ನಾಲ್ಕು ಹೆಂಡ್ತೀರು ಯಾಕೆ ಎಂದ ಸಚಿವರಿಗೆ ಓವೈಸಿ ತಿರುಗೇಟು
ನವದೆಹಲಿ, ಡಿಸೆಂಬರ್ 10: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಕಡಿತದ ಆರೋಪವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ತಳ್ಳಿ ಹಾಕಿದ್ದಾರೆ. ಬಿಜೆಪಿ ಗೆಲ್ಲಲು ಕಾರಣ ಅವರು ಹೆಚ್ಚು ಹಿಂದೂಗಲ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು ಕಟುವಾಗಿ ಟೀಕಿಸಿದರು. ಈಗ ರಾಜಕೀಯ ಹೋರಾಟವು ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಿದರು. ಪ್ರಧಾನಿ ಮೋದಿಗಿಂತ "ದೊಡ್ಡ ಹಿಂದೂ" ಯಾರು ಎಂಬುದೇ ರಾಜಕೀಯ ಪೈಪೋಟಿಯ ವಿಷಯವಸ್ತುವಾಗಿ ಬಿಟ್ಟಿದೆ ಎಂದು ಆರೋಪಿಸಿದರು.
ಅವರು ಹೆಚ್ಚು ಹಿಂದೂಗಳ ಮತಗಳನ್ನು ಪಡೆಯುತ್ತಿರುವುದರಿಂದ ಬಿಜೆಪಿ ಗೆಲ್ಲುತ್ತಿದೆ. ಬಿಜೆಪಿ ಎಂದಿಗೂ ತೆಲಂಗಾಣ, ಹೈದರಾಬಾದ್ ಅಥವಾ ಕೇರಳದಂತಹ ರಾಜ್ಯಗಳಿಗೆ ಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಸಾದುದ್ದೀನ್ ಓವೈಸಿ ಹೇಳಿದರು,

ಮುಸ್ಲಿಂ ಸಮುದಾಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ
ದೇಶದಲ್ಲಿ ಬಿಜೆಪಿಗೂ ಮುಸ್ಲಿಂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಇದೀಗ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕೂಡಾ ಗೆಲುವಿಗಾಗಿ ಅದೇ ಕೆಲಸವನ್ನು ಮಾಡುತ್ತಿವೆ ಎಂದು ಅಸಾದುದ್ದೀನ್ ಓವೈಸಿ ಆರೋಪಿಸಿದರು. "ಈಗ ಇಡೀ ರಾಜಕೀಯ ಹೋರಾಟವು ಪ್ರಧಾನಿ ಮೋದಿಗಿಂತ ದೊಡ್ಡ ಮಸ್ಲಿನ್ ಯಾರು ಎಂಬುದರ ಸುತ್ತ ತಿರುಗುತ್ತಿದೆ. ಹಾಗಾದರೆ ಭಾರತೀಯ ರಾಷ್ಟ್ರೀಯತೆ ಎಲ್ಲಿಗೆ ಹೋಗುತ್ತದೆ? ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸ್ ಪ್ರಶ್ನಿಸಿದರು.

ನಾಲ್ಕು ಹೆಂಡತಿಯರು ಇರುವುದು ಒಳಿತಲ್ಲ ಎಂದವರಿಗೆ ತಿರುಗೇಟು
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ನಾಲ್ವರು ಪತ್ನಿಯರನ್ನು ಹೊಂದುವುದು ಅಸ್ವಾಭಾವಿಕ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವಂತೆ ನಾನು ಗಡ್ಕರಿಗೆ ಸವಾಲು ಹಾಕುತ್ತೇನೆ. ನಿಮ್ಮ ಸಂಸ್ಕೃತಿಯು ಸಂಸ್ಕೃತಿ ಆಗಿರುತ್ತದೆ, ಆದರೆ ನನ್ನ ಸಂಸ್ಕೃತಿಯು ಸಂಸ್ಕೃತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಂ ಸಮುದಾಯದಲ್ಲಿ ಪತ್ನಿಯರಿಗೆ ಕಾನೂನುಬದ್ಧ ಹಕ್ಕು
"ಮುಸ್ಲಿಂ ಸಮುದಾಯದಲ್ಲಿ ಪತ್ನಿಯರು ಕಾನೂನುಬದ್ಧ ಪತ್ನಿಯರೇ ಆಗಿರುತ್ತಾರೆ. ಅವರ ಜೀವನದ ನಿರ್ವಹಣೆಯು ಮತ್ತು ಆಸ್ತಿಗಳಲ್ಲಿ ಪಾಲು ನೀಡುವುದರಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅವರು ತಮ್ಮ ಹಕ್ಕುಗಳನ್ನು ಸೂಕ್ತವಾಗಿ ಪಡೆದುಕೊಳ್ಳುತ್ತಾರೆ. ಇಲ್ಲಿ ಯಾವುದೇ ಮಹಿಳೆಯರಿಗೂ ಅನ್ಯಾಯ ಆಗುವುದಿಲ್ಲ," ಎಂದು ಅಸಾದುದ್ದೀನ್ ಓವೈಸಿ ವಾದಿಸಿದರು.

ಏಕರೂಪ ನಾಗರಿಕ ಸಂಹಿತೆ ಓಕೆ, ಲವ್ ಜಿಹಾದ್ ಯಾಕೆ?
ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೂ ಉಲ್ಲೇಖಿಸಿದರು. ದೇಶದಲ್ಲಿ ಬಿಜೆಪಿಗರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಅದೇ ಲವ್ ಜಿಹಾದ್ ಬಗ್ಗೆ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪ್ರಶ್ನೆ ಮಾಡಿದರು. ಲವ್ ಜಿಹಾದ್ ಆಗುವ ಜನರ ಬಗ್ಗೆ ಏಕೆ ಬಿಜೆಪಿಗರು ಟೀಕೆ ಮಾಡುತ್ತಾರೆ ಎಂದು ಓವೈಸಿ ಹೇಳಿದರು.












Click it and Unblock the Notifications