ಮೇ ತಿಂಗಳಲ್ಲಿ ಮೋದಿ, ಟ್ರಂಪ್ ಭೇಟಿ: ಎಚ್ 1ಬಿ ವೀಸಾ ಕಗ್ಗಂಟು ಸಡಿಲ?

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 17: ಪ್ರಧಾನಿ ನರೇಂದ್ರ ಮೋದಿಯವರು ಇದೇ ವರ್ಷ ಮೇ ತಿಂಗಳಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಆಗ ಆ ದೇಶದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.

ಮೇ ತಿಂಗಳಿನಲ್ಲಿ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ವಿಶ್ವ ಜಿ - 20 ಶೃಂಗ ಸಭೆ ನಡೆಯಲಿದ್ದು, ಆ ವೇಳೆಯಲ್ಲೂ ಅವರಿಬ್ಬರೂ ಭೇಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.[ಎಚ್ 1ಬಿ ವೀಸಾ ಬಗ್ಗೆ ಮೋದಿಗೆ ಫೋನ್ ಮೂಲಕ ವಿವರಿಸಿದ ಟ್ರಂಪ್]

ಪ್ರಧಾನಿ ಮೋದಿ ಹಾಗೂ ಟ್ರಂಪ್ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ. ಏಕೆಂದರೆ, ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಮೊದಲ ಪ್ರಾಶಸ್ತ್ಯ ಎಂಬ ಮಂತ್ರ ಜಪಿಸುತ್ತಾ ಅಮೆರಿಕ ಅಧ್ಯಕ್ಷರಾದ ಟ್ರಂಪ್, ತಾವು ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೇ ವಿದೇಶಿಗರಿಗೆ ತಮ್ಮ ನೆಲದಲ್ಲಿ ಸೇವೆ ಸಲ್ಲಿಸಲು ನೀಡಲಾಗುವ ಎಚ್ 1ಬಿ ವೀಸಾದ ನಿಯಮಗಳನ್ನು ಬಿಗಿಗೊಳಿಸಿದ್ದರು.[ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ]

ಅದರಂತೆ, ವಾರ್ಷಿಕವಾಗಿ ನೀಡಲಾಗುವ ಎಚ್ 1 ಬಿ ವೀಸಾಗಳಲ್ಲಿ ಕಡಿತಗೊಳಿಸಿರುವ ಟ್ರಂಪ್ ಸರ್ಕಾರ, ಕೇವಲ ನಿಷ್ಣಾತ ಟೆಕ್ಕಿಗಳನ್ನು ಮಾತ್ರ ಅಮೆರಿಕಕ್ಕೆ ಕಳುಹಿಸುವಂತೆ ಇತರ ಐಟಿ ದೇಶಗಳಿಗೆ ಪರೋಕ್ಷವಾಗಿ ಒತ್ತಡ ಹೇರಿದ್ದಾರೆ. ಟ್ರಂಪ್ ಸರ್ಕಾರದ ಈ ನಿಯಮ, ಭಾರತದ ಐಟಿ ವಲಯಕ್ಕೆ ದೊಡ್ಡ ಹೊಡೆತವೆಂದೂ ಹೇಳಲಾಗಿದೆ. ಹಾಗಾಗಿ, ಈ ನಿಯಮಗಳ ಸಡಿಲಿಕೆಗೆ ಮೋದಿ, ಟ್ರಂಪ್ ಅವರ ಮನವೊಲಿಸುವಲ್ಲಿ ಪ್ರಯತ್ನಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.

ದೂರವಾಣಿಯಲ್ಲಿ ಮಾತುಕತೆ

ದೂರವಾಣಿಯಲ್ಲಿ ಮಾತುಕತೆ

ಈಗಾಗಲೇ ಎಚ್ 1ಬಿ ವೀಸಾದ ನಿಯಮಗಳ ವಿಚಾರ, ಪ್ರಧಾನಿ ಮೋದಿ ಹಾಗೂ ಟ್ರಂಪ್ ನಡುವೆ ದೂರವಾಣಿ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ. ನಿಯಮಗಳನ್ನು ಸಡಿಲಿಸುವಂತೆ ಪ್ರಧಾನಿ ಮೋದಿ, ಟ್ರಂಪ್ ಅವರನ್ನು ಕೋರಿದ್ದಾರೆನ್ನಲಾಗಿದೆ. ಮುಂದಿನ ಭೇಟಿಯಲ್ಲಿ ಇದು ಮತ್ತೆ ಚರ್ಚೆಗೆ ಬರುವುದು ಖಚಿತ ಎನ್ನಲಾಗಿದೆ.

