದಲ್ಲಿ ಸುಭದ್ರ ಸರ್ಕಾರ ನಡೆಸಿರುವ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಅಧ್ಯಕ್ಷ ಗಾದಿಯ ಮೇಲೆ ಹೈಕಮಾಂಡ್ ಕುಡಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಒಂದು ವೇಳೆ ಹೀಗೆ ಆದಲ್ಲಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೈ ತಪ್ಪಬಹುದು. ಹೀಗಾಗಿ ಬಿಜೆಪಿ ಅಳೆದು ತೂಗಿ ಖಾತೆಗಳನ್ನು ಹಂಚುವ ಕಾರ್ಯಕ್ಕೆ ಮುಂದಾಗುತ್ತಿದೆ.

400ರ ಕನಸು
ಬಿಜೆಪಿ 400 ಸ್ಥಾನಗಳನ್ನು ಗೆದ್ದು ಹೊಸ ಅಧ್ಯಾಯ ಬರೆಯುವ ಹುಮ್ಮಸ್ಸಿನಲ್ಲಿತ್ತು. ಆದರೆ ಅದರ ಕಸನಿಗೆ ಫಲಿತಾಂಶ ಬ್ರೇಕ್ ಹಾಕಿದೆ. ಅಲ್ಲದೆ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ನೀಡದೇ ಇರುವು ಮತದಾರ ತನ್ನದೇ ಒಂದು ಲೆಕ್ಕಾಚಾರ ನೀಡಿದ್ದಾನೆ. ಈಗೇನಿದ್ದರೂ ಮೋದಿ ಮುಂದಿನ ಐದು ವರ್ಷಗಳಲ್ಲಿ ಎಂತಹ ಸರ್ಕಾರ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದ ರೀತಿಯೇ ಬೇರೆಯದ್ದಾಗಿದೆ. ಈಗ ಸರ್ಕಾರ ನಡೆಸುವ ರೀತಿಯೇ ಚಾಲೆಂಜ್ ಆಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನೂತುನ ಸರ್ಕಾರದ ಪ್ರಧಾನ ಮಂತ್ರಿಗಳ ಮೇಲೆ ಇರಲಿದೆ. ಮೊದಲು ಪ್ರಧಾನಿ ಹೇಗೆ ಮಾತನಾಡಿದರೂ ಪಕ್ಷದವರು ಮೇಜು ತಟ್ಟುತ್ತಿದ್ದರು. ಆದರೆ ಈಗಿನ ಸರ್ಕಾರದಲ್ಲಿ ಅಪಸ್ವರಗಳು ಸಹ ಕೇಳಿ ಬರುವ ಸಾಧ್ಯತೆ ಅಲ್ಲ ಗೆಳೆಯುವಂತಿಲ್ಲ.











Click it and Unblock the Notifications