ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

PM Modi, President Kovind Address NEP 2020 Live: ಶಿಕ್ಷಣ ನೀತಿಯಲ್ಲಿ ಸರ್ಕಾರ ಪ್ರಭಾವ ಕಡಿಮೆ ಇರಬೇಕು : ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7 : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 'ರಾಷ್ಟ್ರೀಯ ಶಿಕ್ಷಣ ನೀತಿ' ಕುರಿತ ರಾಜ್ಯಪಾಲರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದ ಶೀರ್ಷಿಕೆ 'ಉನ್ನತ ಶಿಕ್ಷಣ ಪರಿವರ್ತನೆಯಲ್ಲಿ ಎನ್ಇಪಿ-2020 ಪಾತ್ರ' ಎಂಬುದಾಗಿದೆ.

ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದೆ.

 PM Modi, President Kovind Address conference on New Education Policy Live Updates in Kannada

ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಆಯೋಜಿಸಿರುವ ಈ ಸಮಾವೇಶದ ಶೀರ್ಷಿಕೆ 'ಉನ್ನತ ಶಿಕ್ಷಣ ಪರಿವರ್ತನೆಯಲ್ಲಿ ಎನ್ಇಪಿ-2020 ಪಾತ್ರ' ಎಂಬುದಾಗಿದೆ. ಎಲ್ಲಾ ರಾಜ್ಯಗಳ ರಾಜ್ಯಪಾಲರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Newest FirstOldest First
11:02 AM, 7 Sep

ಎನ್‌ಇಪಿ 2020 ಬಗ್ಗೆ ನಿಮ್ಮ ರಾಜ್ಯ, ಕೇಂದ್ರಾಡಳಿತ ಪ್ರದೇಶದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಮಾವೇಶ ಆಯೋಜನೆ ಮಾಡಿ, ನಿರಂತರವಾಗಿ ಚರ್ಚೆಗಳು ನಡೆಯಲಿ ಎಂದು ನರೇಂದ್ರ ಮೋದಿ ಕರೆ ನೀಡಿದರು.
11:00 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮೋದಿ ಮಾತು
11:00 AM, 7 Sep

ಪ್ರತಿ ಕಾಲೇಜು, ವಿಶ್ವವಿದ್ಯಾಲಯದ ಮಟ್ಟದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀತಿಯನ್ನು ಪರಿಚಯ ಮಾಡಿಸುವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ.
10:58 AM, 7 Sep

ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಗ್ರಾಮ ಮಟ್ಟಕ್ಕೆ ತಂತ್ರಜ್ಞಾನ ತಲುಪುತ್ತಿರುವುದನ್ನು ಗಮನಿಸಿ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇಂದು ವಿಡಿಯೋ ಮೂಲಕ ಯುವಕರು ಹಲವು ರೀತಿಯ ಚಾನೆಲ್ ನಡೆಸುತ್ತಿದ್ದಾರೆ. ತಂತ್ರಜ್ಞಾನ ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿದೆ.
10:57 AM, 7 Sep

ಇದು ಸರ್ಕಾರದ ಶಿಕ್ಷಣ ನೀತಿಯಲ್ಲ. ಇದು ದೇಶದ ಶಿಕ್ಷಣ ನೀತಿಯಾಗಿದೆ. ಹೇಗೆ ವಿದೇಶ, ರಕ್ಷಣಾ ನೀತಿ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು ಆಗುತ್ತದೆ. ಆಗ ಇಲ್ಲಿ ಯಾವ ಸರ್ಕಾರವಿದೆ, ಹಿಂದೆ ಯಾವ ಸರ್ಕಾರವಿತ್ತು? ಎಂಬುದು ಮುಖ್ಯವಾಗುವುದಿಲ್ಲ.
10:56 AM, 7 Sep

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ನಾವೆಲ್ಲರೂ ಸೇರಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಶಿಕ್ಷಣ ಸಚಿವಾಲಯದ ಕಡೆಯಿಂದ ಸಮಾವೇಶಗಳು ನಡೆಯುತ್ತಿವೆ. ಮುಕ್ತ ಮನಸ್ಸಿನಿಂದ ಬರುತ್ತಿರುವ ಸಲಹೆಗಳನ್ನು ಆಲಿಸಲಾಗುತ್ತಿದೆ.
10:55 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಪಠ್ಯ ಹೇಗಿರುತ್ತದೆ?, ಶಿಕ್ಷಕರು ಹೇಗೆ ಪಾಠ ಮಾಡಲಿದ್ದಾರೆ. ಆನ್‌ಲೈನ್ ಕಟೆಂಟ್‌ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ಚರ್ಚೆಗಳು ನಡೆಯುತ್ತಿವೆ.
Advertisement
10:53 AM, 7 Sep

ಜ್ಞಾನ ಯಾವುದೇ ಭಾಗದಿಂದ ಬಂದರೂ ಅದನ್ನು ಪಡೆದುಕೊಳ್ಳಬೇಕು. ಆದರೆ, ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾರಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ.
10:52 AM, 7 Sep

ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕಾಗಿ ಪ್ರಾಯೋಗಿಕ ಕಲಿಕೆ ಅಗತ್ಯವಿದೆ. ಅದು ತಳಮಟ್ಟದಲ್ಲಿ ಅಂದರೆ ಮಕ್ಕಳಿಂದಲೇ ಆರಂಭಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ.
10:49 AM, 7 Sep

