ಮೋದಿ ಪಾಲಿಗೆ ಬಜೆಟ್ ಎರಡು ಅಲುಗಿನ ಕತ್ತಿ, ಮತವೋ- ದೇಶದ ಹಿತವೋ?

ಸವಾಲುಗಳು ಹೇಗಿರುತ್ತವೆ ಎಂಬುದಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಅತ್ಯುತ್ತಮ ಉದಾಹರಣೆ. ಇದರಲ್ಲಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. ಒಂದು ಕಡೆ ಸರಕಾರದ ಆರ್ಥಿಕ ಶಿಸ್ತನ್ನು ವಿವೇಕಯುತವಾಗಿ ಕಾಯ್ದುಕೊಳ್ಳಬೇಕು. ಮತ್ತೊಂದು ಕಡೆ ಮುಂದಿನ ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರನ್ನು ಸೆಳೆಯಲು ತಂತ್ರ ಹೆಣೆಯಬೇಕು.

ಕಳೆದ ವರ್ಷದ ಅಂತ್ಯಕ್ಕೆ ಮೋದಿ ಅವರ ಆರ್ಥಿಕ ಸುಧಾರಣೆಗಳಿಗೆ ಜಾಗತಿಕ ಹೂಡಿಕೆದಾರರು ಮತ್ತು ಕ್ರೆಡಿಟ್ ರೇಟಿಂಗ್ ನೀಡುವ ಕಂಪೆನಿಗಳು ಮೆಚ್ಚುಗೆ ಸೂಚಿಸಿದ್ದು ಹೌದು. ಆದರೆ ಕಳೆದ ನಾಲ್ಕು ವರ್ಷದಲ್ಲೇ ಈಗಿನ ಆರ್ಥಿಕ ಸ್ಥಿತಿ ತೀರಾ ಗಂಭೀರವಾಗಿದೆ. ಇದಕ್ಕೆ ಜೀವ ತುಂಬುವ ಜವಾಬ್ದಾರಿ ಅರುಣ್ ಜೇಟ್ಲಿ ಅವರಿಗಿದೆ.

ಇನ್ನು ಈಚೆಗೆ ನಡೆದ ಗುಜರಾತ್ ವಿಧಾನಸಭೆಯ ಚುನಾವಣೆ ಫಲಿತಾಂಶ ಗಂಭೀರವಾದ ಎಚ್ಚರಿಕೆ ಅನ್ನೋದಂತೂ ಹೌದು. ಬಂಡವಾಳ ಹೂಡಿಕೆ ಸಲೀಸಾಗಿ ಆಗುತ್ತಿಲ್ಲ. ಈ ವಿಚಾರದಲ್ಲಿನ ಲೆಕ್ಕಾಚಾರಗಳು ಅಂಗೈ ಗೆರೆಯಷ್ಟೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಉದ್ಯೋಗ ವಲಯಕ್ಕೆ ದೊಡ್ಡ ಬಲ

ಉದ್ಯೋಗ ವಲಯಕ್ಕೆ ದೊಡ್ಡ ಬಲ

ಆದ್ದರಿಂದಲೇ ಈ ಬಾರಿ ಬಜೆಟ್ ನಲ್ಲಿ ಕೃಷಿ ಹಾಗೂ ಉದ್ಯೋಗ ವಲಯಕ್ಕೆ ದೊಡ್ಡ ಮಟ್ಟದ ಬಲ ದೊರೆಯಬಹುದು ಎಂಬುದು ಆದ್ಯತೆಯ ನಿರೀಕ್ಷೆ. ಗ್ರಾಮಗಳ ಉದ್ಧಾರ ಮತ್ತು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಹರಿಸಬಹುದು ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತುಗಳು.

ರೈತರ ಮತಗಳ ತೀರ್ಮಾನ

ರೈತರ ಮತಗಳ ತೀರ್ಮಾನ

ಈಚೆಗಿನ ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರು ಬಿಜೆಪಿ ಹಾಗೂ ಎನ್ ಡಿಎ ಮೈತ್ರಿ ಕೂಟದ ಮೇಲೆ ಮುನಿಸಿಕೊಂಡಿರುವುದು ಗೋಚರಿಸಿದೆ. ತಾವು ಬೆಳೆದ ಬೆಳೆಗೆ ನ್ಯಾಯ ಸಮ್ಮತವಾದ ಬೆಲೆ ದೊರೆಯುತ್ತಿಲ್ಲ ಎಂಬ ವಿಚಾರವೇ ಮುಂದಿನ ಲೋಕಸಭೆ ಚುನಾವಣೆಗೆ ರೈತರ ಮತಗಳನ್ನು ನಿರ್ದೇಶಿಸುತ್ತದೆ.

ಕಾಂಗ್ರೆಸ್ ಅನ್ನು ಆಕ್ಷೇಪಿಸುತ್ತಿದ್ದ ಪ್ರಧಾನಿ

ಕಾಂಗ್ರೆಸ್ ಅನ್ನು ಆಕ್ಷೇಪಿಸುತ್ತಿದ್ದ ಪ್ರಧಾನಿ

ಜನರ ಕಲ್ಯಾಣ ಯೋಜನೆಗಳಿಗೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರ ಬಜೆಟ್ ನಲ್ಲಿ ಹೆಚ್ಚಿನ ಹಣ ಮೀಸಲಿಡುವುದನ್ನು ನರೇಂದ್ರ ಮೋದಿ ವಿರೋಧಿಸುತ್ತಿದ್ದರು. ಆದರೆ ಈಗ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ. ಆದರೆ ತಮ್ಮದೇ ಆಕ್ಷೇಪಣೆಗೆ ವಿರುದ್ಧವಾಗಿ ಹೆಚ್ಚು ಹಣವನ್ನು ಮೀಸಲಿಡುವುದು ನೋಡಬಹುದಾಗಿದೆ.

ಇದು ಚುನಾವಣೆ ರಾಜಕೀಯ

ಇದು ಚುನಾವಣೆ ರಾಜಕೀಯ

ಚುನಾವಣೆಗಳು ಅಂದರೆ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರ ಮತಗಳ ಮೇಲೆ ಹೆಚ್ಚಿನ ಕಣ್ಣಿರುತ್ತದೆ. ಆದ್ದರಿಂದ ಆ ವರ್ಗವನ್ನು ಗುರಿಯಾಗಿಸಿಕೊಂಡು ಆಡಳಿತಾರೂಢ ಸರಕಾರ ಯೋಜನೆಗಳನ್ನು ರೂಪಿಸುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+