ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ನೌಕಾಪಡೆಯ ಐಎಫ್ಆರ್ ಸಂಭ್ರಮದ ಮಧುರ ಕ್ಷಣಗಳು

By Vanitha
|
Google Oneindia Kannada News

ಆಂಧ್ರ ಪದೇಶ, ಫೆಬ್ರವರಿ, 08: ಭಾರತೀಯ ನೌಕಾಪಡೆ ಆಯೋಜಿಸಿದ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಎಂಬ ಕಾರ್ಯಕ್ರಮ ಹಲವಾರು ಗಣ್ಯರ ಸಮಾಗಮವಾಗಿತ್ತು, ಅಲ್ಲಿ ಸಾಹಸವಿತ್ತು, ಆಕಾಶದಲ್ಲಿ ಚಿತ್ತಾರ ದರ್ಶನವಿತ್ತು, ನೋಡುಗರನ್ನು ಮಂತ್ರ ಮುಗ್ದಗೊಳಿಸಿತು.

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರ ಬಾಬು ನಾಯ್ಡು, ಆಂದ್ರಪ್ರದೇಶದ ವಿಶಾಖಪಟ್ಟಣದ ಆರ್ ಕೆ ಬೀಚ್ ಸಮೀಪ ನಡೆದ 'ವಿಕ್ಟರಿ ಆಫ್ ಸೀ' ಎಂಬ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಹೋರಾಡಿದ ವೀರ ಯೋಧರ ನೆನಪನ್ನು ಮರುಕಳಿಸುವುದಕ್ಕಾಗಿ ಭಾರತೀಯ ನಾಕಾಪಡೆ ಈ ಕಾರ್ಯಕ್ರಮವನ್ನು ಬಹಳ ಆಸಕ್ತಿಯಿಂದ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮೃತರಿಗಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.[ಕಡಲ ತೀರ ಕಾರ್ಯಾಚರಣೆ ವಿಮಾನ P8I ಲೋಕಾರ್ಪಣೆ]

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮದಲ್ಲಿ ಏನೆಲ್ಲಾ ವಿಶೇಷತೆಗಳಿದ್ದವು, ಯಾರು ಮುಖ್ಯ ಅತಿಥಿಯಾಗಿದ್ದರು, ಯಾವೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಎಂಬ ಸುಮಧುರ ಕ್ಷಣಗಳು ಇಲ್ಲಿವೆ ನೋಡಿ.

ಮುಖ್ಯ ಅತಿಥಿ ಯಾರು?

ಮುಖ್ಯ ಅತಿಥಿ ಯಾರು?

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯ ಅತಿಥಿಗಳಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ವೀಕ್ಷಣೆಗೆ ಮೇಲೇರುವಾಗ ನೆರೆದಿದ್ದ ಜನಸಮೂಹಕ್ಕೆ ಕೈ ಬೀಸಿದ್ದು ಹೀಗೆ

ಈ ಕಾರ್ಯಕ್ರಮದ ವಿಶೇಷತೆ?

ಈ ಕಾರ್ಯಕ್ರಮದ ವಿಶೇಷತೆ?

ಈ ಕಾರ್ಯಕ್ರಮದಲ್ಲಿ 24 ಅಂತರಾಷ್ಟ್ರೀಯ ಹಡಗುಗಳು, 75 ಭಾರತೀಯ ಹಡಗುಗಳು ಭಾಗವಹಿಸಿದ್ದವು. ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮ 50 ರಾಷ್ಟ್ರಗಳು, 99 ಹಡಗುಗಳು, ಹಾಗೂ 21 ನೌಕಾಪಡೆಯ ಮುಖ್ಯಸ್ಥರ ಸಮಾಗಮವಾಗಿತ್ತು

ಯಾರು ಯಾರು ಭಾಗವಹಿಸಿದ್ದರು?

ಯಾರು ಯಾರು ಭಾಗವಹಿಸಿದ್ದರು?

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತೀಯ ನೌಕಾಪಡೆಯ ಮುಖ್ಯಸ್ಥರಾದ ಆರ್ ಕೆ ಧವನ್, ಉಪಮುಖ್ಯಸ್ಥರಾದ ಸತೀಶ್ ಸೋನಿ, ಹೀಗೆ ಹಲವಾರು ಮಂದಿ ಭಾಗವಹಿಸಿದ್ದರು.