ಹಲವಾರು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಅವುಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ. ಕೇವಲ ಬ್ಯಾಗ್, ಪುಸ್ತಕ, ಬೋರ್ಡ್ ಪರೀಕ್ಷೆಗಳಿಗೆ ಈ ಶಿಕ್ಷಣ ನೀತಿ ಅಂಟಿಕೊಂಡಿಲ್ಲ ಎಂದು ಮೋದಿ ಹೇಳಿದರು.
10:47 AM, 7 Sep

ಪ್ರತಿ ವಿದ್ಯಾರ್ಥಿಗೂ ಗಮನ ಕೊಡುವ ಮೂಲಕ ಅವರಿಗೆ ಕೌಶಲ್ಯ ಒದಗಿಸುವ ಕುರಿತು ಅಂಶಗಳನ್ನು ಸೇರಿಸಲಾಗಿದೆ. ಇಂತಹ ನೀತಿ ತಯಾರು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ ಎಂದು ಮೋದಿ ಹೇಳಿದರು.
10:45 AM, 7 Sep

ನಮ್ಮ ಘೋಷಣೆಯಾದ ಆತ್ಮ ನಿರ್ಭರ ಭಾರತಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯಕವಾಗಲಿದೆ. ಯುವಕರನ್ನು ಜ್ಞಾನ, ಕೌಶಲ್ಯವನ್ನು ಒದಗಿಸಲಿದೆ.
Advertisement
10:44 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಓದು, ಬರೆಯುವುದರ ಮೇಲೆ ಪ್ರಭಾವ ಬೀರುವುದಿಲ್ಲ. ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ.
10:42 AM, 7 Sep

ಎಲ್ಲಾ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರ ದೃಷ್ಟಿಕೋನದ ಫಲವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ತಯಾರುಗೊಂಡಿದೆ. ಅದರನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ.
10:42 AM, 7 Sep

ನಗರ, ಗ್ರಾಮಗಳಲ್ಲಿ ನೆಲೆಸಿರುವ ಜನರು ತಮ್ಮ ಅಭಿಪ್ರಾಯಗಳನ್ನು ಶಿಕ್ಷಣ ನೀತಿಯ ಕುರಿತು ವ್ಯಕ್ತಪಡಿಸಿದ್ದರು. 2 ಲಕ್ಷಕ್ಕು ಅಧಿಕ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ.
10:40 AM, 7 Sep

ಶಿಕ್ಷಣ ನೀತಿಯಲ್ಲಿ ಸರ್ಕಾರದ ಪ್ರಭಾವ ಕಡಿಮೆ ಇರಬೇಕು. ಅದರಲ್ಲಿ ಶಿಕ್ಷಕರ ಪಾತ್ರ ಹೆಚ್ಚಿರಬೇಕು ಎಂದು ನರೇಂದ್ರ ಮೋದಿ ಹೇಳಿದರು.
10:39 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಸಮಾವೇಶ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ನರೇಂದ್ರ ಮೋದಿ
10:38 AM, 7 Sep

ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ ಈ ಹಿಂದೆ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ರಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯ ಸುಧಾರಣೆಗಳು’’ ಕುರಿತ ಸಮಾವೇಶ ಆಯೋಜನೆ ಮಾಡಿತ್ತು. ಆಗ ಪ್ರಧಾನಿಗಳು ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.
10:37 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿಯ ನಾನಾ ಆಯಾಮಗಳ ಬಗ್ಗೆ ದೇಶಾದ್ಯಂತ ನಾನಾ ವೆಬಿನಾರ್ ಗಳು, ವರ್ಚುಯಲ್ ಸಮಾವೇಶಗಳು ಮತ್ತು ಶೃಂಗಸಭೆಗಳು ನಡೆಯುತ್ತಿವೆ.
10:36 AM, 7 Sep

ಎನ್ಇಪಿ ಅಡಿಯಲ್ಲಿ ಶಾಲಾ ಮತ್ತು ಉನ್ನತ ಶಿಕ್ಷಣ ಮಟ್ಟ ಎರಡಲ್ಲೂ ಮಹತ್ವದ ಸುಧಾರಣೆಗಳನ್ನು ತರಲು ಉದ್ದೇಶಿಸಲಾಗಿದೆ. ದೇಶಾದ್ಯಂತ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಚರ್ಚೆಗಳು ನಡೆಯುತ್ತಿದೆ.
10:35 AM, 7 Sep

ಹಿಂದೆ 1986ರಲ್ಲಿ ಶಿಕ್ಷಣ ಕುರಿತಾದ ರಾಷ್ಟ್ರೀಯ ನೀತಿ ಪ್ರಕಟವಾಗಿತ್ತು. 34 ವರ್ಷಗಳ ನಂತರ ಘೋಷಣೆಯಾದ ಶಿಕ್ಷಣ ನೀತಿ ಎಂದರೆ ಎನ್ಇಪಿ-2020.
10:34 AM, 7 Sep

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಎಲ್ಲಾ ರಾಜ್ಯಗಳ ರಾಜ್ಯಪಾಲರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
10:33 AM, 7 Sep

ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
10:32 AM, 7 Sep

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮಾವೇಶ ಆರಂಭವಾಗಿದೆ

English summary
President Ram Nath Kovind and Prime Minister Narendra Modi will address on the National Education Policy (NEP) 2020 today. Stay tuned for Latest Live updates and highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X