ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಎಲ್ಲ ರೇಡಿಯೋ ಪ್ರೇಮಿಗಳಿಗೆ ಮತ್ತು ರೇಡಿಯೋ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಶುಭಾಶಯ ಸಲ್ಲಿಸಿದ್ದಾರೆ.

"ವಿಶ್ವ ರೇಡಿಯೋ ದಿನದ ಶುಭಾಶಯಗಳು. ನಾನು ಎಲ್ಲ ರೇಡಿಯೋ ಪ್ರೇಮಿಗಳಿಗೆ ಮತ್ತು ರೇಡಿಯೋ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಹಾಗೂ ಈ ಮಾಧ್ಯಮವನ್ನು ಕ್ರಿಯಾಶೀಲ ಮತ್ತು ಚೈತನ್ಯದಾಯಿಯಾಗಿ ಉಳಿಸಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

PM Narendra Modi extends greetings on World Radio Day

ಸಂವಾದ, ಕಲಿಕೆ ಮತ್ತು ಸಂವಹನಕ್ಕೆ ರೇಡಿಯೋ ಒಂದು ಅದ್ಭುತ ಮಾರ್ಗ. ಮನ್ ಕಿ ಬಾತ್ ನ ನನ್ನ ಸ್ವಂತ ಅನುಭವ ನನ್ನನ್ನು ದೇಶಾದ್ಯಂತದ ಜನರೊಂದಿಗೆ ಸಂಪರ್ಕಿಸಿದೆ.

ಎಲ್ಲ ಮನ್ ಕಿ ಬಾತ್ ಸಂಚಿಕೆಗಳನ್ನೂ " www.narendramodi.in/mann-ki-baat " ರಲ್ಲಿ ಆಲಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಸುದ್ದಿ ಕೊಸರು: ವಿಶ್ವ ರೇಡಿಯೋ ದಿನಾಚರಣೆ ಅಂಗವಾಗಿ ವಿಶ್ವದ ಬಹುತೇಕ ಎಲ್ಲಾ ದೇಶಗಳ ಎಲ್ಲಾ ಭಾಷೆಯ ರೇಡಿಯೋ ಆನ್ ಲೈನ್ ನಲ್ಲಿ ಕೇಳುವ ಅವಕಾಶ ಈಗ ಲಭ್ಯವಿದೆ.

ಎಲ್ಲ ರೇಡಿಯೋ ಪ್ರೀಯರ ಗಮನಕ್ಕೆ: ರೇಡಿಯೋ.ಗಾರ್ಡನ್ ವೆಬ್ ಸೈಟ್ ಸುಮ್ಮನೆ ಒತ್ತಿ ನೋಡಿ.

ಇಡೀ ಜಗತ್ತು ಕಾಣುತ್ತದೆ. ಜೊತೆಗೆ, ಜಗತ್ತಿನಾದ್ಯಂತ ಒಂದಿಷ್ಟು ಚುಕ್ಕೆಗಳು. ನಿಮ್ಮ ಸ್ಪೀಕರ್ ಆನ್ ಮಾಡಿಕೊಂಡು ಯಾವುದಾದರೂ ಚುಕ್ಕೆ ಮೇಲೆ ಕ್ಲಿಕ್ ಮಾಡಿ. ಜಗತ್ತಿನ ಎಲ್ಲ ರೆಡಿಯೋ ಕೇಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Prime Minister, Narendra Modi has extended his greetings on World Radio Day to all the radio lovers and to those working in the radio industry.
Please Wait while comments are loading...