• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವಪಕ್ಷ ಸಭೆಯಲ್ಲಿ ಮೋದಿ ಹೇಳಿದ್ದೇನು? ಅಧಿಕೃತ ಹೇಳಿಕೆ ಬಿಡುಗಡೆ

|

ದೆಹಲಿ, ಜೂನ್ 20: ಭಾರತ-ಚೀನಾ ಘರ್ಷಣೆಗೆ ಸಂಬಂಧಪಟ್ಟಂತೆ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆ ಕುರಿತು ಹಲವರು 'ಚೇಷ್ಟೇ' ಮಾಡುತ್ತಿದ್ದಾರೆ ಇಂದು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

   ಕೊರೊನ ಸೋಂಕಿತ MLA ಹೊರಗೆ ಬಂದು ಮತ ಚಲಾಯಿಸಿದ ವಿಚಿತ್ರ ಘಟನೆ | Oneindia Kannada

   'ಚೀನಾ ಸೈನ್ಯವು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿಲ್ಲ' ಎಂದು ಮೋದಿ ಹೇಳಿದ್ದಾರೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೀಗ, ಸರ್ಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, 'ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸುವ ಯಾವುದೇ ಪ್ರಯತ್ನಗಳಿಗೆ ಭಾರತ ದೃಢವಾಗಿದೆ ಸ್ಪಂದಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ.

   ಭಾರತೀಯ ಸೇನಾ ಪಡೆಗಳು ಈಗ ಎಲ್‌ಎಸಿಯ ಯಾವುದೇ ಉಲ್ಲಂಘನೆಯನ್ನು ನಿರ್ಣಾಯಕವಾಗಿ ಎದುರಿಸುತ್ತವೆ ಎಂದು ಮೋದಿ ನಿರ್ದಿಷ್ಟವಾಗಿ ಒತ್ತಿ ಹೇಳಿದರು ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

   ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು

   ಗಡಿ ರೇಖೆ ಉಲ್ಲಂಘನೆ ಕಾರಣದಿಂದ ಜೂನ್ 15 ರಂದು ಗಾಲ್ವಾನ್‌ನಲ್ಲಿ ಹಿಂಸಾಚಾರ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಘಟನೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶಭಕ್ತಿಗೆ ಪ್ರಧಾನಿ ಗೌರವ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ.

   ನಮ್ಮ ಸೈನಿಕರ ದಿಟ್ಟ ಪ್ರದರ್ಶನ ಹಾಗೂ ಹೋರಾಟದಿಂದ ನಮ್ಮ ಗಡಿ ಭಾಗದಲ್ಲಿ ಚೀನಾ ಸೇನೆ ಇಲ್ಲ. ಜೂನ್ 15 ರಂದು ಚೀನಾದ ಕಡೆಯ ಉಲ್ಲಂಘನೆಯ ಪ್ರಯತ್ನಗಳನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ. ಈ ವೇಳೆ 16 ಬಿಹಾರ ರೆಜಿಮೆಂಟ್‌ನ ಸೈನಿಕರ ಪ್ರಾಣ ತ್ಯಾಗ ಮಾಡಬೇಕಾಯಿತು ಎಂದು ತಿಳಿಸಲಾಗಿದೆ.

   ಸೈನಿಕರ ಸ್ಥೈರ್ಯವನ್ನು ಕಡಿಮೆ ಮಾಡಲು ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದೂ ಅದು ಹೇಳಿದೆ.

   English summary
   Government will not allow any unilateral change of the Line of Actual Control (LAC) - Government of India Statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X