ನಟ ದಿಲೀಪ್ ಗೆ ಕ್ಲೀನ್ ಚಿಟ್ ನೀಡಿಲ್ಲ ː ಪೊಲೀಸ್

ಆಲುವ(ಕೇರಳ), ಜೂನ್ 29: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸ್ಟಾರ್ ನಟನಿಗೆ ಬೆದರಿಕೆ ಕರೆಗಳು ಬರತೊಡಗಿರುವ ಸುದ್ದಿ ಓದಿರುತ್ತೀರಿ.

ಈಗ ಈ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೂ ನಿಮಗೂ ಏನು ಸಂಬಂಧ ಏನು? ಎಂದು ಆಳುವ ಪೊಲೀಸರು, ನಟ ದಿಲೀಪ್ ರನ್ನು ಪ್ರಶ್ನಿಸಿದ್ದಾರೆ.

ಸುಮಾರು 13 ಗಂಟೆಗಳ ಕಾಲ ವಿಚಾರಣೆ ಬಳಿಕ ಮಾತನಾಡಿದ ಆಳುವ ಗ್ರಾಮಾಂತರ ಎಸ್ಪಿ ಎ.ವಿ. ಜಾರ್ಜ್, ಈ ಪ್ರಕರಣದಲ್ಲಿ ಸ್ಟಾರ್ ನಟ ದಿಲೀಪ್ ಸೇರಿದಂತೆ ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ ಎಂದಿದ್ದಾರೆ.

Popular Malayalam actor Dileep is not given clean chit in assault case : Police

ಮಲೆಯಾಳಂ ನಟಿ ಅಪಹರಣ, ಕಿರುಕುಳ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲುವ ಪೊಲೀಸ್ ಕ್ಲಬ್ಬಿನಲ್ಲಿ ನಟ ದಿಲೀಪ್, ನಿರ್ದೇಶಕ ನಾದಿರ್‌ ಶಾ, ದಿಲೀಪ್‌ ಅವರ ಮ್ಯಾನೇಜರ್ ಅಪ್ಪುಣ್ಣಿಯವರನ್ನು ವಿಚಾರಣೆಗೊಳಪಡಿಸಲಾಗಿದೆ.

ದಿಲೀಪ್ ಅವರ ಎಸ್ಟೇಟ್ ವ್ಯವಹಾರ, ನಟಿ ಜತೆಗಿನ ಸಂಬಂಧ, ಪಲ್ಸರ್ ಸುನಿ ಜತೆಗಿನ ಸಂಬಂಧದ ಬಗ್ಗೆ ದಿಲೀಪ್ ರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ನಟಿ ಜತೆ ಒಳ್ಳೆ ಸಂಬಂಧವಿಲ್ಲ, ಹಿಂದೊಮ್ಮೆ ಕಿತ್ತಾಟವಾಗಿತ್ತು ಎಂದು ದಿಲೀಪ್ ಹೇಳಿದ್ದಾರೆ. ಪಲ್ಸರ್ ಸುನಿ ಯಾರೆಂದು ಗೊತ್ತಿಲ್ಲ. ಆತನ ಹೆಸರು ಹೇಳಿಕೊಂಡು ನನಗೆ ಬೆದರಿಕೆ ಕರೆಗಳು ಬಂದಿವೆ ಎಂದಿದ್ದಾರೆ.

ಕೊನೆಗೆ ಈ ಬಗ್ಗೆ ಮಾತನಾಡಿದ ಪೊಲೀಸ್ ಎಸ್ಪಿ ಜಾರ್ಜ್, ಮೂವರ ಹೇಳಿಕೆ ಪಡೆಯಲಾಗಿದೆ. ಮೂವರನ್ನು ಒಟ್ಟಿಗೆ ನಂತರ ಬೇರೆ ಬೇರೆಯಾಗಿ ವಿಚಾರಣೆಗೊಳಪಡಿಸಲಾಗಿದೆ. ಈ ವಿಚಾರಣೆ ನಂತರ ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ. ತನಿಖೆಗೆ ಸಹಕರಿಸುವುದಾಗಿ ಮೂವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+