NaMo 3.0: ಪ್ರದಗ್ರಹಣ ಬಳಿಕ ರೈತಪರ ಕಡತಕ್ಕೆ ಮೊದಲ ಸಹಿ ಹಾಕಿದ ಪ್ರಧಾನಿ
ಬೆಂಗಳೂರು, ಜೂನ್ 10: ದೇಶದ ಮೂರನೇ ಭಾರಿಗೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಭಾರಿಸಿರುವ ನರೇಂದ್ರ ಮೋದಿಯವರು ನೆನ್ನೆ ಭಾನುವಾರ ಪ್ರಧಾನಿಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದರ ಬೆನ್ನೆಲ್ಲೆ ಪ್ರಧಾನಿ ರೈತರ ಪರವಾದ ನಿರ್ಧಾರಕ್ಕೆ ಮೊದಲ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರೈತಪರ ಎಂಬುದನ್ನು ಸಾಬೀತು ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿ ಮೈತ್ರಿ ಮೂಲಕ ಪ್ರಧಾನಿ ಮೋದಿಯವರು ಮೂರನೇ ಭಾರಿಗೆ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರು ರೈತರ ಪರವಾದ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಪಿಎಂ ಕಿಸಾನ್ ನಿಧಿ ನಿಧಿಯ (PM-Kisan Samman Nidhi) 17ನೇ ಕಂತಿನ ಬಿಡುಗಡೆಗೆ ಪ್ರಧಾನಿ ಅವರು ಸಹಿ ಹಾಕಿದರು.

20,000 ಕೋಟಿ ರೂ. ಬಿಡುಗಡೆ
ಇಂದು ಪ್ರಧಾನಿ ಮೋದಿಯವರು ತಮ್ಮ ಕಚೇರಿಯಲ್ಲಿ ಸಹಿ ಮಾಡಿದ ಮೊದಲ ಕಡತವು ರೈತರನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮವಾದ ಪಿಎಂ ಕಿಸಾನ್ ನಿಧಿಯಡಿ ಹಣ ಬಿಡುಗಡೆಗೆ ಸಂಬಂಧಿಸಿದೆ. ಪಿಎಂ ಕಿಸಾನ್ ಯೋಜನೆಯಡಿ 17ನೇ ಕಂತಿನಲ್ಲಿ ಸುಮಾರು 20,000 ಕೋಟಿ ರೂಪಾಯಿ ಬಿಡುಗಡೆ ಆಗಲಿದೆ. ದೇಶದ ಸುಮಾರು 9.3 ಕೋಟಿ ರೈತ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.
ನಮ್ಮ ಸರ್ಕಾರ ಕಿಸಾನ್ ಕಲ್ಯಾಣಕ್ಕೆ (ರೈತ ಕಲ್ಯಾಣ) ಸಂಪೂರ್ಣ ಬದ್ಧವಾಗಿದೆ. ಹೀಗಾಗಿಯೇ ಅಧಿಕಾರಕ್ಕೆ ಬಂದ ಕೂಡಲೇ ರೈತ ಕಲ್ಯಾಣಕ್ಕೆ ಸಂಬಂಧಿಸಿದ, ರೈತರು ಮತ್ತು ಕೃಷಿ ಕ್ಷೇತ್ರ ಯೋಜನೆಗಳ ಕಡತಕ್ಕೆ ಸಹಿ ಹಾಕಿದ್ದೇವೆ. ನಮ್ಮ ಸರ್ಕಾರದಿಂದ ಭವಿಷ್ಯದಲ್ಲಿ ರೈತಪರ ಕೆಲಸಗಳು ಆಗಲಿವೆ.
ಕೇಂದ್ರ ಸಚಿವರ ಖಾತೆಗಳ ಪಟ್ಟಿ ಪ್ರಕಟ ಸಾಧ್ಯತೆ
ಭಾರತದ ಹೊಸ ಸರ್ಕಾರದ ಮೊದಲ ಸಂಪುಟದ ಸಭೆ ಸೋಮವಾರ (ಜೂನ್ 10) ಸಂಜೆ ದೇಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಜರುಗಲಿದೆ. ಇಂದು ಹೊಸದಾಗಿ ಮಂತ್ರಿ ಸ್ಥಾನದ ಪ್ರಮಾಣ ವಚದನ ಸ್ವೀಕರಿಸಿದ ಸಚಿವರ ಖಾತೆಗಳು ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಅಧಿಕಾರಕ್ಕೆ ಬರುವ ಮೂಲದ ಎನ್‌ಡಿಎ ಸರ್ಕಾರ ತನ್ನ 100 ದಿನಗಳ ಕಾರ್ಯಸೂಚಿ ಹೇಗಿರಬೇಕು ಎಂಬ ಅಂಶಗಳನ್ನು ಸಿದ್ಧಪಡಿಸಿತ್ತು. ಅದರಲ್ಲಿ 'ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಿನ್ (PMAY-G)' ಅಡಿಯಲ್ಲಿ 2 ಕೋಟಿ ಹೆಚ್ಚುವರಿ ಮನೆಗಳ ನಿರ್ಮಿಸುವ ಪ್ರಸ್ತಾವನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಆರ್ಥಿಕ ನೆರವು ಶೇ. 50ರಷ್ಟು ಹೆಚ್ಚಳ
ಈ ಉಪಕ್ರಮ ಅನುಷ್ಠಾನಕ್ಕೆ ಬಂದಲ್ಲಿ ಸಮಗ್ರ ಕ್ರಿಯಾ ಯೋಜನೆ (ಐಎಪಿ) ಅಡಿಯಲ್ಲಿ ದೇಸದ ಪ್ರತಿ ಫಲಾನುಭವಿಯು ಅಂದರೆ ಬಯಲು ಸೀಮೆಯ ಫಲಾನುಭವಿಗೆ 1.2 ಲಕ್ಷ ಮತ್ತು ಗುಡ್ಡಗಾಡು ರಾಜ್ಯಗಳು, ಕಷ್ಟಕರ ಪ್ರದೇಶಗಳು ಮತ್ತು ಬುಡಕಟ್ಟು ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ರೂ 1.30 ಲಕ್ಷದವರೆಗೆ ಹಣ ಪಡೆಯಲಿದ್ದಾರೆ.
PMAY-G ಅಡಿಯಲ್ಲಿ ಫಲಾನುಭವಿಗಳಿಗೆ ಈಡುವ ಆರ್ಥಿಕ ನೆರವನ್ನು ಶೇಕಡಾ 50ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಈ ಹೆಚ್ಚುವರಿ 2 ಕೋಟಿ ಮನೆಗಳು ಸ್ಥಾಪಿಸುವ ಉಪಕ್ರಮ 2016 ರಲ್ಲಿ ಪ್ರಾರಂಭವಾಗಿದೆ. ಅಲ್ಲಿಂದ ಈವರೆಗೆ ಯೋಜನೆಯಡಿ 2.95 ಕೋಟಿಗೂ ಹೆಚ್ಚು ಮನೆಗಳು ಮಂಜೂರಾಗಿವೆ.












Click it and Unblock the Notifications