Get Updates
Get notified of breaking news, exclusive insights, and must-see stories!

ನೂತನ ಸಂಸತ್ ಭವನ ಸಬಲೀಕರಣದ ತೊಟ್ಟಿಲಾಗಲಿ!

ನವದೆಹಲಿ: ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ ಇದು ಎಂದೂ ಮರೆಯಲಾಗದ ದಿನ. ಏಕೆಂದರೆ ದೇಶ ಹೊಸ ಸಂಸತ್ ಭವನ ನೋಡುವ ಜೊತೆಗೆ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಈಗ ಹೊಸ ಯುಗ ಆರಂಭವಾಗಿದೆ. ಈ ಸಂದರ್ಭದಲ್ಲೇ ಪಿಎಂ ಮೋದಿ ಸ್ಪೆಷಲ್ ಟ್ವೀಟ್ ಮಾಡಿದ್ದು, ನೂತನ ಸಂಸತ್ ಭವನ ಸಬಲೀಕರಣದ ತೊಟ್ಟಿಲಾಗಲಿ ಎಂದು ಹಾರೈಸಿದ್ದಾರೆ.

ರಾಷ್ಟ್ರ ರಾಜಧಾನಿ ಇಂದು ಮದುಮಗಳ ರೀತಿ ಕಂಗೊಳಿಸಿತ್ತು. ಕಾರಣ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ. ಅದರಲ್ಲೂ ಜಗತ್ತೇ ಇಂದು ಭಾರತದ ನೂತನ ಸಂಸತ್ ಭವನ ಉದ್ಘಾಟನೆಗೆ ಸಾಕ್ಷಿಯಾಗಿತ್ತು. ಹೀಗೆ ನೂತನ ಸಂಸತ್ ಭವನ ಉದ್ಘಾಟನೆಗೂ ಮೊದಲು ಪ್ರಧಾನಿ ಮೋದಿ ಹೋಮ, ಹವನ ನೆರವೇರಿಸಿದರು. ಅಧೀನಂ ಸ್ವಾಮೀಜಿಗಳಿಂದ 'ಸೆಂಗೋಲ್‌' ಸ್ವೀಕರಿಸಿದ ಪ್ರಧಾನಿ, ಸಂಸತ್‌ ಭವನದ ಒಳಗೆ ಪ್ರತಿಷ್ಠಾಪಿಸಿದರು. ಆ ನಂತರ ಸರ್ವ ಧರ್ಮ ಪ್ರಾರ್ಥನ ಸಮಾರಂಭದಲ್ಲಿ ಕೂಡ ಪ್ರಧಾನಿ ಭಾಗಿಯಾದರು.

PM Modi wished that new parliament building

ದೇಶದ ಜನರಿಗೆ ಪ್ರಧಾನಿ ಸ್ಪೆಷಲ್ ಟ್ವೀಟ್

ದೇಶದಲ್ಲಿ ಹೊಸ ಸಂಸತ್ ಭವನ ಉದ್ಘಾಟನೆ ಆದ ದಿನವೇ ಪ್ರಜೆಗಳಿಗೆ ಟ್ವೀಟ್ ಮೂಲಕ ಶುಭ ಸಂದೇಶವನ್ನ ನೀಡಿದ್ದಾರೆ ಪ್ರಧಾನಿ ಮೋದಿ. 'ಭಾರತದ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯೊಂದಿಗೆ ನಮ್ಮ ಹೃದಯಗಳು ಮತ್ತು ಮನಸ್ಸು ಹೆಮ್ಮೆ, ನಿರೀಕ್ಷೆ ಭರವಸೆಗಳಿಂದ ತುಂಬಿವೆ. ಈ ಕಟ್ಟಡ ಸಬಲೀಕರಣ ತೊಟ್ಟಿಲಾಗಲಿ ಹಾಗೂ ಕನಸುಗಳನ್ನು ಬಿತ್ತಿ ಅವುಗಳನ್ನು ವಾಸ್ತವಕ್ಕೆ ತರುವಂತಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ' ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.

ವಿಶ್ವಗುರು ಬಸವಣ್ಣ ಅವರ ನೆನಪು

ಇನ್ನು ಬೆಳಗ್ಗೆ ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲನೇ ಭಾಷಣ ಮಾಡುತ್ತಾ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪ ನೆನಪು ಮಾಡಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಅಸಂಖ್ಯಾತ ಜನರ ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ. ಭಾರತದ ಪ್ರಗತಿಗೆ ಅಸಂಖ್ಯಾತ ಮಹನೀಯರು ಶ್ರಮಿಸಿದ್ದಾರೆ. ಭಾರತದ ವಿಕಾಸ ಯಾತ್ರೆಗೆ ಹೊಸ ಸಂಸತ್​ ಭವನ ಸಾಕ್ಷಿಯಾಗಿದೆ ಎಂದರು. ಜೊತೆಗೆ ಕನ್ನಡ ನಾಡಿನ ಹೆಮ್ಮೆಯ ಪುತ್ರ ಬಸವಣ್ಣರ ಅನುಭವ ಮಂಟಪದ ನೆನಪು ಮಾಡಿಕೊಂಡಿದ್ದರು ಪ್ರಧಾನಿ.

PM Modi wished that new parliament building

ಒಂದು ಭಾರತ.. ಶ್ರೇಷ್ಠ ಭಾರತ..!

ಹೌದು ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲ ಭಾಷಣದ ಸಂದರ್ಭದಲ್ಲಿ ಭಾರತದ ಏಕತೆಯನ್ನ ಪ್ರತಿಪಾದಿಸಿದರು. ಹೊಸ ಸಂಸತ್ ಭವನ ಕಟ್ಟಲು ವಸ್ತುಗಳನ್ನ ಎಲ್ಲೆಲ್ಲಿಂದ ತಂದಿದ್ದೇವೆ ಎಂಬ ವಿಚಾರವನ್ನ ತಿಳಿಸಿದ ಪ್ರಧಾನಿ ಮೋದಿ, ದೇಶದ ವಿವಿಧ ರಾಜ್ಯಗಳಿಂದ ದೇಶದ ಸಂಸತ್ ಭವನ ನಿರ್ಮಾಣಕ್ಕೆ ಸಿಕ್ಕ ಕೊಡುಗೆ ನೆನಪು ಮಾಡಿಕೊಂಡರು. ಹಾಗೇ ಇದೇ ಸಂದರ್ಭದಲ್ಲಿ ಒಂದು ಭಾರತ.. ಶ್ರೇಷ್ಠ ಭಾರತ..! ಎನ್ನುವ ಮೂಲಕ ಭಾರತದ ಏಕತೆಯನ್ನ ಪ್ರತಿಪಾದಿಸಿದರು.

ಸೆಂಗೋಲ್ ಕರ್ತವ್ಯ ಪ್ರಜ್ಞೆಯ ಪ್ರತೀಕ

ಹಾಗೇ ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಸ್ಥಾಪನೆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯ ಮಾತು ಆಡಿದರು. ಆತ್ಮ ನಿರ್ಭರ್​ ಭಾರತ್​ ಯೋಜನೆಗೆ ಇದು ಸಾಕ್ಷಿ. ಭಾರತೀಯರ ಸಂಕಲ್ಪದ ಪ್ರತೀಕವಾಗಿ ಈ ಸಂಸತ್​ ಭವನ ನಿರ್ಮಾಣವಾಗಿದೆ. ಭಾರತೀಯರ ಗೌರವ ಮತ್ತಷ್ಟು ಹೆಚ್ಚಲಿದೆ. ಬ್ರಿಟೀಷರು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ಸೆಂಗೋಲ್​ ನೀಡಿದ್ದರು. ಸೆಂಗೋಲ್​​ ನಾವು ಮಾಡಬೇಕಾದ ಕರ್ತವ್ಯ ನೆನಪಿಸುತ್ತೆ. ಸೆಂಗೋಲ್​ ನಮ್ಮೆಲ್ಲರಿಗೂ ಪ್ರೇರಣೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

PM Modi wished that new parliament building

ದೇಶದ ಅಭಿವೃದ್ಧಿಯೇ ಜನರ ಅಭಿವೃದ್ಧಿ

ನೂತನ ಸಂಸತ್ ಭವನ ನಿರ್ಮಾಣದ ಹಿಂದೆ ಸಾಕಷ್ಟು ಕಾರ್ಮಿಕರ ಪರಿಶ್ರಮವಿದೆ. 9 ವರ್ಷಗಳಲ್ಲಿ 9 ಹೊಸ ನಿರ್ಮಾಣದ ಕಲ್ಯಾಣವಾಗಿದೆ. 9 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣವಾಗಿವೆ. 13 ಕೋಟಿ ಶೌಚಾಲಯ ನಿರ್ಮಾಣವಾಗಿದೆ ಹಾಗೂ ನೀರು ಸಂರಕ್ಷಣೆಗೆ 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರ ನಿರ್ಮಾಣ ಮಾಡಿರುವುದು ಬಹಳ ಸಂಸತ ತಂದಿದೆ. ದೇಶದ ಅಭಿವೃದ್ಧಿಯೇ ಈ ದೇಶದ ಜನರ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ಒಟ್ನಲ್ಲಿ ದೇಶದ ನೂತನ ಸಂಸತ್ ಭವನ ಉದ್ಘಾಟನೆ ಮೂಲಕ ಭಾರತ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಜೆಗಳಿಗೆ ಶುಭ ಸಂದರ್ಭದಲ್ಲಿ ಶುಭಕೋರಿ ಸ್ಪೆಷಲ್ ಟ್ವೀಟ್ ಮಾಡಿದ್ದಾರೆ. ಹೀಗೆ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಈ ದಿನ ಎಂದೂ ಮರೆಯಲಾಗದ ಪುಟಕ್ಕೆ ಸೇರಲಿದ್ದು, ಶತಕೋಟಿ ಭಾರತೀಯರು ನೂತನ ಸಂಸತ್ ಉದ್ಘಾಟನೆಯನ್ನ ಸಂಭ್ರಮಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+