ಅಂಡಮಾನ್-ನಿಕೋಬಾರ್ ಮೂರು ದ್ವೀಪಗಳ ಮರು ನಾಮಕರಣ ಮಾಡಿದ ಮೋದಿ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, 75ನೇ ವರ್ಷಾಚರಣೆ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಂಡಮಾನ್ ಮತ್ತು ನಿಕೋಬಾರ್ ನ ಮೂರು ದ್ವೀಪಗಳ ಹೆಸರು ಮರು ನಾಮಕರಣ ಮಾಡಿದರು.
ರಾಸ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ್, ನೀಲ್ ದ್ವೀಪವನ್ನು ಶಹೀದ್ ದ್ವೀಪ್ ಮತ್ತು ಹಾವ್ ಲಾಕ್ ದ್ವೀಪವನ್ನು ಸ್ವರಾಜ್ ದೀಪ್ ಎಂದು ಕರೆಯಲಾಗುವುದು ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಈ ಸಂದರ್ಭಕ್ಕೆ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ 75 ರುಪಾಯಿ ನಾಣ್ಯ ಬಿಡುಗಡೆ ಮಾಡಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಮೋದಿ ಘೋಷಣೆ ಮಾಡಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಮರೀನಾ ಉದ್ಯಾನಕ್ಕೆ ಭೇಟಿ ನೀಡಿದರು ಹಾಗೂ ನೂರೈವತ್ತು ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿದರು. ಉದ್ಯಾನದಲ್ಲಿರುವ ಬೋಸ್ ಪ್ರತಿಮೆಗೆ ಗೌರವ ಸಲ್ಲಿಸಿದರು.












Click it and Unblock the Notifications