ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಕೊರೊನಾ ವಿರುದ್ಧ ಹೋರಾಟ; ಜನತಾ ಕರ್ಪ್ಯೂಗೆ ಪ್ರಧಾನಿ ಮೋದಿ ಕರೆ

|
Google Oneindia Kannada News

ನವದೆಹಲಿ, ಮಾರ್ಚ್ 19:ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಭಾಷಣ ಮುಕ್ತಾಯವಾಗಿದೆ.

ದೇಶದಲ್ಲಿ ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್ ಸೋಂಕು ಹರಡದಂತೆ 130 ಕೋಟಿ ದೇಶವಾಸಿಗಳು ಸಂಯಮ ಹಾಗೂ ಸಂಕಲ್ಪ ಹೊಂದಬೇಕು ಎಂದು ಪ್ರಮುಖವಾಗಿ ಒತ್ತಿ ಹೇಳಿದ್ದಾರೆ.

ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ವೈದ್ಯರು ಹೇಳಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಕೊರೊನಾ ವಿರುದ್ಧ ಯುದ್ದದ ರೀತಿ ಹೋರಾಡೋಣ. ವೈದ್ಯರನ್ನು ಸ್ಮರಿಸೋಣ. ವದಂತಿಗಳನ್ನು ನಂಬುವುದು ಬೇಡ ಎಂದಿದ್ದಾರೆ. ಅಲ್ಲದೇ ಸಾರ್ವಜನಿಕ ಸಂಪರ್ಕ ಕಡಿತಗೊಳಿಸೋಣ ಎಂದು ಕರೆ ನೀಡಿದ್ದಾರೆ.

PM Narendra Modi to Address Nation on Coronavirus Live Updates in Kannada

ಅಲ್ಲದೇ ಪ್ರಮುಖವಾಗಿ ಕೊರೊನಾ ವಿರುದ್ಧ ಹೋರಾಟದ ರೂಪವಾಗಿ ಭಾನುವಾರ ಒಂದು ದಿನ ಅಂದರೆ ಮಾರ್ಚ್ 22 ರಂದು ಬೆಳಿಗ್ಗೆ 8 ರಿಂದ ರಾತ್ರಿ 9 ರವೆರೆಗೆ ಜನತಾ ಕರ್ಪ್ಯೂ ಆಚರಿಸೋಣ ಎಂದು ಮೋದಿ ಕರೆ ನೀಡಿದ್ದಾರೆ. ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮೋದಿ ಅಭಯ ನೀಡಿದ್ದಾರೆ

ಮಾಹಿತಿ ಪಡೆಯಲು ಪೇಜ್ ರಿಪ್ರೇಶ್ ಮಾಡಿ

ಭಾರತದಲ್ಲಿ ಇದುವರೆಗೆ ಒಟ್ಟು 173 ಜನಕ್ಕೆ ಕೊರೊನಾ ವೈರಸ್ ಸೋಂಕು (ಕೋವಿಡ್ 19) ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಿಷಯವನ್ನು ದೃಢಪಡಿಸಿದೆ. 174 ರಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಹಾಗೂ ದೆಹಲಿಯ ತಲಾ ಒಬ್ಬರು ಹಾಗೂ 25 ಜನ ವಿದೇಶಿ ಸೋಂಕಿತರೂ ಸೇರಿದ್ದಾರೆ. ಸೋಂಕಿತರ ಸಂಪರ್ಕದಲ್ಲಿ 5700 ಜನ ಇದ್ದರು. ಅವರೆಲ್ಲರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Newest FirstOldest First
8:30 PM, 19 Mar

ದೇಶವಾಸಿಗಳು ಕೊರೊನಾ ವದಂತಿಗಳಿಗೆ ಕಿವಿ ಕೊಡಬೇಡಿ. ಅವಶ್ಯಕ ವಸ್ತುಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ; Modi
8:29 PM, 19 Mar

