Get Updates
Get notified of breaking news, exclusive insights, and must-see stories!

ಸರ್ಕಾರದ ಹಣದಲ್ಲಿ ಪಕ್ಷದ ಜಾಹೀರಾತು ಆರೋಪ: ದೆಹಲಿ ಎಎಪಿಗೆ 163 ಕೋಟಿ ಕಟ್ಟುವಂತೆ ನೋಟಿಸ್

ನವದೆಹಲಿ, ಜ. 12: ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ರಾಜಕೀಯ ಜಾಹೀರಾತುಗಳನ್ನು ಸರ್ಕಾರಿ ಜಾಹೀರಾತುಗಳ ರೂಪದಲ್ಲಿ ಪ್ರಕಟಿಸಿದೆ ಎಂದು ಆರೋಪಿಸಲಾಗಿದ್ದು, 163.62 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ವಸೂಲಾತಿ ನೋಟಿಸ್ ನೀಡಲಾಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

10 ದಿನಗಳೊಳಗೆ ಆಮ್ ಆದ್ಮಿ ಪಕ್ಷ 163.62 ಕೋಟಿ ಪಾವತಿಸಬೇಕು, ಇಲ್ಲದಿದ್ದರೆ ಅದರ ಕಚೇರಿಯನ್ನು ಸೀಲ್ ಮಾಡಲಾಗುತ್ತದೆ ಎಂದು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ಹೊರಡಿಸಿದ ವಸೂಲಾತಿ ನೋಟಿಸ್ ಎಚ್ಚರಿಕೆ ನೀಡಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ಎಎಪಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ ಹೀಗಾಗಿ ಎಎಪಿಯಿಂದ 97 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು. ಇದಾಗಿ ಸುಮಾರು ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ಎಎಪಿ ಹಣ ಕಟ್ಟದಿದ್ದರೇ ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು!

ಎಎಪಿ ಹಣ ಕಟ್ಟದಿದ್ದರೇ ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು!

ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಹೊರಡಿಸಿರುವ ನೊಟಿಸ್ ಪ್ರಕಾರ ಕೊಟ್ಟಿರುವ ಕಾಲಾವಕಾಶದಲ್ಲಿ ಹಣ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಣ ಕಟ್ಟಲು ವಿಫಲರಾದರೆ, ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಹಿಂದಿನ ಆದೇಶದಂತೆ ಕಾಲಮಿತಿಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪಾವತಿಸಬೇಕಾದ ಒಟ್ಟು ಮೊತ್ತದ ಪೈಕಿ 99.31 ಕೋಟಿ ರೂಪಾಯಿಗಳು ಮಾರ್ಚ್ 31, 2017 ರವರೆಗೆ ರಾಜಕೀಯ ಜಾಹೀರಾತುಗಳ ಮೇಲಿನ ಅಸಲು ಮೊತ್ತದ ಖಾತೆಯಲ್ಲಿದೆ. ಉಳಿದ 64.31 ಕೋಟಿ ರೂ. ಈ ಮೊತ್ತದ ಮೇಲಿನ ಬಡ್ಡಿಯ ಖಾತೆಯಲ್ಲಿದೆ. ಎರಡು ಸೇರಿ ಒಟ್ಟು 163.62 ಕೋಟಿ ರೂಪಾಯಿಗಳು.

ಅಧಿಕಾರಿಗಳನ್ನು ಗವರ್ನರ್, ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ

ಅಧಿಕಾರಿಗಳನ್ನು ಗವರ್ನರ್, ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ

ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ದೆಹಲಿ ಸರ್ಕಾರವನ್ನು ಗುರಿಯಾಗಿಸಲು ಅಧಿಕಾರಿಗಳನ್ನು ಬಳಸಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

"ದೆಹಲಿ ಸರ್ಕಾರದ ಅಧಿಕಾರಿಗಳನ್ನು ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಯಾವುದೇ ಸಾರ್ವಜನಿಕ ಸೇವಾ ಕಾರ್ಯಗಳನ್ನು ಮಾಡಲು ಅಲ್ಲ, ಆದರೆ ಚುನಾಯಿತ ಮಂತ್ರಿಗಳನ್ನು ಮತ್ತು ಆಡಳಿತಾರೂಢ ಎಎಪಿಯನ್ನು ಗುರಿಯಾಗಿಸಲು" ಎಂದಿದ್ದಾರೆ.

''ಬಿಜೆಪಿಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜಾಹೀರಾತುಗಳು ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಸಿಎಂಗಳ ಫೋಟೋ ಇರುವ ಸರ್ಕಾರಿ ಹೋರ್ಡಿಂಗ್‌ಗಳನ್ನು ದೆಹಲಿಯಾದ್ಯಂತ ಹಾಕಲಾಗಿದೆ. ಅವರ ವೆಚ್ಚವನ್ನು ಬಿಜೆಪಿ ಮುಖ್ಯಮಂತ್ರಿಗಳಿಂದ ವಸೂಲಿ ಮಾಡಲಾಗುತ್ತದೆಯೇ..? ಅದಕ್ಕಾಗಿಯೇ ದೆಹಲಿಯ ಅಧಿಕಾರಿಗಳನ್ನು ಅಸಂವಿಧಾನಿಕ ನಿಯಂತ್ರಣದಲ್ಲಿಡಲು ಬಿಜೆಪಿ ಬಯಸುತ್ತಿದೆಯೇ..?" ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯಿಂದ ರಾಜಕೀಯ ಉದ್ದೇಶಗಳಿಗಾಗಿ ದೆಹಲಿ ಅಧಿಕಾರಿಗಳ ಬಳಕೆ

ಬಿಜೆಪಿಯಿಂದ ರಾಜಕೀಯ ಉದ್ದೇಶಗಳಿಗಾಗಿ ದೆಹಲಿ ಅಧಿಕಾರಿಗಳ ಬಳಕೆ

"ದೆಹಲಿ ಜನರಿಗಾಗಿ ಕೆಲಸ ಮಾಡಲು ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಬಿಜೆಪಿ ಅಸಾಂವಿಧಾನಿಕವಾಗಿ ಅಧಿಕಾರಿಗಳನ್ನು ನಿಯಂತ್ರಿಸುತ್ತಿದೆ. ಅವರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ. ಜನರ ಹಿತದೃಷ್ಟಿಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ" ಎಂದು ಆರೋಪಿಸಿದ್ದಾರೆ.

ಚುನಾಯಿತ ಸರ್ಕಾರವನ್ನು ಗುರಿಯಾಗಿಸುವ ಪ್ರಯತ್ನವನ್ನು ನೋಟಿಸ್ ಎಂದು ಕರೆದ ಮನೀಶ್ ಸಿಸೋಡಿಯಾ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಂದ ಹಣವನ್ನು ವಸೂಲಿ ಮಾಡುವಂತೆ ಬಿಜೆಪಿ ಏಕೆ ಅಧಿಕಾರಿಗಳಿಗೆ ಕೇಳುತ್ತಿಲ್ಲ..? ಅಧಿಕಾರಿಗಳು ಜನರಿಗಾಗಿ ಕೆಲಸ ಮಾಡಬೇಕೆಂದು ಕೇಜ್ರಿವಾಲ್ ಬಯಸುತ್ತಾರೆ, ಆದರೆ ಬಿಜೆಪಿ ಚುನಾಯಿತ ಮುಖ್ಯಮಂತ್ರಿಯನ್ನು ಗುರಿಯಾಗಿಸಲು ಅಧಿಕಾರಿಗಳನ್ನು ಬಳಸಲು ಬಯಸುತ್ತದೆ ಎಂದಿದ್ದಾರೆ.

ಹಣವನ್ನು ಕಟ್ಟುವವರೆಗೂ ಆಪ್ ಖಾತೆ ಸ್ಥಗಿತಗೊಳಿಸಲಿ: ಬಿಜೆಪಿ

ಹಣವನ್ನು ಕಟ್ಟುವವರೆಗೂ ಆಪ್ ಖಾತೆ ಸ್ಥಗಿತಗೊಳಿಸಲಿ: ಬಿಜೆಪಿ

ನೋಟಿಸ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ಜನತಾ ಪಕ್ಷದ ಸಂಸದ ಮತ್ತು ಮಾಜಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಮತ್ತು ಆಮ್ ಆದ್ಮಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಸಾರ್ವಜನಿಕ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯವು ಕೇಜ್ರಿವಾಲ್‌ಗೆ 163.61 ಕೋಟಿ ರೂಪಾಯಿ ದಂಡ ವಿಧಿಸಿದ್ದು, ವಸೂಲಾತಿ ನೋಟಿಸ್ ಕಳುಹಿಸಿದೆ. ಈ ಹಣವನ್ನು ಹಿಂದಿರುಗಿಸುವವರೆಗೆ ಆಮ್ ಆದ್ಮಿ ಪಕ್ಷದ ಖಾತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ದೆಹಲಿ ಬಿಜೆಪಿ ಆಗ್ರಹಿಸಿದೆ.

"ಕೇಜ್ರಿವಾಲ್ ಮತ್ತು ಅವರ ಪಕ್ಷವು ದೆಹಲಿಯ ಸರ್ವತೋಮುಖ ಅಭಿವೃದ್ಧಿಗೆ ಮೀಸಲಾದ ಹಣವನ್ನು ತಮ್ಮ ಪಕ್ಷ ಮತ್ತು ಇತರ ರಾಜ್ಯಗಳಲ್ಲಿನ ಅದರ ನಾಯಕರ ವರ್ಚಸ್ಸು ಹೆಚ್ಚಿಸಲು ಖರ್ಚು ಮಾಡಿದೆ" ಎಂದು ಮನೋಜ್ ತಿವಾರಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+