Viral: ಕೂಲಿ ಕೆಲಸ ಮಾಡುತ್ತಲೇ ಕಷ್ಟಪಟ್ಟು ಓದಿದ ಹುಡುಗ, ಇಂದು ಕೇಂದ್ರ ಸರ್ಕಾರಿ ಉದ್ಯೋಗಿ: ಇದು ಕಣ್ಣೀರ ಕಥೆ

ವ್ಯಕ್ತಿಯೊಬ್ಬರು ಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಸರ್ಕಾರಿ ನೌಕರಿಯನ್ನು ಪಡೆದುಕೊಂಡು ಈಗ ನೆಮ್ಮದಿಯ ಜೀವನ ನಡೆಸುತ್ತಿರುವ ಬಗೆಗಿನ ಕತೆ ಇದು. ಕೇವಲ 900 ರೂಪಾಯಿಗಳ ಶಾಲಾ ಪ್ರವಾಸಕ್ಕೆ ಹೋಗುವುದಕ್ಕೂ ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಕಡು ಬಡತನದ ಜೀವನ. ಊಟ ಸಿಗುವುದೇ ಕಷ್ಟ ಎನ್ನುವಾಗ ಶಾಲಾ ಪ್ರವಾಸದ ಕನಸು ಎಲ್ಲಿಂದ ನೆರವೇರಬೇಕು. ಆದ್ರೆ, ಈಗ ಇವರು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ವ್ಯಕ್ತಿಯ ಸಹಪಾಠಿ ಅಂಕಿತ್ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ಈ ಕಥೆಯನ್ನು ಶೇರ್‌ ಮಾಡಿದ್ದಾರೆ.

ಫೀಸ್‌ ಕಟ್ಟುವುದಕ್ಕೂ ಕಷ್ಟದ ಸ್ಥಿತಿ

ಒಂದು ಕಾಲದಲ್ಲಿ ಅವರ ಕುಟುಂಬಕ್ಕೆ ಶಾಲೆಗೆ ಹೋಗಲು ಕೂಡಾ ಹಣ ಇರುತ್ತಿರಲಿಲ್ಲ. ಫೀಸ್‌ ಕಟ್ಟುವುದೂ ಸಾಧ್ಯವಾಗುತ್ತಿರಲಿಲ್ಲ. ಹಣದ ತೊಂದರೆ ಇವರ ಕುಟುಂಬವನ್ನು ಕಾಡ್ತಾ ಇತ್ತು. ಆದರೆ, ಎಲ್ಲಾ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ಅವರು ತಮ್ಮ ಓದನ್ನು ನಿಲ್ಲಿಸಲಿಲ್ಲ. ಕಷ್ಟಪಟ್ಟು ಓದಿದರು. SSC CGL ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಜೀವನವನ್ನು ಬದಲಾಯಿಸಿಕೊಂಡರು. ಈ ಪೋಸ್ಟ್ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Poor Labourer Son

ಮಧ್ಯಾಹ್ನದ ಊಟಕ್ಕೆ ಚಪಾತಿ ಉಪ್ಪಿನಕಾಯಿ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂ ಎಕ್ಸ್‌ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅಂಕಿತ್ ಪಾಂಡೆ ಎಂಬ ಬಳಕೆದಾರ, ಒಮ್ಮೆ ಶಾಲೆಯಿಂದ ಪ್ರವಾಸವನ್ನು ಆಯೋಜಿಸಿದ್ದರು. ಪ್ರವಾಸಕ್ಕೆ ಹೋಗಬೇಕಾದರೆ ಪ್ರತಿಯೊಬ್ಬರೂ 900 ರೂಪಾಯಿ ಕೊಡಬೇಕಾಗಿತ್ತು. ಆದರೆ ತನ್ನ ಸಹಪಾಠಿಯ ಬಳಿ ಪ್ರವಾಸಕ್ಕೆ ಕೊಡಲು 900 ರೂಪಾಯಿ ಇರಲಿಲ್ಲ ಎಂದು ಬರೆದಿದ್ದಾರೆ. ನಾವೆಲ್ಲರೂ ಮಧ್ಯಾಹ್ನದ ಊಟಕ್ಕೆ ಬೇರೆ ಬೇರೆ ರೀತಿಯ ಆಹಾರವನ್ನು ತರುತಿದ್ದೆವು. ಆದರೆ ಅವರು ಮಾತ್ರ ದಿನಾಲೂ ಉಪ್ಪಿನಕಾಯಿ ಮತ್ತು ಚಪಾತಿ ತರ್ತಾ ಇದ್ರು. ಅವರ ಬಳಿ ಹಳೆಯ ಪುಸ್ತಕಗಳಿದ್ದವು, ಹೊಸ ಸ್ಕೂಲ್‌ ಬ್ಯಾಗ್‌ ಇರಲಿಲ್ಲ. ಯಾವಾಗಲೂ ತರಗತಿಯಲ್ಲಿ ಅತ್ಯಂತ ಶಾಂತವಾಗಿರುತ್ತಿದ್ದರು ಎಂದು ಪಾಂಡೆ ಹೇಳಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ತಂದೆ

