• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಸಾರಾಂಶ

|

ನವದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ. ಇದೇ ಸಂದರ್ಭದಲ್ಲಿ ದೇಶದ ಜನತೆಯನ್ನುದ್ದೇಶಿ ಮೋದಿ ಪತ್ರ ಬರೆದಿದ್ದಾರೆ.

   ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ!!ಬಿಜೆಪಿ ಅತೃಪ್ತ ಶಾಸಕರ ಸಭೆ | Oneindia Kannada

   ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ದೊರಕಿಸಿಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ತಮ್ಮ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ನರೇಂದ್ರ ಮೋದಿ ಈ ಪತ್ರದಲ್ಲಿ ತಿಳಿಸಿದ್ದಾರೆ. ಸರ್ವರ ಸಮಬಾಳ್ವೆ ಎಂಬ ಭಾರತ ತತ್ವದ ಪ್ರದರ್ಶನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

   ಮೋದಿ-ಅಮಿತ್ ಶಾ ಸಭೆ: ಲಾಕ್‌ಡೌನ್‌ ಕುರಿತು ಕೇಂದ್ರದ ಮುಂದಿರುವ ಅಂಶಗಳು

   ಬಿಜೆಪಿ ರಾಷ್ಟ್ರೀಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರಳವಾಗಿ ವರ್ಷಾಚರಣೆ ಮಾಡಲು ನಿರ್ಧರಿಸಿದೆ.

   ತಮ್ಮ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ 2014ರಿಂದ 2020ರವರೆಗೆ ಆರು ವರ್ಷಗಳಲ್ಲಿ ಏನೇನು ಸಾಧನೆ ಮಾಡಲಾಗಿದೆ ಎಂಬ ಅಂಶಗಳನ್ನು ಉಲ್ಲೇಖಿಸಿದ್ದಾರೆ.

   ಸುದ್ದಿಕ್ವಿಜ್ : 10 ಸರಳ ಪ್ರಶ್ನೆಗಳಿವೆ, ಸುಲಭವಾಗಿ ಉತ್ತರಿಸಿ

   ವರ್ಷಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ದೇಶದಾದ್ಯಂತ ಒಂದು ಸಾವಿರ ಜಾಥಾಗಳನ್ನು ಹಮ್ಮಿಕೊಂಡಿದ್ದು ಸರ್ಕಾರದ ಸಾಧನೆಯನ್ನು ತಿಳಿಸಲಿದ್ದಾರೆ. ಕೊವಿಡ್ 19 ಮಹಾಮಾರಿಯಿಂದಾಗಿ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ವಲಸೆ ಕಾರ್ಮಿಕರು ಕಷ್ಟ ಪಡುವಂತಾಯಿತು ಎಂದು ಮೋದಿ ಹೇಳಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲೇನಿದೆ?

   -ಮತ್ತೊಮ್ಮೆ ನಾನು ದೇಶದ 130 ಕೋಟಿ ಜನರಿಗೆ ಮತ್ತು ಪ್ರಜಾಪ್ರಭುತ್ವದ ಮಮೌಲ್ಯಗಳಿಗೆ ನಮಿಸುತ್ತೇನೆ. ಸಾಮಾನ್ಯ ದಿನಗಳಲ್ಲಾದರೆ ನಾನು ನಿಮ್ಮ ನಡುವೆ ಇರುತ್ತಿದ್ದೆ, ಆದರೆ ಈಗಿರುವ ಪರಿಸ್ಥಿತಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಹೀಗಾಗಿ ಪತ್ರದ ಮೂಲಕ ನಿಮ್ಮ ಬಳಿ ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

   -ಜನರ ವಾತ್ಸಲ್ಯ , ಸದ್ಭಾವನೆ ಮತ್ತು ಸಕ್ರಿಯ ಸಹಕಾರ ಹೊಸ ಶಕ್ತಿ ಮತ್ತು ಸ್ಫೂರ್ತಿ ನೀಡಿದೆ , ಪ್ರಜಾಪ್ರಭುತ್ವದ ಸಂಘಟಿತ ಶಕ್ತಿಯನ್ನು ನೀವು ತೋರಿಸಿರುವುದು ಇಡೀ ವಿಶ್ವಕ್ಕೆ ಮಾರ್ಗದರ್ಶನ ಎಂದು ಜನರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

   -ಕೊವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಚಟುವಟಿಕೆ ಮೇಲಾದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದನ್ನು ಉಲ್ಲೇಖಿಸಿದ್ದಾರೆ. ಈ ಪ್ಯಾಕೇಜ್ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

   -ಸಂವಿಧಾನದ 370ನೇ ವಿಧಿ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯೆ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು , ತ್ರಿವಳಿ ತಲಾಖ್ ನಿಷೇಧ ಇತ್ಯಾದಿ ವಿಚಾರಗಳನ್ನೂ ಪತ್ರದಲ್ಲಿ ವಿವರಿಸಿದ್ದಾರೆ.

   - ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಇದು ತಮ್ಮ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ಪ್ರಧಾನಿ ಹೇಳಿದ್ದಾರೆ

   -ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಈ ಮೂರು ಸೇನೆ ಮಧ್ಯೆ ಉತ್ತಮ ಸಂವಹನ ಏರ್ಪಡುವ ಉದ್ದೇಶದಿಂದ ರಕ್ಷಣಾ ಮುಖ್ಯಸ್ಥರ ಹುದ್ದೆ ರಚನೆ ಮಾಡಿದ್ದು;

   -ಗಗನಯಾನ ಯೋಜನೆ

   -ಪಿಎಂ ಕಿಸಾನ್ ಸಮ್ಮಾನ್ ನಿಧಿ

   -ಜಲಜೀವನ್ ಯೋಜನೆ

   -60 ವರ್ಷ ಮೇಲ್ಪಟ್ಟ ಹಿರಿಯ ರೈತರು, ಕೃಷಿ ಕಾರ್ಮಿಕರು, ಅಸಂಘಟಿತ ವಲಯದ -ಕಾರ್ಮಿಕರು ಮೊದಲಾದವರಿಗೆ ತಿಂಗಳಿಗೆ 3,000 ರೂ ಪಿಂಚಣಿ;

   -ಮೀನುಗಾರರಿಗೆ ಸುಲಭವಾಗಿ ಬ್ಯಾಂಕ್ ಸಾಲ ಲಭ್ಯವಾಗುವಂತೆ ಪ್ರತ್ಯೇಕ ವಿಭಾಗ ರಚಿಸಿದ್ದು.

   -2019ರಲ್ಲಿ ಮತ್ತೆ ಬಹುಮತದ ಸರ್ಕಾರಕ್ಕಾಗಿ ಮತ ನೀಡಿದ್ದಕ್ಕೆ ಪ್ರಧಾನಿ ಜನರಿಗೆ ಮತ್ತೊಮ್ಮೆ ವಂದನೆ ಸಲ್ಲಿಸಿದ್ದಾರೆ. ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಇದನ್ನು ಒಪ್ಪಿದ ದೇಶದ 130 ಕೋಟಿ ಜನ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.

   ಪೂರ್ಣಪಾಠ ಇಲ್ಲಿ ಓದಿ.....

   English summary
   Prime Minister Narendra Modi wrote a letter to the country one year into his second term and said the nation took historic decisions and progressed rapidly in the last year but conceded that migrant workers, labourers, and others had "undergone tremendous suffering" during the ongoing corona-virus crisis.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more