ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನದ ಮಾತು ಪೋಗ್ರಾಂನಿಂದ 10 ಕೋಟಿ ರು ಆದಾಯ

By Mahesh
|
Google Oneindia Kannada News

ನವದೆಹಲಿ, ಜುಲೈ 20: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಪ್ರತಿ ತಿಂಗಳು ರೇಡಿಯೋದಲ್ಲಿ ನಡೆಸಿಕೊಡುವ 'ಮನ್ ಕಿ ಬಾತ್' ಕಾರ್ಯಕ್ರಮದಿಂದ ಆಲ್ ಇಂಡಿಯಾ ರೇಡಿಯೋಗೆ 10 ಕೋಟಿ ಆದಾಯ ಬಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಹೇಳಿದ್ದಾರೆ.

2015-16ರಲ್ಲಿ ಮನ್ ಕಿ ಬಾತ್ ನಿಂದ 4.78 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. 2016-17ರಲ್ಲಿ 5.19 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಸಚಿವ ರಾಜ್ಯವರ್ಧನ್ ರಾಥೋಡ್ ಅವರು ಲೋಕಸಭೆಗೆ ಬುಧವಾರದಂದು ತಿಳಿಸಿದರು.

PM Modi’s Mann Ki Baat generates Rs 10 crore revenue for All India Radio in last 2 fiscals


ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮವು 18 ಭಾಷೆ ಮತ್ತು 33 ಉಪ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಯೂಟ್ಯೂಬ್, ಮೋದಿ ವೆಬ್ ಸೈಟ್, ಆಕಾಶವಾಣಿ ತಾಣಗಳಲ್ಲಿ ನೇರ ಪ್ರಸಾರ ವಿರುತ್ತದೆ.

ಪ್ರಧಾನಿ ಭಾಷಣದ ಇಂಗ್ಲಿಷ್ ಮತ್ತು ಸಂಸ್ಕೃತ ಆವೃತ್ತಿಯನ್ನು ಕೂಡ ಪ್ರಸಾರ ಮಾಡಲು ಸಿದ್ಧತೆ ನಡೆದಿದೆ ಎಂದು ರಾಜ್ಯವರ್ಧನ್ ರಾಥೋಡ್ ತಿಳಿಸಿದರು. 2014ರ ಅಕ್ಟೋಬರ್ 3ರಂದು ಮೊದಲ ಬಾರಿಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲಿಂದ ಇಲ್ಲಿ ತನಕ ದೇಶದ ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರೊಡನೆ ಸಂಪರ್ಕ ಹೊಂದಲಾಗಿದೆ. ಹಲವಾರು ಯಶೋಗಾಥೆಗಳು ದೇಶದ ಜನರಿಗೆ ಕೇಳಲು ಸಿಕ್ಕಿದೆ.(ಪಿಟಿಐ)

English summary
Prime Minister Narendra Modi's monthly radio address 'Mann Ki Baat' has generated a revenue of about Rs 10 crore for the All India Radio (AIR) in the last two fiscals, the Lok Sabha was informed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X