ತಿಂಗಳಿಗೆ 4,000 ರೂಪಾಯಿ ಸ್ಕೂಲ್‌ ಫೀಸ್‌ ಕಟ್ಟಬೇಕಾಗಿತ್ತು. ಇದನ್ನು ಭರಿಸುವುದಕ್ಕೆ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಆದರೂ ಅವರು ಯಾವತ್ತೂ ಛಲ ಬಿಡಲಿಲ್ಲ. ಕಠಿಣ ಪರಿಸ್ಥಿತಿಗಳನ್ನು ಎದುರಿಸಿದರು. ಅಧ್ಯಯನವನ್ನು ಮುಂದುವರೆಸಿದರು. ಒಂದು ಕಾಲದಲ್ಲಿ ಸಾಧ್ಯವೇ ಇಲ್ಲ ಅಂದುಕೊಂಡಿದ್ದ ಕೆಲಸವನ್ನು ಸಾಧಿಸಿ ತೋರಿಸಿದರು. ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇವತ್ತು ಕೇಂದ್ರ ಸರ್ಕಾರಿ ನೌಕರ. ಸ್ವಂತ ಮನೆಯನ್ನು ಕಟ್ಟಿಸ್ತಾ ಇದ್ದಾರೆ ಎಂದು ಪಾಂಡೆ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಕಠಿಣ ಪರಿಶ್ರಮಕ್ಕೆ ತಕ್ಕ ಫಲ

ನಾನು ಅವರ ಜೀವನ ಪ್ರಯಾಣವನ್ನು ಹತ್ತಿರದಿಂದ ನೋಡಿದ್ದೇನೆ. ಮಧ್ಯಾಹ್ನ ಟಿಫಿನ್‌ ಬಾಕ್ಸ್‌ನ ಉಪ್ಪಿನಕಾಯಿ ಮತ್ತು ಚಪಾತಿಯಿಂದ ಹಿಡಿದು ಇವತ್ತು ಸ್ವಂತ ಮನೆ ಕಟ್ಟುವವರೆಗಿನ ಪ್ರತೀ ಹಂತ ಗೊತ್ತಿದೆ. ಜೀವನವು ಆರಂಭದಲ್ಲಿ ಅವನಿಗೆ ಯಾವುದನ್ನೂ ಕೊಡಲಿಲ್ಲ. ಆದರೂ ಕಷ್ಟಪಡುವುದನ್ನು ಅವರು ನಿಲ್ಲಿಸಲೂ ಇಲ್ಲ. ಒಂದಲ್ಲ ಒಂದು ದಿನ ಸುಖ ಸಿಗುವುದು ಎನ್ನುವ ನಂಬಿಕೆಯೊಂದಿಗೆ ಮುಂದುವರೆದರು. ಅವರ ಕಠಿಣ ಪರಿಶ್ರಮ ಇಡೀ ಜೀವನವನ್ನು ನಿಜವಾಗಿಯೂ ಬದಲಾಯಿಸಿದೆ ಎಂದು ಪಾಂಡೆ ಹೇಳಿದರು.

ಜನರ ಪ್ರತಿಕ್ರಿಯೆ ಹೀಗಿತ್ತು

ಒಬ್ಬ ಬಳಕೆದಾರರು ಎಂತಹ ಸುಂದರವಾದ ಕಥೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇಚ್ಛಾಶಕ್ತಿ ಬಲವಾಗಿದ್ದಾಗ, ಯಾವುದೇ ಅಡೆತಡೆಗಳು ಬಂದರೂ ನಿವಾರಿಸಬಹುದು ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಬದಲಾಯಿಸಬಹುದು ಎಂದು ಬರೆದಿದ್ದಾರೆ. ಇದು ಹೃದಯಸ್ಪರ್ಶಿ ಯಶಸ್ಸಿನ ಕಥೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ. ಉಪ್ಪಿನಕಾಯಿ ಮತ್ತು ಚಪಾತಿಯಿಂದ ಸ್ವಂತ ಮನೆಯನ್ನು ಕಟ್ಟುವವರೆಗಿನ ಪ್ರಯಾಣವು ನಿಜವಾಗಿಯೂ ವಿಶೇಷವಾಗಿದೆ ಎಣದು ಅವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+