ಆಭರಣ ಮಳಿಗೆಗೆ ಗನ್ ಸಮೇತ ನುಗ್ಗಿದ 9 ದರೋಡೆಕೋರರು: ₹25 ಕೋಟಿಯ ಚಿನ್ನಾಭರಣ, ನಗದು ಲೂಟಿ: CCTV
ಬಿಹಾರ ರಾಜ್ಯದಲ್ಲಿ ಗೂಂಡಾಗಳ ವರ್ತನೆ ಮಿತಿ ಮೀರಿದೆ ಎಂದು ವಿಪಕ್ಷಗಳು ದೂರಿದ ಬೆನ್ನಲ್ಲೆ ಇಲ್ಲಿನ ರಾಜ್ಯದ ಅರ್ರಾನನಲ್ಲಿರುವ ಗೋಪಾಲಿ ಚೌಕ್ ತಾನಿಷ್ಕ್ ಆಭರಣ ಮಳಿಗೆ ಶೋರೂಂ ಒಂದರಲ್ಲಿ ಸಿನಿಮೀಯ ಶೈಲಿಯಲ್ಲಿ ಬೃಹತ್ ದರೋಡೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ನುಗ್ಗಿದ ಬಂದೂಕು, ಶಸ್ತ್ರ ಸಜ್ಜಿತ ದರೋಡೆಕೋರರ ಗುಂಪು ಗ್ರಾಹಕರು ಮತ್ತು ಜುವೆಲ್ಲರಿ ಮಳಿಗೆ ಸಿಬ್ಬಂದಿಗೆ ಗನ್ ಪಾಯಿಂಟ್ ಇಟ್ಟು ಹೆದರಿಸಿದ್ದಾರೆ. ಈ ಘಟನೆ ಮಾರ್ಚ್ 11ರಂದು ನಡೆದಿದೆ. 25 ಕೋಟಿ ಬೆಲೆ ಬಾಳುವ ಆಭರಣ, ನಗದು ಕದ್ದು ಪರಾರಿ ಆದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ಬಿಹಾರದ ತನಿಷ್ಕ್ ಶೋರೂಂಗೆ ನುಗ್ಗಿದ ದರೋಡೆಕೋರರು ಗನ್ ತೋರಿಸಿ ಬರೋಬ್ಬರಿ 25 ಕೋಟಿ ರೂ. ಮೌಲದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಒಟ್ಟು 09 ಮಂದಿ ಬಂದಿದ್ದರು ಎನ್ನಲಾಗಿದೆ. ಅವರು ಗನ್ ತೋರಿಸಿ ಕೈಗೆ ಸಿಕ್ಕ ಒಡೆವೆಗಳನ್ನು ದೋಚುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಗೂಂಡಾ ರಾಜ್ಯ ಎಂಬ ಬಿಹಾರ ವಿಪಕ್ಷ ನಾಯಕರಿಗೆ ಪೊಲೀಸರು ದರೋಡೆ ಕೋರರನ್ನು ಬಂಧಿಸುವ ಮೂಲಕ ಉತ್ತರ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆನ್ನಟ್ಟಿದ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ತಡರಾತ್ರಿ, ಚೆಕ್‌ಪಾಯಿಂಟ್‌ನಲ್ಲಿ ದರೋಡೆಕೋರರನ್ನು ತಡೆದ ಪೊಲೀಸರು ಮಧ್ಯೆ ದರೋಡೆಕೋರರ ಗುಂಪಿನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಈ ವೇಳೆ ಪೊಲೀಸರ ದಾಳಿಗೆ ಪ್ರತಿದಾಳಿಗೆ ದರೋಡೆಕೋರರು ಮುಂದಾಗಿ ವಿಫಲವಾಗಿದ್ದಾರೆ. ಕೊನೆಗೆ ಪೊಲೀಸರ ಗುಂಡಿನಿಂದ ಗಾಯಗೊಳ್ಳುತ್ತಿದ್ದಂತೆ ಕೂಡಲೇ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೂಟಿ ಮಾಡಿದ ಒಟ್ಟು ಮೊತ್ತದ ಆಭರಣದಲ್ಲಿ ಶೇಕಡಾ 70 ರಷ್ಟು ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರ ಬೆಚ್ಚಿ ಬೀಳಿಸಿದ್ದ ಪ್ರಕರಣಕ್ಕೆ ಪೊಲೀಸರು ತಾರ್ಕಿಕ ಅಂತ್ಯ ಹಾಕಿದ್ದು, ತನಿಖೆ ಮುಂದುವರಿಸಿದ್ದಾರೆ.
WTH! Why is this not national news?
— Nabila Jamal (@nabilajamal_) March 11, 2025
Rs 25 Cr heist at Tanishq showroom in #Bihar
9 armed robbers storm #TanishqShowroom at Gopali Chowk, Arrah, looting jewellery worth Rs 25 Cr
CCTV captures them wielding guns, holding staff hostage and assaulting two employees with revolvers… pic.twitter.com/Z27zAYnzF2
ವಿಡಿಯೋದಲ್ಲಿ ಏನಿದೆ?
ಸಿಸಿಟಿವಿಯಲ್ಲಿ 09 ಜನರ ದರೋಡೆಕೋರರ ಗುಂಪು ಏಕಾಎಕಿ ಬಂದೂಕುಗಳನ್ನು ಹಿಡಿದು ತಾನಿಷ್ಕ್ ಮಳಿಗೆ ನುಗ್ಗಿದ್ದಾರೆ. ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿರೋಧ ಒಡ್ಡಿದ ಇಬ್ಬರು ಉದ್ಯೋಗಿಗಳ ಮೇಲೆ ಗನ್‌ಗಳಿಂದ ಹಲ್ಲೆ ಮಾಡಿದ್ದಾರೆ. ಮಳಿಗೆ ತಮ್ಮ ನಿಯಂತ್ರಣಕ್ಕೆ ಬರುತ್ತಿದ್ದಂತೆ ನಗದು ಸೇರಿದಂತೆ ಒಟ್ಟು ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣ ದೋಚಿದ್ದಾರೆ.

ಮಳಿಗೆ ನುಗ್ಗಿದಾಗ ಅಲ್ಲಿದ್ದ ಗ್ರಾಹಕರು, ಸಿಬ್ಬಂದಿ ಚೀರಾಡಿದ್ದಾರೆ. ನೋಡ ನೋಡುತ್ತಿದ್ದಂತೆ ದರೋಡೆಕೋರರ ಅಟ್ಟಹಾಸಕ್ಕೆ ಶರಣಾಗಿದ್ದಾರೆ. ಮಳಿಗೆ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳು,ವ್ಯಾಪಾರಿಗಳು ಸೇರಿದಂತೆ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾದರು. ಸದ್ಯ ಪ್ರಕರಣ ತನಿಖೆ ಆರಂಭವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications