ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಸಂಚಿಕೆ ಪೂರೈಸಿದ 'ಮನ್ ಕೀ ಬಾತ್'; ರೇಡಿಯೋ ಕಾರ್ಯಕ್ರಮದ ಗುಟ್ಟು ತೆರೆದಿಟ್ಟ ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ಭಾನುವಾರ (ನವೆಂಬರ್ 25) ಐವತ್ತು ಸಂಚಿಕೆಗಳನ್ನು ಪೂರೈಸಿತು. ಇದೇ ಸಂದರ್ಭದಲ್ಲಿ ರೇಡಿಯೋ ಕಾರ್ಯಕ್ರಮದ ಆಲೋಚನೆ ಬಂದಿದ್ದು ಹೇಗೆ ಹಾಗೂ ಈ ವರೆಗಿನ ಪಯಣವನ್ನು ನೆನಪಿಸಿಕೊಂಡರು.

ಆಲ್ ಇಂಡಿಯಾ ರೇಡಿಯೋದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೋದಿ ಬರಬಹುದು, ಹೋಗಬಹುದು. ಆದರೆ ಈ ದೇಶ ಶಾಶ್ವತವಾಗಿರುತ್ತದೆ. ನಮ್ಮ ಸಂಸ್ಕೃತಿಯು ಅಮರವಾಗಿರುತ್ತದೆ ಎಂದು ಹೇಳಿದ್ದಾರೆ.

ಮೋದಿ ಮನ್ ಕೀ ಬಾತ್ ನಲ್ಲಿ ಸರ್ದಾರ್ ಪಟೇಲ್, ಬಿಷ್ಣೋಯ್ ಸಮುದಾಯ ಉಲ್ಲೇಖ ಮೋದಿ ಮನ್ ಕೀ ಬಾತ್ ನಲ್ಲಿ ಸರ್ದಾರ್ ಪಟೇಲ್, ಬಿಷ್ಣೋಯ್ ಸಮುದಾಯ ಉಲ್ಲೇಖ

ಡೇರಾ ಬಾಬಾ ನಾನಕ್- ಕರ್ತರ್ ಪುರ್ ಸಾಹಿಬ್ ರಸ್ತೆ ಕಾರಿಡಾರ್ ಯೋಜನೆಯನ್ನು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯ ತನಕ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಸರಕಾರವು ಬಹಳ ಮುಖ್ಯವಾದ ತೀರ್ಮಾನ ಮಾಡಿದೆ. ಅದು ಕರ್ತರ್ ಪುರ್ ಕಾರಿಡಾರ್ ನ ಆರಂಭ. ಈ ಮೂಲಕ ನಮ್ಮ ದೇಶದ ಜನ ಸುಲಭವಾಗಿ ಪಾಕಿಸ್ತಾನದಲ್ಲಿನ ಕರ್ತರ್ ಪುರ್ ಗೆ ತೆರಳಬಹುದು ಹಾಗೂ ಗುರು ನಾನಕ್ ದೇವ್ ರ ಪವಿತ್ರ ಸ್ಥಳಕ್ಕೆ ಭೇಟಿ ನೀಡಬಹುದು ಎಂದಿದ್ದಾರೆ.

PM Modi reveals why radio program started in 50th Mann Ki Baat

ಮನ್ ಕೀ ಬಾತ್ ಆರಂಭಿಸಿದಾಗ ನಾನು ನಿರ್ಧರಿಸಿದ್ದೆ: ಇದರಲ್ಲಿ ರಾಜಕೀಯ ಸೇರಬಾರದು. ಸರಕಾರದ ಬಗ್ಗೆ ಹೊಗಳಿಕೆ ಇರಬಾರದು ಅಥವಾ ನನ್ನ ಹೆಸರು ಹೇಳಬಾರದು. ನನ್ನ ನಿರ್ಧಾರಕ್ಕೆ ಸ್ಫೂರ್ತಿ ಹಾಗೂ ಶಕ್ತಿ ತುಂಬಿದವರು ನೀವು. ಮನ್ ಕೀ ಬಾತ್ ಅಂದರೆ ಜನರ ಬಗ್ಗೆಯೇ ಹೊರತು ರಾಜಕಾರಣ ಅಲ್ಲ ಎಂದಿದ್ದಾರೆ.

ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ

ಮನ್ ಕೀ ಬಾತ್ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದಾರೆ. ಯಾವುದೇ ರಾಜಕಾರಣಿ ಮಾಧ್ಯಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಲ್ಲ. ತಮಗೆ ಸರಿಯಾದ ಕವರೇಜ್ ಸಿಗ್ತಿಲ್ಲ ಅಥವಾ ನಕಾರಾತ್ಮಕ ಕವರೇಜ್ ಸಿಗ್ತಿದೆ ಅಂದುಕೊಳ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಎತ್ತಿದ ವಿಚಾರಗಳಿಗೆ ಮಾಧ್ಯಮಗಳು ಪ್ರಚಾರ ನೀಡಿದವು ಎಂದಿದ್ದಾರೆ.

1998ರಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ತೀರಾ ತಲುಪಲು ಸಾಧ್ಯವಾಗದ ಜಾಗದಲ್ಲೂ ಡಾಬಾವೊಂದರ ಮಾಲೀಕ ರೇಡಿಯೋ ಮೂಲಕ ಮಾಹಿತಿ- ಸುದ್ದಿ ಕೇಳುತ್ತಿದ್ದುದನ್ನು ನೋಡಿದೆ. ಆಗಲೇ ಈ ರೀತಿ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.

ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

ಆಗ ರೇಡಿಯೋ ಚಾಲೂ ಮಾಡಿದ ಆ ವ್ಯಕ್ತಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಘೋಷಣೆ ಮಾಡಿದ, ಇಂದು ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದ ಮಹತ್ವದ ದಿನ ಎಂದಾಗ ಬಹಳ ಸಂತಸ ಪಟ್ಟಿದ್ದನ್ನು ನೋಡಿದ್ದೆ ಎಂದಿದ್ದಾರೆ.

ಆಗಿನಿಂದ ನನ್ನ ಮನಸಿನಲ್ಲಿ ಉಳಿದುಹೋಗಿತ್ತು: ಜನರ ಜತೆ ಬೆಸೆದುಕೊಂಡಿದೆ ಹಾಗೂ ಅದರ ಶಕ್ತಿ ಅಪಾರವಾದುದು ಎಂದು ಮೋದಿ ಹೇಳಿದ್ದಾರೆ.

English summary
Prime Minister Narendra Modi's monthly radio broadcast 'Mann Ki Baat' completed 50 episodes today, during which he shared the reason behind the conception of the radio programme and its journey till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X