ಚಿತ್ರಗಳಲ್ಲಿ: ರಾಷ್ಟ್ರೀಯ ಹಬ್ಬವಾದ ಅಬ್ದುಲ್ ಕಲಾಂ ಜನ್ಮದಿನ
ನವದೆಹಲಿ, ಅಕ್ಟೋಬರ್. 15: ಭಾರತ ರತ್ನ, ಭಾರತದ ಕ್ಷಿಪಣಿ ಪಿತಾಮಹ, ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತೆ ಹಬ್ಬವಾಗಿ ಆಚರಣೆ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯಾಧಿಗಣ್ಯರು ಕಲಾಂ ಜೀವನ ಸಾಧನೆಗಳನ್ನು ನೆನಪು ಮಾಡಿಕೊಂಡರು. ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಡಾ.ಕಲಾಂ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಅಲ್ಲದೇ ಡಿಆರ್ ಡಿಒ ಭವನದಲ್ಲಿ 'ಎ ಸೆಲೆಬ್ರೆಶನ್ ಆಫ್ ಡಾ.ಕಲಾಮ್ಸ್ ಲೈಫ್' ಹೆಸರಿನ ಫೋಟೋ ಪ್ರದರ್ಶನವನ್ನು ಉದ್ಘಾಟಿಸಿ ವೀಕ್ಷಿಸಿದರು.[ಬಾಣಸಿಗನ ನೆನಪಿನ ಹದದಲ್ಲಿ ಕಲಾಂ ಜೀವನ ರಸಾಯನ]
ಕಲಾಂ ಮೊದಲು ರಾಷ್ಟ್ರ ರತ್ನ, ನಂತರ ರಾಷ್ಟ್ರಪತಿ ಎಂದು ಪ್ರಧಾನಿ ಮೋದಿ ವ್ಯಾಖ್ಯಾನ ಮಾಡಿದರು. ರಾಮೇಶ್ವರಂನಲ್ಲಿ ಕಲಾಂ ಅವರ ಜನ್ಮಸ್ಥಳವನ್ನು ಸರ್ಕಾರವೇ ವಶಕ್ಕೆ ತೆಗೆದುಕೊಂಡು ಕಲಾಂ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಮೋದಿ ತಿಳಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿಯ ಸಮುದ್ರದಂಡೆಯಲ್ಲಿ ಕಲಾಂ ಅವರ ಮರಳು ಕಲಾಕೃತಿ ನಿರ್ಮಿಸಿ ಗೌರವ ಸೂಚಿಸಿದರು. ಶಾಲಾ ಮಕ್ಕಳು, ನಾಗರಿಕರು ಸೇರಿದಂತೆ ಇಡೀ ದೇಶವೇ ಕಲಾಂ ಜನ್ಮ ದಿನಾಚರಣೆ ಹಬ್ಬದಲ್ಲಿ ಪಾಲ್ಗೊಂಡಿತ್ತು. ವಿಶ್ವ ಚೇತನ ಕಲಾಂ ಅವರಿಗೆ ನಾವು ಒಂದು ಸಲಾಂ ಹಾಕಿ ಬರೋಣ...

ವಿದ್ಯಾರ್ಥಿಗಳಿಂದ ನಮನ
ಕ್ಷಿಪಣಿ ಮಾನವನಿಗೆ ನಮನ ಸಲ್ಲಿಸಿದ ಅಗರ್ತಲದ ವಿದ್ಯಾರ್ಥಿಗಳು. ಕಲಾಂ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ಮೆಲುಕು ಹಾಕಿದರು.

ಮಹೇಶ್ ಭಟ್ ಮಾತು
ಬಾಲಿವುಡ್ ಚಿತ್ರರಂಗದ ಪ್ರಮುಖ ಮಹೇಶ್ ಭಟ್ ಕಲಾಂ ಅವರ ಜನ್ಮದಿನಾಚರಣೆ ಸಂದರ್ಭ ಮುಂಬೈ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಾಂ ಕುಟುಂಬ
ಅಬ್ದುಲ್ ಕಲಾಂ ಕುಟುಂಬದವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಮರಳು ಕಲಾಕೃತಿ ಗೌರವ
ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿಯ ಸಮುದ್ರದಂಡೆಯಲ್ಲಿ ಕಲಾಂ ಅವರ ಮರಳು ಕಲಾಕೃತಿ ನಿರ್ಮಿಸಿ ಗೌರವ ಸೂಚಿಸಿದರು.

ಎಲ್ಲೆಲ್ಲೂ ಕಲಾಂ
ಊಟಿಯಲ್ಲಿ ಕಲಾಂ ಮುಖವಾಡ ಧರಿಸಿ ಜನ್ಮದಿನ ಆಚರಣೆ ಮಾಡಿದವರು ಕಂಡು ಬಂದಿದ್ದು ಹೀಗೆ.

ಭಾರತ ರತ್ನನಿಗೆ ವಂದನೆ
ಚೆನ್ನೈ ನಲ್ಲಿ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದು ಗೂಡಿ ಕಾಗದದಲ್ಲಿ ನಿರ್ಮಿಸಿದ ಕಲಾಂ ಕಲಾಕೃತಿ












Click it and Unblock the Notifications