ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ 200 ಕೋಟಿ ಡೋಸ್ ಮೈಲಿಗಲ್ಲು ಸಾಧಿಸಿದ ಭಾರತ: ಪ್ರಧಾನಿ ಮೋದಿ ಶ್ಲಾಘನೆ

|
Google Oneindia Kannada News

ನವದೆಹಲಿ, ಜುಲೈ 17: ಇಡೀ ಜಗತ್ತನ್ನೇ ಕಂಗೆಡಿಸಿದ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ನೀಡಿದ ಕೋವಿಡ್ ಲಸಿಕೆ ಅಭಿಯಾನ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಜನವರಿ 16, 2021ರಂದು ಮೊದಲ ಕೋವಿಡ್-19 ಲಸಿಕೆ ನೀಡಲಾಯಿತು, ಇಂದಿಗೆ ಭಾರತ 200 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಿದ ಗುರಿ ಸಾಧಿಸಿದೆ.

ಭಾರತದಲ್ಲಿ 200 ಕೋಟಿ ಡೋಸ್ ಲಸಿಕೆ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 18 ತಿಂಗಳ ಅವಧಿಯಲ್ಲೇ ಭಾರತ ಈ ಸಾಧನೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.

ಉಚಿತ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆಯಲು ಬೊಮ್ಮಾಯಿ ಕರೆಉಚಿತ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆಯಲು ಬೊಮ್ಮಾಯಿ ಕರೆ

ಈ ಮೈಲಿಗಲ್ಲನ್ನು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ರಾಷ್ಟ್ರವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ, "ಭಾರತ ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ! 200 ಕೋಟಿ ಲಸಿಕೆ ಡೋಸ್‌ಗಳ ವಿಶೇಷ ಅಂಕಿಅಂಶವನ್ನು ದಾಟಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಅಭಿನಂದನೆಗಳು. ಲಸಿಕೆ ತಯಾರಿಸಲು ಕೊಡುಗೆ ನೀಡಿದವರಿಗೆ ಹೆಮ್ಮೆಯಿದೆ. ವ್ಯಾಕ್ಸಿನೇಷನ್ ಡ್ರೈವ್ ಪ್ರಮಾಣ ಮತ್ತು ವೇಗದಲ್ಲಿ ಭಾರತಕ್ಕೆ ಸಾಟಿಯಿಲ್ಲ. ಇದು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದೆ." ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಶ್ಲಾಘನೆ

ನೀತಿ ಆಯೋಗದ ಸದಸ್ಯ ಮತ್ತು ಭಾರತದ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ವಿಕೆ ಪಾಲ್, "2 ಶತಕೋಟಿ ಕೋವಿಡ್ -19 ಲಸಿಕೆ ಪ್ರಮಾಣವನ್ನು ಸಾಧಿಸುವುದು ಭಾರತಕ್ಕೆ ಒಂದು ಭವ್ಯವಾದ ಮೈಲಿಗಲ್ಲು. ನಾವು ನಮ್ಮದೇ ಲಸಿಕೆಗಳನ್ನು ಬಳಸಿಕೊಂಡು ಇದನ್ನು ಸಾಧಿಸಿದ್ದೇವೆ. ಈ ಸಾಧನೆಯ ಎಲ್ಲಾ ಶ್ರೇಯಸ್ಸು ದೇಶದ ಜನರು ಮತ್ತು ನಾಯಕತ್ವಕ್ಕೆ ಸಲ್ಲುತ್ತದೆ." ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಟ್ವೀಟ್ ಮಾಡಿದ್ದು, "ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಇತಿಹಾಸವನ್ನು ಸೃಷ್ಟಿಸಿದೆ. ಈ ಅಸಾಮಾನ್ಯ ಸಾಧನೆಯು ಇತಿಹಾಸದಲ್ಲಿ ದಾಖಲಾಗುತ್ತದೆ" ಎಂದು ಹೇಳಿದ್ದಾರೆ.

18 ತಿಂಗಳ ಅವಧಿಯಲ್ಲಿ ಮೈಲಿಗಲ್ಲು

18 ತಿಂಗಳ ಅವಧಿಯಲ್ಲಿ ಮೈಲಿಗಲ್ಲು

ಲಸಿಕೆ ಅಭಿಯಾನ ಆರಂಭಿಸಿದ 202 ದಿನಗಳಲ್ಲಿ 50 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ನಂತರದ 76 ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿತ್ತು, ನಂತರ 79 ದಿನಗಳ ಅಂತರದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಿ ಮೈಲಿಗಲ್ಲು ಸಾಧಿಸಲಾಗಿತ್ತು, ಈಗ 200 ಕೋಟಿ ಡೋಸ್ ನೀಡುವ ಮೂಲಕ ದಾಖಲೆ ಬರೆದಿದೆ.

ಭಾರತ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳ ನೇತೃತ್ವದಲ್ಲಿ ಎರಡನೇ ಮತ್ತು ಮೂರನೇ ಅಲೆ ಬಂದಿತ್ತು. 150 ಕೋಟಿಯಿಂದ 200 ಡೋಸ್‌ ಲಸಿಕೆ ನೀಡಲು 191 ದಿನಗಳ ಸಮಯ ಬೇಕಾಯಿತು.

ಶೇಕಡಾ 90 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ

ಶೇಕಡಾ 90 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ವಯಸ್ಕ ಜನಸಂಖ್ಯೆಯ ಶೇಕಡಾ 98 ರಷ್ಟು ಜನರು ಕನಿಷ್ಟ ಒಂದು ಡೋಸ್ ಅನ್ನು ಪಡೆದಿದ್ದಾರೆ ಮತ್ತು ಶೇಕಡಾ 90 ರಷ್ಟು ಸಂಪೂರ್ಣವಾಗಿ ಎರಡು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಅವರ್ ವರ್ಲ್ಡ್ ಒದಗಿಸಿದ ಮಾಹಿತಿಯ ಪ್ರಕಾರ, ವಿಶ್ವದ ಜನಸಂಖ್ಯೆಯ ಶೇಕಡಾ 62.1 ರಷ್ಟು ಜನರು ವೈರಸ್ ವಿರುದ್ಧ ಹೋರಾಡಲು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.

75 ದಿನಗಳ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ

75 ದಿನಗಳ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ

ಕೇಂದ್ರ ಆರೋಗ್ಯ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 18 ರಿಂದ 59 ವರ್ಷ ವಯಸ್ಸಿನ ಜನರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲು 75 ದಿನಗಳ ಲಸಿಕಾ ಅಭಿಯಾನ ಪ್ರಾರಂಭಿಸಿದೆ. ಇದುವರೆಗೆ ಒಟ್ಟು 5,63,67,888 ಬೂಸ್ಟರ್ ಡೋಸ್‌ ನೀಡಲಾಗಿದೆ. ಜೊತೆಗೆ ದೇಶದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ.

English summary
India Crossed 200 crore COVID-19 vaccine doses. Prime Minister Narendra Modi Congratulating the nation for achieving the milestone and creating history. Covid-19 Vaccine drive started Janaury 16, 2021. Within 18 Months It's Crossed 200 crore milestone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X