• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಮದಾ ಯೋಜನೆ ವಿರೋಧಿಸಿದ ಮಹಿಳೆ ಜತೆ ರಾಹುಲ್‌ ಪಾದಯಾತ್ರೆ: ಮೋದಿ

|
Google Oneindia Kannada News

ಗುಜರಾತ್‌, ನವೆಂಬರ್ 20: ಭಾರತ್ ಜೋಡೋ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಅವರೊಂದಿಗೆ ರಾಹುಲ್‌ ಗಾಂಧಿ ನಡೆದಿದ್ದಾರೆ. ಪ್ರಧಾನಿ ಮೋದಿ ಇಂದು ರಾಹುಲ್ ಗಾಂಧಿಯನ್ನು ಗುರಿಯಾಗಿಸಿದ್ದಾರೆ. ಕಾಂಗ್ರೆಸ್‌ನವರು ಮತ ಕೇಳಲು ಬಂದಾಗ, ನರ್ಮದಾ ಅಣೆಕಟ್ಟಿನ ವಿರುದ್ಧ ಕಿಡಿಕಾರಿದವರ ಮಹಿಳೆಯ ಹೆಗಲ ಮೇಲೆ ಕೈಯಿಟ್ಟು ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಮೋದಿ ಗುಜರಾತ್‌ನಲ್ಲಿ ರಾಹುಲ್‌ ಗಾಂಧಿಗೆ ತರಾಟೆಗೆ ತೆಗೆದುಕೊಂಡರು.

ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ಸಂಪೂರ್ಣ ಬಲವನ್ನು ನೀಡಿವೆ. ಇಂದು ಪ್ರಧಾನಿ ಮೋದಿ ಗುಜರಾತ್‌ನ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಬೃಹತ್ ರ್‍ಯಾಲಿ ನಡೆಸುತ್ತಿದ್ದಾರೆ. ಗುಜರಾತ್‌ನ ಧೋರಾಜಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸದೆ, "ಮೂರು ದಶಕಗಳಿಂದ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡು ಬಂದಿದೆ" ಎಂದು ಹೇಳಿದರು.

ಬ್ರಿಟಿಷರಿಗೆ ಸಾವರ್ಕರ್‌ ಕ್ಷಮೆ ಕೋರಿದ್ದು ನಿಜ: ರಾಹುಲ್ ಹೇಳಿಕೆಗೆ ಮಹಾತ್ಮ ಗಾಂಧಿ ಮರಿಮೊಮ್ಮಗ ಬೆಂಬಲ ಬ್ರಿಟಿಷರಿಗೆ ಸಾವರ್ಕರ್‌ ಕ್ಷಮೆ ಕೋರಿದ್ದು ನಿಜ: ರಾಹುಲ್ ಹೇಳಿಕೆಗೆ ಮಹಾತ್ಮ ಗಾಂಧಿ ಮರಿಮೊಮ್ಮಗ ಬೆಂಬಲ

ಇದರೊಂದಿಗೆ ಕಾಂಗ್ರೆಸ್‌ನವರು ಮತ ಕೇಳಲು ಬಂದಾಗ ನರ್ಮದಾ ಅಣೆಕಟ್ಟಿನ ವಿರುದ್ಧ ನಿಂತಿದ್ದವರ ಹೆಗಲ ಮೇಲೆ ಕೈಯಿಟ್ಟು ಪಾದಯಾತ್ರೆ ಏಕೆ ಮಾಡುತ್ತಿದ್ದೀರಿ ಎಂದು ಕೇಳಿ ಎಂದು ಪ್ರಧಾನಿ ಮೋದಿ ಹೇಳಿದರು. ಇದಾದ ಬಳಿಕ ಪ್ರಧಾನಿ ಮೋದಿ ನರ್ಮದಾ ಅಣೆಕಟ್ಟು ಕಟ್ಟದಿದ್ದರೆ ಏನಾಗುತ್ತಿತ್ತು ಎಂದು ಜನರನ್ನು ಪ್ರಶ್ನಿಸಿದರು.

ಸರ್ದಾರ್ ಸರೋವರ ಅಣೆಕಟ್ಟು ಯೋಜನೆ ನಿಲ್ಲಿಸಲು ಪ್ರಯತ್ನ

ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಡೆಯಲು ಅನೇಕರು ಪ್ರಯತ್ನಿಸಿದ್ದರಿಂದ ವಿಳಂಬವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು. ಕಛ್ ಮತ್ತು ಕಠಿಯಾವರದ ದಾಹ ನೀಗಿಸಲು ನರ್ಮದಾ ಯೋಜನೆಯೊಂದೇ ಪರಿಹಾರ ಎಂದ ಪ್ರಧಾನಿ, ನಿನ್ನೆ ಕಾಂಗ್ರೆಸ್ ಮುಖಂಡರೊಬ್ಬರು ನರ್ಮದಾ ವಿರೋಧಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಪಾದಯಾತ್ರೆ ನಡೆಸುತ್ತಿರುವುದನ್ನು ನೀವು ನೋಡಿರಬೇಕು ಎಂದು ಮೋದಿ ಹೇಳಿದರು.

PM Modi targets Rahul for walking with Medha Patkar during Bharat Jodo Yatra

ಮೇಧಾ ಪಾಟ್ಕರ್ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು

ನರ್ಮದಾ ವಿರೋಧಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ನವೆಂಬರ್ 17ರಂದು ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಭೇಟಿಯ ವೇಳೆ ರಾಹುಲ್ ಗಾಂಧಿ ಅವರು ಮೇಧಾ ಪಾಟ್ಕರ್ ಅವರ ಭುಜದ ಮೇಲೆ ಕೈಯಿಟ್ಟು ಮಾತನಾಡುತ್ತಿರುವುದನ್ನು ಕಾಂಗ್ರೆಸ್ ಸ್ವತಃ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

ನರೇಂದ್ರ ಮೋದಿ
Know all about
ನರೇಂದ್ರ ಮೋದಿ
English summary
Without naming Rahul Gandhi, Prime Minister Narendra Modi on Sunday attacked the Congress leader and his Bharat Jodo Yatra as he addressed a public meeting in Gujarat's Dhoraji ahead of the assembly election in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X