1971ರ ಸಮರದ ಒಂದು ಝಲಕ್

1971ರ ಸಮರದ ಒಂದು ಝಲಕ್

ಬಾಂಗ್ಲಾದೇಶ ಸ್ವತಂತ್ರಗೊಳಿಸುವ ಸಂದರ್ಭದಲ್ಲಿ ಉಪಯೋಗಿಸಿದ ಕೆಲವು ಯುದ್ದ ನೌಕೆಗಳು, ನೌಕಾಪಡೆಯವರು ಮಾಡಿದ ಸಾಹಸ ಹೀಗೆ ಹಲವು ವೈವಿದ್ಯತೆಯಿಂದ ಕೂಡಿತ್ತು ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮ

1971ರ ಸಮರದಲ್ಲಿ ಬಳಸಲಾದ ಯುದ್ಧ ವಿಮಾನ

1971ರ ಸಮರದಲ್ಲಿ ಬಳಸಲಾದ ಯುದ್ಧ ವಿಮಾನ

1971 ರ ಸಮರದಲ್ಲಿ ಬಳಸಲಾದ ಯುದ್ಧ ವಿಮಾನವು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ವಿಶಾಖಪಟ್ಟಣದ ಆರ್ ಕೆ ಬೀಸಿನಲ್ಲಿ ನೌಕಾಪಡೆಯ ಕಮಾಂಡೋಗಳು ವಿಭಿನ್ನ ರೀತಿಯ ಸಾಹಸ ಪ್ರದರ್ಶಿಸಿ ಜನರ ಗಮನ ಸೆಳೆದರು.

ವೃತ್ತಾಕಾರದಲ್ಲಿ ಗುಲಾಬಿ ಬಣ್ಣ ಬೆಳಕು

ವೃತ್ತಾಕಾರದಲ್ಲಿ ಗುಲಾಬಿ ಬಣ್ಣ ಬೆಳಕು

ಐಎಫ್ ಆರ್ ಕಾರ್ಯಕ್ರಮದಲ್ಲಿ ವೃತ್ತಾಕಾರದಲ್ಲಿ ಕಂಡು ಬಂದ ಗುಲಾಬಿ ಬಣ್ಣದ ಬೆಳಕು ಹಕ್ಕಿಗಳಂತೆ ಕಂಡು ಬಂದಿದ್ದು, ಇದು ನೋಡುಗರನ್ನು ಸೆಳೆಯಿತು.

ಆಕಾಶದಲ್ಲಿ ಬೆಳಕಿನ ಚಿತ್ತಾರ

ಆಕಾಶದಲ್ಲಿ ಬೆಳಕಿನ ಚಿತ್ತಾರ

ಕತ್ತಲಮಯ ಆಕಾಶದಲ್ಲಿ ನೌಕಾವಿಮಾನ ಹೊರಡಿಸುತ್ತಿದ್ದ ಬೆಳಕಿನ ಹಲವಾರು ಚಿತ್ತಾರಗಳು ಆಕಾಶವನ್ನು ಬಂಗಾರಮಯ ಬೆಳಕಿನಿಂದ ರಂಗೇರಿಸಿದ್ದವು.

ಐಎಫ್ ಆರ್ ಪತಾಕೆ ಹಿಡಿದ ನೌಕಾ ಯೋಧ

ಐಎಫ್ ಆರ್ ಪತಾಕೆ ಹಿಡಿದ ನೌಕಾ ಯೋಧ

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ-2016 ಎಂಬ ಬಾವುಟ ಹಿಡಿದ ಯೋಧ ಕಾಣಿಸಿದ್ದು ಹೀಗೆ

ಆಕಾಶದಲ್ಲಿ ಭಾರತದ ಬಾವುಟ

ಆಕಾಶದಲ್ಲಿ ಭಾರತದ ಬಾವುಟ

ಬಾನಿನಲ್ಲಿ ಭಾರತದ ಪತಾಕೆ ಹಾರಿಸಲು ನೌಕಾವಿಮಾನದ ಸಹಾಯದಿಂದ ಮೇಲೇರುತ್ತಿವ ಯೋಧ ಕೇಸರಿ ಬಣ್ಣ ಹರವಿದ್ದು ಹೀಗೆ.

ಐಎಫ್ ಆರ್ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ

ಐಎಫ್ ಆರ್ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ

ಐಎಫ್ ಆರ್ ಸಂಭ್ರಮದಲ್ಲಿ ಹಲವಾರು ರಾಜ್ಯಗಳ ಕಲಾತಂಡಗಳು ಭಾಗವಹಿಸಿದ್ದು, ತಮ್ಮ ರಾಜ್ಯದ ಕಲಾತ್ಮಕತೆ ಪ್ರದರ್ಶಿಸಿದರು

ಮಾಧ್ಯಮ ಮಿತ್ರರ ದಂಡು

ಮಾಧ್ಯಮ ಮಿತ್ರರ ದಂಡು

ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಕರ್ತರಿಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

English summary
Prime Minister Narendra modi and Andra Pradesh Chief Minister Chandrababu Naidu, President Pranab Mukharjee Participating International Feet Review Programme at Vishakapatna, Andra Pradesh. This programme conducted by Indian Navy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X