ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿ ಸೇರಿದ ಪೊಲೀಸ್ ಇನ್ಸ್‌ಪೆಕ್ಟರ್‌ಗಳು: ಗಾಬರಿಗೊಂಡ ಎಂಕೆ ಸ್ಟಾಲಿನ್ ಮಾಡಿದ್ದೇನು ಗೊತ್ತೇ?

ತಂಜಾವೂರು, ಜನವರಿ 04: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಆರೋಪದ ಮೇಲೆ ತಮಿಳುನಾಡು ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳನ್ನು ಬುಧವಾರ ರಾಜ್ಯ ಸಶಸ್ತ್ರ ಪಡೆಗಳಿಗೆ ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡ ಸಬ್ ಇನ್ಸ್‌ಪೆಕ್ಟರ್‌ಗಳನ್ನು ರಾಜೇಂದ್ರನ್ ಮತ್ತು ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ.

ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ರಾಜ್ಯಾದ್ಯಂತ ನಡೆಯುತ್ತಿರುವ 'ಎನ್ ಮನ್ ಎನ್ ಮಕ್ಕಳ್' (ನನ್ನ ಮಣ್ಣು, ನನ್ನ ಜನರು) ಯಾತ್ರೆಯ ಭಾಗವಾಗಿ ತಂಜಾವೂರು ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲೆಗೆ ಭೇಟಿ ನೀಡಿದ ವೇಳೆ, ಅವರ ಸಮ್ಮುಖದಲ್ಲಿ ಇನ್ಸ್‌ಪೆಕ್ಟರ್‌ ಬಿಜೆಪಿಗೆ ಸೇರ್ಪಡೆಗೊಂಡರು ಎಂದು ತಿಳಿದುಬಂದಿದೆ.

Police Inspectors transferred after joining BJP in presence of party’s Tamil Nadu chief Annamalai

ಡಿಸೆಂಬರ್ 27 ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಅಣ್ಣಾಮಲೈ ಅವರ ಯಾತ್ರೆಯ ವೇಳೆ ಭದ್ರತೆಗಾಗಿ ಈ ಪೊಲೀಸ್‌ ಅಧಿಕಾರಿಗಳು ನಿಯೋಜನೆಗೊಂಡಿದ್ದರು. ವರ್ಗಾವಣೆಗೊಂಡ ಎಸ್‌ಐಗಳಾದ ರಾಜೇಂದ್ರನ್ ಮತ್ತು ಕಾರ್ತಿಕೇಯನ್ ಅವರು ಪೊಲೀಸ್ ಸಮವಸ್ತ್ರದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಣ್ಣಾಮಲೈ ಯಾತ್ರೆ ವೇಳೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.

Police Inspectors transferred after joining BJP in presence of party’s Tamil Nadu chief Annamalai

ಈ ಘಟನೆಯ ಹಿನ್ನೆಲೆಯಲ್ಲಿ ತಂಜಾವೂರು ಡಿಐಜಿ ವಿಶೇಷ ಪೊಲೀಸ್ ಸಹಾಯಕ ನಿರೀಕ್ಷಕರಾದ ರಾಜೇಂದ್ರನ್ ಮತ್ತು ಕಾರ್ತಿಕೇಯನ್ ಇಬ್ಬರನ್ನೂ ನಾಗಪಟ್ಟಿಣಂ ಸಶಸ್ತ್ರ ಪಡೆ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಡಿಐಜಿ ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯದ ನೀಲಗಿರಿ ಜಿಲ್ಲಾ ಪೊಲೀಸ್‌ ಕಾನ್‌ಸ್ಟೇಬಲ್‌ ಗಣೇಶನ್ ಎಂದು ಅವರು ಅಣ್ಣಾಮಲೈ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಈ ಘಟನೆಯ ನಂತರ ಕಾನ್‌ಸ್ಟೆಬಲ್ ಕೂಡ ಸಶಸ್ತ್ರ ಪಡೆಗೆ ವರ್ಗಾವಣೆಗೊಂಡಿದ್ದರು.

ದಯಾನಿಧಿ ಮಾರನ್‌ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಬಿಜೆಪಿ ಐಟಿ ವಿಭಾಗವನ್ನು 'ಉದ್ಯೋಗವಿಲ್ಲದ ಕ್ಷೌರಿಕ' ಎಂದು ಕರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಣ್ಣಾಮಲೈ ಅವರು ಸೋಮವಾರ ಸೆಂಟ್ರಲ್‌ ಚೆನ್ನೈ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Police Inspectors transferred after joining BJP in presence of party’s Tamil Nadu chief Annamalai

'ವೃತ್ತಿ ಅಥವಾ ಭಾಷೆ ಮೂಲಕ ಮತ್ತೊಬ್ಬರನ್ನು ಕೀಳಾಗಿ ನೋಡುವುದೊಂದೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಶ್ರೇಷ್ಠತೆ ತೋರುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ದಯಾನಿಧಿ ಮಾರನ್, ಬಿಜೆಪಿ ಐಟಿ ವಿಭಾಗವನ್ನು 'ಉದ್ಯೋಗವಿಲ್ಲದ ಕ್ಷೌರಿಕ' ಎಂದು ಕರೆದಿದ್ದಾರೆ. 'ಕ್ಷೌರಿಕನಿಗೆ ಕೆಲಸವಿಲ್ಲದಿದ್ದರೆ ಅವನು ಬೆಕ್ಕನ್ನು ಕ್ಷೌರ ಮಾಡುತ್ತಾನೆ' ಎಂಬ ಗಾದೆ ತಮಿಳಿನಲ್ಲಿದೆ. ಅದೇ ರೀತಿ, ಬಿಜೆಪಿ ಐಟಿ ವಿಭಾಗಕ್ಕೆ ಏನೂ ಕೆಲಸವಿಲ್ಲ. ಆದ್ದರಿಂದ ಅದು ನನ್ನ ಹಳೆಯ ವಿಡಿಯೊಗಳನ್ನು ಹರಿಬಿಡುತ್ತಿದೆ ಎಂದು ಮಾರನ್ ಭಾನುವಾರ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ದೇಶದಾದ್ಯಂತ ವಿವಾದದ ಕಿಡಿಯನ್ನು ಹೊತ್ತಿಸಿತ್ತು. ಉತ್ತರ ಭಾರತದ ವಿವಿಧ ರಾಜಕೀಯ ನಾಯಕರು ದಯಾನಿಧಿ ಮಾರನ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ದಯಾನಿಧಿ ಮಾರನ್‌ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+