ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಭಾಷಣ; ಎಲ್ಲಿಯ ಇಮ್ರಾನ್, ಎಲ್ಲಿಯ ಮೋದಿ ಎಂದ ಕಾಂಗ್ರೆಸ್ ಮುಖಂಡ

|
Google Oneindia Kannada News

ನವದೆಹಲಿ, ಸೆ 28: ವಿಶ್ವಸಂಸ್ಥೆಯಲ್ಲಿ ಶುಕ್ರವಾರ (ಸೆ 27) ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ವ್ಯಾಪಕ ಪ್ರಶಂಸೆಗೊಳಗಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮೋದಿಯ ಭಾಷಣವನ್ನು ಒಂದಕ್ಕೊಂದು ತುಲನೆ ಮಾಡಲಾಗುತ್ತಿದೆ.

ಮೋದಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ, ' ಪ್ರಧಾನಿ ಮೋದಿವರದ್ದು ತೂಕವಾದ ಭಾಷಣ" ಎಂದಿದ್ದಾರೆ.

ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟುಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟು

ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಘ್ವಿ, " ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಪರ್ಧೆಯೇ ಇಲ್ಲ. ಹಾಗೆಯೇ, ಮೋದಿ ಮತ್ತು ಇಮ್ರಾನ್ ಖಾನ್ ನಡುವೆ ಹೋಲಿಕೆಯೇ ಇಲ್ಲ" ಎಂದು ಬಣ್ಣಿಸಿದ್ದಾರೆ.

PM Modi UN Speech: Congress Leader Applaud Said No Comparison Between Modi And Imran

ಮುಂದುವರಿಯುತ್ತಾ, " ಇಮ್ರಾನ್ ಭಾಷಣದದ್ದಕ್ಕೂ ಹೆದರಿಕೆ, ಬೆದರಿಕೆಯೇ ರಾರಾಜಿಸುತ್ತಿತ್ತು. ಆದರೆ, ನಮ್ಮ ಪ್ರಧಾನಿ ಇಮ್ರಾನ್ ರೀತಿಯಲ್ಲಿ ಭಾಷಣ ಮಾಡದದ್ದೇ ಇದ್ದದ್ದು ಸಂತೋಷ".

" ಭಾರತದ ಗಾತ್ರ, ಸಾಧನೆ, ಸಂಸ್ಕೃತಿ, ಪರಂಪರೆ, ಸಾಮರ್ಥ್ಯದ ಬಗ್ಗೆ ಮೋದಿ ಮಾತನಾಡಿದರು. ಭಾರತ, ಪ್ರಧಾನಿ ಮೋದಿ ನೇತೃತ್ವದಲ್ಲಿ ಗೆದ್ದಿದೆ" ಇದು ಕಾಂಗ್ರೆಸ್ ಮುಖಂಡ ಸಿಂಘ್ವಿ ಮಾಡಿರುವ ಟ್ವೀಟಿನ ಭಾಷಾಂತರ.

ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್

ಇಮ್ರಾನ್ ಖಾನ್ ತಮ್ಮ ಐವತ್ತು ನಿಮಿಷಗಳ ತಮ್ಮ ಭಾಷಣದಲ್ಲಿ 70 ಬಾರಿ ಇಸ್ಲಾಂ, 21 ಬಾರಿ ಕಾಶ್ಮೀರ, 16 ಬಾರಿ ಭಾರತ, 12 ಬಾರಿ ಮೋದಿ, 10 ಬಾರಿ ಆರ್‌ಎಸ್ಎಸ್‌, 5 ಬಾರಿ ಹಿಂದೂ ವಿಚಾರಗಳನ್ನು ಪ್ರಸ್ತಾಪಿಸಿ ನೈಜ ಜಾಗಗತಿಕ ವಿಚಾರಗಳಿಂದಲೇ ದೂರ ಸರಿದಿದ್ದರು.

ಇದಕ್ಕೆ ತದ್ವಿರುದ್ಧ ಎನ್ನುವಂತೆ ನರೇಂದ್ರ ಮೋದಿಯು ಹವಾಮಾನ ವೈಪರೀತ್ಯ, ವಿಶ್ವ ಆರೋಗ್ಯ ಸಂಸ್ಥೆ, ಶೌಚಾಲಯ, ಸ್ವಚ್ಛತೆ ಹೀಗೆ ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಪ್ರಬುದ್ಧತೆಯನ್ನು ಮೆರೆದಿದ್ದರು.

English summary
Prime Minister Narendra Modi UN Speech: Congress Leader Abhishek Manu Singhvi tweeted and Applaud, No Comparison Between Modi And Imran Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X