ಹಾಗಾಗಿ ಹೆಚ್ಚು ಮಹತ್ವ

ಹಾಗಾಗಿ ಹೆಚ್ಚು ಮಹತ್ವ

ಇದೀಗ, ಜಿ-20 ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ತೆರಳಲಿರುವ ಮೋದಿ ಹೆಗಲ ಮೇಲೆ ಟ್ರಂಪ್ ಜತೆ ಮಾತುಕತೆ ನಡೆಸಿ, ಎಚ್ 1ಬಿ ವೀಸಾ ನಿಯಮಗಳ ಸಡಿಲಿಕೆ ಮನವೊಲಿಸುವ ದೊಡ್ಡ ಜವಾಬ್ದಾರಿಯಿದೆ. ಅದಲ್ಲದೆ, ಇದು ಟ್ರಂಪ್ ಹಾಗೂ ಮೋದಿಯವರ ಮೊದಲ ಭೇಟಿಯಾಗಿರುವುದರಿಂದಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಪಾರಿಕ್ಕರ್-ಜೇಮ್ಸ್ ಮ್ಯಾಟಿಸ್ ಚರ್ಚೆ

ಪಾರಿಕ್ಕರ್-ಜೇಮ್ಸ್ ಮ್ಯಾಟಿಸ್ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಭಾವ್ಯ ಭೇಟಿಯ ಬಗ್ಗೆ ಈಗಾಗಲೇ ಉಭಯ ದೇಶಗಳ ಸಚಿವಾಲಯಗಳ ಮಟ್ಟದಲ್ಲಿ ಮಾತುಕತೆ ಆರಂಭವಾಗಿವೆ. ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಹಾಗೂ ಭಾರತದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ನಡುವೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆದಿದೆ.

ರೆಕ್ಸ್- ಸುಷ್ಮಾ ಮಾತುಕತೆ

ರೆಕ್ಸ್- ಸುಷ್ಮಾ ಮಾತುಕತೆ

ಇನ್ನು, ಇಬ್ಬರು ಧುರೀಣರ ಸಂಭಾವ್ಯ ಭೇಟಿ ಬಗ್ಗೆ ಅಮೆರಿಕದ ಆಂತರಿಕ ವ್ಯವಹಾರಗಳ ಸಚಿವ ರೆಕ್ಸ್ ಟಿಲ್ಲರ್ಸನ್ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಅವರೊಂದಿಗೆ ಈಗಾಗಲೇ ಮೋದಿ, ಟ್ರಂಪ್ ಭೇಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಚರ್ಚಿಸಿದ್ದ ಧೋವಲ್, ಫ್ಲೈನ್

ಚರ್ಚಿಸಿದ್ದ ಧೋವಲ್, ಫ್ಲೈನ್

ಇತ್ತೀಚೆಗಷ್ಟೇ, ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ಸಲಹೆಗಾರರ ಹುದ್ದೆ ತೊರೆದ ಮೈಕ್ ಫ್ಲೈನ್ ಅವರು, ಕೆಲ ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಮೋದಿ, ಟ್ರಂಪ್ ಭೇಟಿ ಬಗ್ಗೆ ಚರ್ಚಿಸಿದ್ದಾರೆ. ಧೋವಲ್ ಅವರು ಇತ್ತೀಚೆಗೆ ವಾಷಿಂಗ್ಟನ್ ಗೆ ಹೋಗಿದ್ದಾಗ ಈ ಭೇಟಿ ನಡೆದಿತ್ತು ಎನ್ನಲಾಗಿದೆ.

ಐಟಿ ಕಂಪನಿಗಳಿಗೆ ಸಿಹಿಸುದ್ದಿ ಸಿಗುವುದೇ?

ಐಟಿ ಕಂಪನಿಗಳಿಗೆ ಸಿಹಿಸುದ್ದಿ ಸಿಗುವುದೇ?

ಈ ಬಾರಿಯ ಅಮೆರಿಕದ ಪ್ರವಾಸದ ವೇಳೆ, ಒಂದು ರೀತಿಯಲ್ಲಿ ಭಾರತೀಯ ಐಟಿ ಕಂಪನಿಗಳ ರಾಯಭಾರತ್ವವನ್ನು ಹೊತ್ತೊಯ್ಯುತ್ತಿರುವ ಪ್ರಧಾನಿ ಮೋದಿ, ಇಲ್ಲಿನ ಐಟಿ ಕಂಪನಿಗಳಿಗೆ ಸಿಹಿ ಸುದ್ದಿ ತರುವಲ್ಲಿ ಸಫಲರಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Prime minister Narendra Modi and American President Donald Trump may meet as Modi visiting America in May. They may even take chairs to discuss on the sidelines of G-20 summit in Hamburg of Germany in July.
Please Wait while comments are loading...