'ದೇಶ ಪ್ರೇಮದ ಬಗ್ಗೆ ನಿಮ್ಮಿಂದ ಪಾಠ ಕಲಿಯಬೇಕಿಲ್ಲ'
ನವದೆಹಲಿ, ಮಾ.9 : 'ಕಾಶ್ಮೀರದ ಪ್ರತ್ಯೇಕತಾವಾದಿ, ಉಗ್ರ ಮಸರತ್ ಆಲಂ ಜೈಲಿನಿಂದ ಬಿಡುಗಡೆಯಾಗುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ದೇಶಭಕ್ತಿಯ ಬಗ್ಗೆ ನಾವೂ ಯಾರಿಂದಲೂ ಏನನ್ನೂ ಕಲಿಯುವ ಅಗತ್ಯವಿಲ್ಲ' ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರದ ಸಂಸತ್ ಕಲಾಪದಲ್ಲಿ ಮಸರತ್ ಆಲಂನನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಜಮ್ಮು-ಕಾಶ್ಮೀರ ಸರ್ಕಾರದ ಕ್ರಮದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಕಲಾಪದಲ್ಲಿ ಗದ್ದಲವೆಬ್ಬಿಸಿದವು.

ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಪ್ರಧಾನಿ ಮೋದಿ, 'ಉಗ್ರ ಆಲಂ ಬಿಡುಗಡೆಗೆ ಬಗ್ಗೆ ದೇಶಾದ್ಯಂತ ಮತ್ತು ಸಂಸತ್ತಿನಲ್ಲಿ ವ್ಯಕ್ತವಾಗಿರುವ ಆಕ್ರೋಶವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆಲಂ ಬಿಡುಗಡೆ ನಿರ್ಧಾರ ಕೈಗೊಳ್ಳುವಾಗ ರಾಜ್ಯ ಸರ್ಕಾರ ಕೇಂದ್ರದ ಜತೆ ಚರ್ಚೆ ನಡೆಸಿಲ್ಲ' ಎಂದು ಸ್ಟಷ್ಟಪಡಿಸಿದರು.
ಮೋದಿ ಮಾತಿನ ಮುಖ್ಯಾಂಶಗಳು
* ಆಲಂ ಬಿಡುಗಡೆ ನಿರ್ಧಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದೆ. ಮೈತ್ರಿ ಮಾಡಿಕೊಂಡಿರುವ ಪಕ್ಷದ ಜೊತೆಯೂ ಸಮಾಲೋಚನೆ ನಡೆಸದೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

* ದೇಶದ ಅಖಂಡತೆ ಮತ್ತು ಏಕತೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ದೇಶ ದ್ರೋಹಿಗಳ ವಿರುದ್ಧ ನಮ್ಮೆಲ್ಲರದ್ದು ಒಂದೇ ಧ್ವನಿ. ಪ್ರತ್ಯೇಕತಾವಾದಿಗಳ ವಿರುದ್ಧ ಇಡೀ ದೇಶ ಆಕ್ರೋಶಗೊಂಡಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
* ದೇಶಭಕ್ತಿಯ ಬಗ್ಗೆ ನಾವೂ ಯಾರಿಂದಲೂ ಪಾಠವನ್ನು ಕಲಿಯುವ ಅಗತ್ಯವಿಲ್ಲ. ಆಲಂ ಬಿಡುಗಡೆ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಮಾಹಿತಿ ಪಡೆದಿದ್ದಾರೆ. ದೇಶದ ಸುರಕ್ಷತೆ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
* ಕಾಶ್ಮೀರದ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯೂ ಪಾಲುದಾರನಾಗಿರುವುದರಿಂದ ಈ ವಿಚಾರದಲ್ಲಿ ಎಲ್ಲ ಆರೋಪಗಳನ್ನು ಕೇಂದ್ರ ಸರ್ಕಾರವೂ ಹೊರಬೇಕಾಗುತ್ತದೆ.
ಮೋದಿ ಮಾತಿನ ವಿಡಿಯೋ
PM @narendramodi ji's statement on Masarat Alam's release http://t.co/hw90RvL53Z
— BJP Karnataka (@bjpkarnataka) March 9, 2015 











Click it and Unblock the Notifications