ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಉಳಿತಾಯದ ಹಣದಿಂದ ಪೌರ ಕಾರ್ಮಿಕರ ನಿಧಿಗೆ 21 ಲಕ್ಷ ನೀಡಿದ ಮೋದಿ

|
Google Oneindia Kannada News

ಲಖನೌ, ಮಾರ್ಚ್ 6: ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಯಕ್ತಿಕ ಉಳಿತಾಯದ ಹಣದಲ್ಲಿ ಇಪ್ಪತ್ತೊಂದು ಲಕ್ಷ ರುಪಾಯಿಯನ್ನು ಕುಂಭ್ ಸಫಾಯಿ ಕರ್ಮಚಾರಿ ನಿಧಿಗೆ ಬುಧವಾರ ನೀಡಿದ್ದಾರೆ. ಅದ್ಭುತವಾಗಿ ಕುಂಭ ಮೇಳ ಆಯೋಜನೆ ಮಾಡಿದ್ದಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಹೊಗಳಿದ್ದಾರೆ.

ನಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆಯನ್ನು ಉತ್ತಮವಾಗಿ ಬಿಂಬಿಸಲಾಯಿತು. ಇದು ಹಲವಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯಲಿದೆ ಎಂದಿದ್ದಾರೆ. "ಉತ್ತರಪ್ರದೇಶದ ಜನರಿಗೆ ಅಭಿನಂದನೆಗಳು. ವಿಶೇಷವಾಗಿ ಪ್ರಯಾಗ್ ರಾಜ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ರಾಜ್ಯ ಸರಕಾರವು ಪ್ರಯಾಗ್ ರಾಜ್ ನ ಕುಂಭ ಮೇಳದಲ್ಲಿ ಮಾಡಿದ ಆಯೊಜನೆಗೆ ಅಭಿನಂದನೆ" ಎಂದು ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿ

ಪ್ರಯಾಗ್ ರಾಜ್ ನ ಕುಂಭ ಮೇಳದಲ್ಲಿ ಹೆಸರಿಸಬೇಕಾದ ದಾಖಲೆಗಳಾದವು. ಸ್ವಚ್ಛತೆ ಹಾಗೂ ಒಳಚರಂಡಿ ಕೆಲಸಗಳು ಕಣ್ಣಿಗೆ ಕಾಣುತ್ತಿದ್ದವು. ನೆಲ ಸ್ವಚ್ಛತೆಗೆ ನೇಮಿಸಿದ್ದ ಜನರ ವಿಚಾರದಲ್ಲಿ ದಾಖಲೆ ಸೃಷ್ಟಿಯಾಯಿತು. ಕಲೆ ಹಾಗೂ ಸಾರಿಗೆಯಲ್ಲೂ ದಾಖಲೆ ಸೃಷ್ಟಿ ಆಯಿತು. ಆಡಳಿತದ ಸಲುವಾಗಿ ಬಳಕೆಯಾದ ತಂತ್ರಜ್ಞಾನಗಳು ಶ್ಲಾಘನೀಯ ಎಂದಿದ್ದಾರೆ.

PM Narendra Modi donates 21 lakh of his personal savings to Kumbh Safai Karamchari Corpus Fund

ಫೆಬ್ರವರಿ ಇಪ್ಪತ್ನಾಲ್ಕನೇ ತಾರೀಕು ಪೌರ ಕಾರ್ಮಿಕರ ಪಾದ ತೊಳೆಯುವ ಮೂಲಕ ಅವರಿಗೆ ಮೋದಿ ಗೌರವ ಸಲ್ಲಿಸಿದ್ದರು. ಜತೆಗೆ ಸ್ವಚ್ಛ ಕುಂಭ್ ಆಧಾರ್ ಪ್ರಶಸ್ತಿಗಳನ್ನು ಕೂಡ ಅವರಿಗೆ ನೀಡಿದ್ದರು. ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪೌರ ಕಾರ್ಮಿಕರ ಜತೆ ಸಂವಾದ ನಡೆಸಿದ್ದರು. ಪೌರ ಕಾರ್ಮಿಕರು ನಿಜವಾದ ಕರ್ಮಯೋಗಿಗಳು ಎಂದು ಬಣ್ಣಿಸಿದ್ದರು.

ಸಮೀಕ್ಷೆ : ಬಾಲಕೋಟ್ ದಾಳಿ ನಂತರ ಮೋದಿ ಪುನರ್ ಆಯ್ಕೆ?ಸಮೀಕ್ಷೆ : ಬಾಲಕೋಟ್ ದಾಳಿ ನಂತರ ಮೋದಿ ಪುನರ್ ಆಯ್ಕೆ?

ಈಚೆಗೆ ಸಿಯೋಲ್ ನಲ್ಲಿ ಪಡೆದ ಶಾಂತಿ ಬಹುಮಾನದ ಒಂದು ಕೋಟಿ ಮೂವತ್ತು ಲಕ್ಷ ರುಪಾಯಿ ಹಣವನ್ನು ಗಂಗಾ ನದಿ ಸ್ವಚ್ಛತೆ ಯೋಜನೆಯಾದ ನಮಾಮಿ ಗಂಗೆಗೆ ನೀಡುವುದಾಗಿ ಮೋದಿ ಘೋಷಣೆ ಮಾಡಿದ್ದಾರೆ.

English summary
Prime Minister Narendra Modi donated Rs 21 lakh from his personal savings to the Kumbh Safai Karamchari Corpus Fund on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X