ಆಪರೇಷನ್ ಸಿಂಧೂರ: ಇಂದು ಬಿಜೆಪಿಯಿಂದ 'ತಿರಂಗಾ ಯಾತ್ರೆ' ಶುರು, ಧ್ವನಿಯಾದ ಪ್ರಧಾನಿ ಮೋದಿ

ನವದೆಹಲಿ, ಮೇ 13: ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಕದನ ವಿರಾಮ ಘೋಷಣೆಯ ಎರಡು ದಿನಗಳ ನಂತರ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವು , ಆಪರೇಷನ್ ಸಿಂಧೂರ್ ಮತ್ತು ಮುಂದಿನ ಹಾದಿಯ ಕುರಿತು ಸ್ಪಷ್ಟ ಸಂದೇಶವನ್ನು ನೀಡುವ ಮೂಲಕ, ಈ ವಿಷಯದ ಬಗ್ಗೆ ದೇಶಾದ್ಯಂತ ಪಕ್ಷದ ಪ್ರಚಾರಕ್ಕೆ ನಾಂದಿ ಹಾಡಿದೆ.

ಇಂದಿನಿಂದ ಬಿಜೆಪಿ ದೇಶಾದ್ಯಂತ 11 ದಿನಗಳ ಕಾಲ ತಿರಂಗಾ ಯಾತ್ರೆಗಳನ್ನು ನಡೆಸಲಿದೆ. ಆಪರೇಷನ್‌ ಸಿಂಧೂರ ಯಶಸ್ವಿಯಾಗಿರುವ ಕಾರಣಕ್ಕೆ ದೇಶದಾದ್ಯಂತ ಮೇ 13 ರಿಂದ 23 ರವರೆಗೆ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳುವುದಾಗಿ ಬಿಜೆಪಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಾಯಕತ್ವ ಹಾಗೂ ದೇಶದ ಸಶಸ್ತ್ರ ಪಡೆಗಳ ಸಾಧನೆಯನ್ನು ಜನರಿಗೆ ತಲುಪಿಸುವ ಕಾರ್ಯಕ್ರಮದ ಭಾಗವಾಗಿ ಯಾತ್ರೆಯನ್ನ ಬಿಜೆಪಿಯೂ ಹಮ್ಮಿಕೊಂಡಿದೆ.

PM Modi sets tone for BJP outreach on Operation Sindoor Tiranga Yatras begin today

ಇನ್ನೂ ಈ ಯಾತ್ರೆಯ ಮೂಲಕ ಬಿಜೆಪಿಯೂ ಜನರನ್ನು ಒಗ್ಗೂಡಿಸಲು ಯೋಜಿಸುತ್ತಿದೆ. ಈ ಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಕೇಂದ್ರ ಸಚಿವರು ಹಾಗೂ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಯಾಗಲಿದ್ದಾರೆ ಎಂದು ಬಿಜೆಪಿಯೂ ತಿಳಿಸಿದೆ.

ಕಳೆದ ಭಾನುವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ನಿವಾಸದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರ ಭಾಗಿಯಾಗಿದ್ದರು. ಆಪರೇಷನ್‌ ಸಿಂಧೂರ ಬಗ್ಗೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸಿದ್ದು, ಭಾರತೀಯ ಸೇನೆಯ ಸಾಧನೆ ಹಾಗೂ ರಾಷ್ಟ್ರೀಯತೆಗಾಗಿ ಪಕ್ಷ ಯಾವಾಗಲೂ ಜೊತೆಗೆ ನಿಲ್ಲುತ್ತದೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಈ ವಿಚಾರದಲ್ಲಿ ಮುನ್ನಡೆ ಸಾಧಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜನಸಂಪರ್ಕ ಕಾರ್ಯಕ್ರಮಗಳನ್ನು ಮುಂದುವರಿಸಲು ಉನ್ನತ ಮಟ್ಟದಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದವು. ರಾಜ್ಯ ಘಟಕಗಳಿಂದ ಬಂದ ಪ್ರತಿಕ್ರಿಯೆಯನ್ನು ಹಿರಿಯ ನಾಯಕರು ಸಹ ಪರಿಗಣಿಸಿತು ಎಂದು ಪಕ್ಷದ ಮೂಲವೊಂದು ತಿಳಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ , ಸಶಸ್ತ್ರ ಪಡೆಗಳು ಪ್ರತಿದಿನವೂ ಮಾಹಿತಿ ನೀಡುತ್ತಿವೆ. ಒಮ್ಮೆ ಅಲ್ಲ, ಎರಡು ಬಾರಿ, ಕೆಲವೊಮ್ಮೆ ದಿನಕ್ಕೆ ಮೂರು ಬಾರಿ. ವಿದೇಶಾಂಗ ಕಾರ್ಯದರ್ಶಿ ಮಾತನಾಡುತ್ತಿದ್ದಾರೆ. ಬಿಜೆಪಿಯ ನಿಲುವು ಸರ್ಕಾರದ ನಿಲುವು. ಇದು ಪ್ರಧಾನಿ ನೇತೃತ್ವದ ಸರ್ಕಾರ. ನಾವೆಲ್ಲರೂ ಅದರೊಂದಿಗೆ ಹೊಂದಿಕೆಯಾಗಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಮತ್ತು ವಿದೇಶಾಂಗ ಸಚಿವಾಲಯವು ಭಾರತದ ನಿಲುವನ್ನು ಹೆಚ್ಚಿನ ಮಟ್ಟದ ಕೌಶಲ್ಯ ಮತ್ತು ದೃಢನಿಶ್ಚಯದಿಂದ ವ್ಯಕ್ತಪಡಿಸುವಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.

ಆಪರೇಷನ್ ಸಿಂಧೂರ್ ಆರಂಭವಾದ ನಂತರದ ಬಿಜೆಪಿಯ ಮೊದಲ ಮಾಧ್ಯಮಗೋಷ್ಠಿಯಲ್ಲಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮಾತನಾಡಿ, ಪಹಲ್ಗಾಮ್ ದಾಳಿಯ ಹಿಂದಿರುವ ಭಯೋತ್ಪಾದಕರಿಗೆ ಅವರ ಕಲ್ಪನೆಗೂ ಮೀರಿದ ಶಿಕ್ಷೆ ನೀಡುವ ಮತ್ತು ಅವರ ಸುರಕ್ಷಿತ ತಾಣಗಳನ್ನು ನೆಲಸಮ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ ಎಂದು ತಿಳಿಸಿದರು. ಆಪರೇಷನ್ ಸಿಂಧೂರ್ ತನ್ನ ಗುರಿಗಳಲ್ಲಿ 100 ಪ್ರತಿಶತವನ್ನು ತಲುಪುವುದರೊಂದಿಗೆ, ಪಾಕಿಸ್ತಾನವು ಒಂಬತ್ತು ಭಯೋತ್ಪಾದಕ ತಾಣಗಳು, 11 ವಾಯುನೆಲೆಗಳು, 100 ಕ್ಕೂ ಹೆಚ್ಚು ಭಯೋತ್ಪಾದಕರು, 50 ಸೈನಿಕರು ಸಾವನ್ನಾಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+