ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಮಂ ಸಿದ್ದರಾಮಯ್ಯ ಅವರಿಗೆ ಮೋದಿ ಪತ್ರ - ಕನ್ನಡದಲ್ಲಿ

By Mahesh
|
Google Oneindia Kannada News

ನವದೆಹಲಿ, ಫೆ.25: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಂಡಿಸಿರುವ 14ನೇ ವಿತ್ತ ಆಯೋಗದ ವರದಿ ಶಿಫಾರಸ್ಸಿನ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಪತ್ರ ಬರೆದಿದ್ದಾರೆ.

ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ವೈ.ವಿ. ರೆಡ್ಡಿ ನೇತೃತ್ವದ 14ನೆ ವಿತ್ತ ಆಯೋಗದ ವರದಿಯಲ್ಲಿ ರಾಜ್ಯಗಳಿಗೆ ಹೆಚ್ಚು ಆರ್ಥಿಕ ಮೂಲಗಳ ಹಂಚಿಕೆ ಬಗ್ಗೆ ವಿವರಣೆ ಇದೆ. ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾದ ವರದಿಯ ಮುಖ್ಯಾಂಶಗಳನ್ನು ಸೇರಿಸಿ ವಿವರವಾದ ಪತ್ರವನ್ನು ಎಲ್ಲಾ ಮುಖ್ಯಮಂತ್ರಿಗಳಿಗೆ ಅಯಾ ರಾಜ್ಯದ ಭಾಷೆಯಲ್ಲೇ ಪತ್ರವನ್ನು ಕಳಿಸಲಾಗಿದೆ.

PM Narendra Modi's Letter to Karnataka Chief Minister Siddaramaiah

ಫೆ.28ರಂದು ಸಂಸತ್ತಿನಲ್ಲಿ ಮಂಡಿಸಲಾಗುವ 2015-16ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಆಯೋಗದ ಶಿಫಾರಸುಗಳ ಹಲವು ವಿವರಗಳನ್ನು ಸೇರಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕನ್ನಡ, ಹಿಂದಿ, ಉರ್ದು, ಇಂಗ್ಲೀಷ್, ತೆಲುಗು, ಅಸ್ಸಾಮಿ, ಗುಜರಾತಿ, ಮರಾಠಿ, ಮಲಯಾಳಂ, ಬೆಂಗಾಳಿ, ತಮಿಳು, ಪಂಜಾಬಿ, ಒಡಿಯಾ, ಖಾಸಿ, ಮಿಜೋ ಹಾಗೂ ಡೊಗ್ರಿ ಭಾಷೆಯಲ್ಲಿ ಪತ್ರವನ್ನು ಪ್ರಧಾನಿ ಸಚಿವಾಲಯ ಪ್ರಕಟಿಸಿದೆ.

ಆಯೋಗದ ಪ್ರಮುಖ ಶಿಫಾರಸುಗಳು ಇಂತಿವೆ:
* ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ವೈ.ವಿ. ರೆಡ್ಡಿ ನೇತೃತ್ವದ 14ನೇ ವಿತ್ತ ಆಯೋಗದ ವರದಿ ಫೆ.24ರಂದು ಲೋಕಸಭೆಯಲ್ಲಿ ಎನ್ ಡಿಎ ಸರ್ಕಾರದಿಂದ ಮಂಡನೆ.
* ರಾಜ್ಯಗಳಿಗೆ ಹೆಚ್ಚು ಆರ್ಥಿಕ ಮೂಲಗಳ ಹಂಚಿಕೆ, ಒಟ್ಟು ತೆರಿಗೆ ಆದಾಯದ ಶೇ.42ನ್ನು ರಾಜ್ಯಗಳಿಗೆ ಹಂಚಬೇಕು.
* 2015-16ರಿಂದ 2019-20ರ ವರೆಗೆ ಒಟ್ಟು ಕಂದಾಯ ಸಂಗ್ರಹದ ಶೇ.49ನ್ನು ರಾಜ್ಯಗಳಿಗೆ ವರ್ಗಾಯಿಸುವ ಹಾಲಿ ಮಟ್ಟವನ್ನು ಸರ್ಕಾರ ಕಾಪಾಡಿಕೊಳ್ಳಬೇಕು.
* ಯೋಜನಾ ಆಯೋಗವನ್ನು ರದ್ದುಗೊಳಿಸಿರುವುದರಿಂದ ಅಂತಾರಾಜ್ಯ ಸಲಹಾ ಸಮಿತಿಯ ಪಾತ್ರವನ್ನು ವಿಸ್ತರಿಸಬೇಕು.
* ಕೇಂದ್ರದಿಂದ ರಾಜ್ಯಗಳಿಗೆ ವಿವೇಚನಾ ಸಂಪನ್ಮೂಲ ವರ್ಗಾವಣೆಯನ್ನು ಕನಿಷ್ಠಗೊಳಿಸಬೇಕು. ಎಂದರೆ, ತಮಗೆ ಸೂಕ್ತವೆಂದು ಕಂಡ ವಲಯಗಳಿಗೆ, ಪ್ರಾಪ್ತ ಸಂಪನ್ಮೂಲವನ್ನು ಉಪಯೋಗಿಸಲು ರಾಜ್ಯಗಳಿಗೆ ಸ್ವಾತಂತ್ರವಿರಬೇಕು.

