ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿವೃದ್ಧಿಯು ಮಣಿಪುರದ ಪ್ರತಿ ಮೂಲೆಯನ್ನೂ ತಲುಪುತ್ತಿದೆ: ಮೋದಿ

|
Google Oneindia Kannada News

ಅಭಿವೃದ್ಧಿಯು ಮಣಿಪುರದ ಮೂಲೆ ಮೂಲೆಯನ್ನೂ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಇಂದು ಸಂಸ್ಥಾಪನಾ ದಿನವಾಗಿದೆ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಣಿಪುರದ ಜನತೆಯನ್ನುದ್ದೇಶಿಸಿ ಮಾತನಾಡಿದರು.

Breaking: ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟBreaking: ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಮಣಿಪುರ, ಮೇಘಾಲಯ, ತ್ರಿಪುರ ರಾಜ್ಯೋತ್ಸವಕ್ಕೆ ಶುಭ ಕೋರಿದ ಅವರು, ಮೊದಲ ಪ್ಯಾಸೆಂಜರ್ ರೈಲಿಗಾಗಿ ನೀವು 50 ವರ್ಷಗಳ ಕಾಲ ಕಾಯಬೇಕಾಯಿತು, ಹಲವು ದಶಕಗಳ ಬಳಿಕ ರೈಲ್ವೆ ಎಂಜಿನ್ ಮಣಿಪುರವನ್ನು ತಲುಪಿದ್ದು, ಇದು ಡಬಲ್ ಎಂಜಿನ್ ಸರ್ಕಾರದ ಅದ್ಭುತ ಕೊಡುಗೆಯಾಗಿದೆ. ಮಣಿಪುರದಲ್ಲಿ ಮೂಲ ಸೌಕರ್ಯಗಳನ್ನು ತಲುಪಲು ದಶಕಗಳನ್ನೇ ತೆಗೆದುಕೊಳ್ಳಲಾಗಿದೆ. ಆದರೆ, ಮಣಿಪುರವನ್ನು ಇತರೆ ರಾಜ್ಯಗಳಿಗೆ ಸಂಪರ್ಕಿಸುವ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ, ಶಾಂತಿ ಮತ್ತು ಅಭಿವೃದ್ಧಿಗೆ ಮಣಿಪುರ ಅರ್ಹವಾಗಿದೆ ಎಂದರು.

PM Narendra Modi Says Development Is Reaching Every Corner Of Manipur

ಜನವರಿ 21ರಂದು ತ್ರಿಪುರ, ಮಣಿಪುರ, ಮೇಘಾಲಯ ರಾಜ್ಯಗಳ ಸಂಸ್ಥಾಪನಾ ದಿನವನ್ನು ಭಾರತ ಆಚರಿಸುತ್ತಿದೆ. 1972ರಲ್ಲಿ ಈ ದಿನದಂದು ಈಶಾನ್ಯ ಮರುಸಂಘಟನೆ ಕಾಯಿದೆ 1971 ಅನ್ನು ಮೂರು ಈಶಾನ್ಯ ರಾಜ್ಯಗಳಾಗಿ ತ್ರಿಪುರ, ಮೇಘಾಲಯ ಮತ್ತು ಮಣಿಪುರಗಳಿಗೆ ರಾಜ್ಯ ಸ್ಥಾನಮಾನವನ್ನು ಒದಗಿಸಲಾಯಿತು, ಈ ಮೂರು ರಾಜ್ಯಗಳು 50ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿವೆ.

ಮಣಿಪುರ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಮಣಿಪುರದಲ್ಲಿ ಎರಡು ಹಂತದ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

5 ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ಮಣಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 27ರಂದು ಮೊದಲ ಹಂತದ ಚುನಾವಣೆ ನಡೆದರೆ, ಮಾರ್ಚ್ 3ರಂದು ಎರಡನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯಲಿದೆ.

ಮಾರ್ಚ್ 10ರಂದು ಮಣಿಪುರದ ಜೊತೆಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 1ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ,

Recommended Video

ಇದಪ್ಪ ಕನ್ನಡಿಗನ ಅದೃಷ್ಟ ಅಂದ್ರೆ !! | Oneindia Kannada

ನಾಮಪತ್ರ ಹಿಂಪಡೆಯಲು ಫೆಬ್ರವರಿ 11 ಕೊನೆಯ ದಿನಾಂಕವಾಗಿರುತ್ತದೆ. ಫೆಬ್ರವರಿ 27ರಂದು ಮೊದಲ ಹಂತದ ಮತದಾನ ನಡೆಯಲಿದೆ.

English summary
Prime Minister Narendra Modi on Friday virtually addressed the poll-bound state of Manipur on the occasion of their 50th statehood day and said that development is reaching every corner of Manipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X