ಕೊರೊನಾ ಹೊಡೆದೊಡಿಸಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಆರ್ಥಿಕತೆಯ ಮೇಲೆ ಕೊರೊನಾ ಮಾಡಿರುವ ಪರಿಣಾಮದ ಕುರಿತು ಈ ಟಾಸ್ಕ್‌ಪೋರ್ಸ್ ತೀವ್ರ ನಿಗಾ ಇಟ್ಟಿದೆ. ಸಂಬಂಧಪಟ್ಟ ಎಲ್ಲರೊಂದಿಗೆ ಸಂಪರ್ಕದಲ್ಲಿದ್ದಾರೆ
8:28 PM, 19 Mar

ಕೊರೊನಾ ಹೊಡೆದೊಡಿಸಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ
8:27 PM, 19 Mar

ಸಣ್ಣ ಸಣ್ಣ ರೋಗದ ಬಗ್ಗೆ ಭಯಗೊಂಡು ಆಸ್ಪತ್ರೆಗೆ ದೌಡಾಯಿಸಬೇಡಿ; ಕೊರೊನಾ ಬಗ್ಗೆ ನಿಮ್ಮ ಪರಿಚಯದ ವೈದ್ಯರ ಬಳಿ ಕೇಳಿ ತಿಳಿಯಿರಿ
8:25 PM, 19 Mar

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಧನ್ಯವಾದ ಹೇಳೋಣ. ಭಾನುವಾರ ಸಂಜೆ ಗಂಟೆ ಭಾರಿಸಿ ಅವರಿಗೆ ಧನ್ಯವಾದ ಹೇಳೋಣ. ಆ ದಿನ ಸಂಪೂರ್ಣ ಜನತಾ ಕರ್ಪ್ಯೂ ಆಚರಿಸೋಣ. ವೈದ್ಯರಿಗೆ ಧನ್ಯವಾದ ಹೇಳುವ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿಯಾಗೋಣ
8:18 PM, 19 Mar

ಕೊರೊನಾ ಹಿನ್ನೆಲೆ; ಜನರು ಮನೆಯಿಂದ ಹೊರಗೆ ಬರದಂತೆ ಮೋದಿ ಸಲಹೆ
8:15 PM, 19 Mar

ಈ ಭಾನುವಾರ ಜನತಾ ಕರ್ಪ್ಯೂ ಆಚರಿಸಲು ಮೋದಿ ಕರೆ
Advertisement
8:14 PM, 19 Mar

ಕೊರೊನಾ ವೈರಸ್‌ಗೆ ಮದ್ದು ಇಲ್ಲ; ಯುದ್ದದ ರೀತಿಯಲ್ಲಿ ಇದನ್ನು ಎದುರಿಸಬೇಕಿದೆ
8:11 PM, 19 Mar

ಮೊದಲು ನಾವು ಆರೋಗ್ಯವಾಗಿರಬೇಕು. ನಾವು ಆರೋಗ್ಯವಾಗಿದ್ದರೇ ಜಗತ್ತು ಆರೋಗ್ಯದಿಂದ ಇರುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ತೀರಾ ಅವಶ್ಯ; Modi
8:10 PM, 19 Mar

ಕೊರೊನಾ ಹಿನ್ನೆಲೆ; ರಾಷ್ಟ್ರದ ಜನತೆಗೆ ಸಂಕಲ್ಪ ಮತ್ತು ಸಂಯಮ ವಹಿಸಲು ಮೋದಿ ಕರೆ
8:09 PM, 19 Mar

ಕೊರೊನಾ ವೈರಸ್ ನಿಂದ ಜಗತ್ತು ತತ್ತರಿಸಿದೆ. 130 ಕೋಟಿ ಭಾರತೀಯರು ಇಂತಹ ಸಂದರ್ಭದಲ್ಲಿ ಅತೀ ಜಾಗೃತರಾಗಿರಬೇಕು; ಮೋದಿ
8:05 PM, 19 Mar

ಕೊರೊನಾ ವೈರಸ್ ಒಂದು ಮಹಾಮಾರಿ. ಇಡೀ ವಿಶ್ವವನ್ನು ಚಿಂತೆಗೀಡು ಮಾಡಿದೆ. ಇಡೀ ವಿಶ್ವವೇ ಇಂದು ಇದರಿಂದ ನರಳುತ್ತಿದೆ. ಎರಡನೇ ಮಹಾಯುದ್ದದ ನಂತರ ಜಗತ್ತು ಅತಿ ಬೆಚ್ಚಿ ಬಿದ್ದಿರುವುದು ಕೊರೊನಾ ಮಾಹಾಮಾರಿಗೆ; ಮೋದಿ
Advertisement
8:01 PM, 19 Mar