Arun Jaitley

* ಕೇಂದ್ರೀಯ ಅನುದಾನಕ್ಕೆ ಅರ್ಹವಾದ ವಲಯಗಳನ್ನು ರಾಜ್ಯಗಳಲ್ಲಿ ಗುರುತಿಸುವುದು ಸಲಹಾ ಮಂಡಳಿಯ ಕಾರ್ಯವಾಗಲಿದೆ. ಸಲಹಾ ಮಂಡಳಿಯು ಪ್ರದೇಶ-ನಿರ್ದಿಷ್ಟ ಅನುದಾನವನ್ನು ಗುರುತಿಸಬೇಕು ಹಾಗೂ ಒದಗಿಸಬೇಕು.
* ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ನಗರಪಾಲಿಕೆಗಳಿಗೆ ಅನುದಾನ ಹೆಚ್ಚಿಸಬೇಕು.
* ಆದ್ಯತೆಯಿಲ್ಲದ ವರ್ಗದಲ್ಲಿ ಪಟ್ಟಿ ಮಾಡದ ರೋಗಗ್ರಸ್ತ ಉದ್ಯಮಗಳ ಹಕ್ಕು ತ್ಯಜಿಸಲು ಪಾರದರ್ಶಕ ಹರಾಜು ನಡೆಸಬೇಕು.
* ಸರ್ಕಾರದ ಪಾಲು ನಿರ್ಧರಿತ ಬಂಡವಾಳ ಮಟ್ಟಕ್ಕಿಂತ ಕಡಿಮೆಯಿದ್ದಲ್ಲಿ, ಹೆಚ್ಚು ಆದ್ಯತೆಯ ಹಾಗೂ ಆದ್ಯತೆಯ ವರ್ಗದ ಕಂಪೆನಿಗಳ ಪಾಲುಗಳನ್ನು ಖರೀದಿಸಬೇಕು.
* ರಾಷ್ಟ್ರೀಯ ಹೂಡಿಕೆ ನಿಧಿಯನ್ನು ರದ್ದುಗೊಳಿಸಿ, ಬಂಡವಾಳ ಹಿಂದೆಗೆತದ ಪಾವತಿಗಳನ್ನು ಕ್ರೋಡೀಕರಿಸಿದ ನಿಧಿಯಲ್ಲಿರಿಸಬೇಕು.
* ಸಾರ್ವಜನಿಕ ವಲಯ ಉದ್ಯಮದ ನೆಲೆಯಿರುವ ರಾಜ್ಯದೊಂದಿಗೆ ಬಂಡವಾಳ ಹಿಂದೆಗೆತ ಪ್ರಕ್ರಿಯೆಯ ಒಂದು ಭಾಗವನ್ನು ಹಂಚಿಕೊಳ್ಳಬೇಕು.
* ವಿದ್ಯುತ್ ಕಾಯ್ದೆಯ ಪ್ರಸ್ತಾಪದಂತೆ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ಆರ್ಥಿಕ ಸ್ವಾಯತ್ತೆ ನೀಡಲು ಎಸ್‌ಇಆರ್‌ಸಿ ನಿಧಿಯೊಂದನ್ನು ಸ್ಥಾಪಿಸಬೇಕು.
* ಶೀಘ್ರವೇ ಸ್ವಾಯತ್ತ ರೈಲು ಪ್ರಯಾಣದರ ಪ್ರಾಧಿಕಾರವೊಂದನ್ನು ಸ್ಥಾಪಿಸಬೇಕು.
* ಪ್ರಯಾಣದರ ನಿಗದಿ ಹಾಗೂ ಸೇವಾ ಗುಣಮಟ್ಟ ನಿಯಂತ್ರಣಕ್ಕೆ ಪ್ರಯಾಣಿಕ ರಸ್ತೆ ವಲಯಕ್ಕೆ ಸ್ವತಂತ್ರ ನಿಯಂತ್ರಕರನ್ನು ನೇಮಿಸಬೇಕು.
* ಮನೆಬಳಕೆ, ನೀರಾವರಿ ಹಾಗೂ ಇತರ ಉಪಯೋಗಗಳಿಗೆ ನೀರಿನ ದರ ಪರಿಶೀಲನೆಗಾಗಿ ಶಾಸನಬದ್ಧ ಜಲ ನಿಯಂತ್ರಣ ಪ್ರಾಧಿಕಾರಗಳನ್ನು ಸ್ಥಾಪಿಸಬೇಕು.

ಸಿಎಂ ಸಿದ್ದರಾಮಯ್ಯ ಅವರಿಗೆ ಪಿಎಂ ಮೋದಿ ಅವರು ಬರೆದ ಪತ್ರದ ಪೂರ್ಣ ಪಾಠ ಓದಲು ಇಲ್ಲಿ ಕ್ಲಿಕ್ ಮಾಡಿ ಕನ್ನಡ ಭಾಷೆ ಆಯ್ಕೆ ಮಾಡಿ

English summary
Prime Minister Narendramodi's letter in Indian languages to Chief Ministers seeking their support to accept the recommendations of 14th Finance Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X