ಪ್ರಧಾನಿ ನರೇಂದ್ರ ಮೋದಿ ಭಾಷಣ ಪ್ರಾರಂಭ
7:56 PM, 19 Mar

ಪ್ರಧಾನಿ ಮೋದಿ ಅವರು ಒಡಿಶಾ ಸಿಎಂ ಅವರನ್ನು ಕೊರೊನಾ ವೈರಸ್ ತಡೆಗಟ್ಟುವ ಕ್ರಮದ ಕುರಿತು ಅಭಿನಂದಿಸಿದ್ದಾರೆ
7:40 PM, 19 Mar

ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಭಾಷಣ ತೀವ್ರ ಕುತೂಹಲ ಕೆರಳಿಸಿದೆ
7:36 PM, 19 Mar

ಮೋದಿ ಅವರು ದೇಶದಲ್ಲಿ ಲಾಕ್‌ಡೌನ್ ಘೋಷಿಸುತ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ
7:31 PM, 19 Mar

ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಲೈವ್ ಭಾಷಣವನ್ನು ಅವರ ಅಧಿಕೃತ ಯುಟ್ಯೂಬ್ ಪೇಜ್‌ Narendra Modi ನಲ್ಲಿ ವೀಕ್ಷಿಸಬಹುದಾಗಿದೆ
7:22 PM, 19 Mar

ಕೊರೊನಾ ವೈರಸ್ ಹತ್ತಿಕ್ಕಲು ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಎಕ್ಸಪರ್ಟ್ ಗಳ ಸಲಹೆ ಪಡೆಯಬೇಕು. ವದಂತಿಗಳನ್ನು ನಂಬಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ
6:53 PM, 19 Mar

ಪ್ರಧಾನಿ ಅವರ ಇಂದಿನ ಭಾಷಣದ ಬಗ್ಗೆ ಪಿಎಂಓ ಟ್ವಿಟ್ಟರ್ ಪೇಜ್ ಪ್ರಧಾನಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬುದನ್ನು ಹೇಳಿದ್ದನ್ನು ಬಿಟ್ಟರೇ ಮತ್ತೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ
6:09 PM, 19 Mar

ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಭಾಷಣದ ಬಗ್ಗೆ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ. ಮೋದಿ ಏನು ಮಾತನಾಡಲಿದ್ದಾರೆ ಎಂಬ ಕುತೂಹಲ ನನಗೆ ಕಾಡುತ್ತಿದೆ. ಒಂದು ವೇಳೆ ಅವರು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಎಲ್ಲ ನಗರಗಳನ್ನು ಮೂರ್ನಾಲ್ಕು ವಾರ ಲಾಕ್‌ಡೌನ್ ಘೋಷಿಸದಿದ್ದರೆ ನನಗೆ ಅಸಮಾಧಾನವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
5:34 PM, 19 Mar

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಒಂದು ವಾರ (ಮಾ 22 ವರೆಗೆ) ಭಾರತಕ್ಕೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳು ಬರುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಿಡಿಸಿದೆ.
5:02 PM, 19 Mar

ಮುಂದಿನ 15 ದಿನಗಳು ಕೋವಿಡ್ 19 ವಿರುದ್ಧದ ಹೋರಾಟ ಭಾರತಕ್ಕೆ ನಿರ್ಣಾಯಕವಾಗಿರುವುದರಿಂದ ಪ್ರಧಾನಿ ಮೋದಿ ಅವರು ಕೊರೊನಾ ಸೋಂಕು ಹತ್ತಿಕ್ಕಲು ಮತ್ತೇನು ಮಾಡಬೇಕು ಎಂಬುದರ ಬಗ್ಗೆ ರಾಷ್ಟ್ರದ ಜನತೆಗೆ ವಿವರಿಸಲಿದ್ದಾರೆ ಎನ್ನಲಾಗಿದೆ.

English summary
PM Modi to address the nation on measures to combat Coronavirus Live Updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X