ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ದದ ಹೋರಾಟ:ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜೂ. 04: ಕೋವಿಡ್ ವಿರುದ್ಧ ಭಾರತದಲ್ಲಿ ಲಸಿಕೆ ಅಭಿವೃದ್ದಿಪಡಿಸಿದ ಹಾಗೂ ಒಂದು ವರ್ಷದೊಳಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ಕ್ರಮಗಳನ್ನು ಹೆಚ್ಚಿಸುತ್ತಿರುವ ಭಾರತೀಯ ವಿಜ್ಞಾನಿಗಳನ್ನು ಪ್ರಧಾನಿ ಶುಕ್ರವಾರ ಶ್ಲಾಘಿಸಿದ್ದಾರೆ.

ಕೋವಿಡ್‌ ಲಸಿಕೆ ಅಭಿಯಾನ ದೇಶದಲ್ಲಿ ಜನವರಿಯಲ್ಲಿ ಆರಂಭವಾಗಿದ್ದು ಈಗಾಗಲೇ ಹಲವು ತಿಂಗಳುಗಳು ಕಳೆದಿವೆ. ಈಗ ಲಸಿಕೆ ಕೊರತೆ ಕಾಣಿಸಿಕೊಂಡಿರುವ ನಡುವೆ ದೇಶೀಯ ಲಸಿಕೆ ಉತ್ಪಾದನೆ ವೇಗ ಹಾಗೂ ಪ್ರಮಾಣ ಅಧಿಕಗೊಳಿಸಲಾಗುತ್ತಿದೆ. ಹಾಗೆಯೇ ವಿದೇಶಿ ಲಸಿಕೆಗಳ ಸರಬರಾಜಿಗೆ ಮಾತುಕತೆ ನಡೆಸಲಾಗುತ್ತಿದೆ.

ಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ

ಶುಕ್ರವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸೊಸೈಟಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ''ಹಿಂದಿನ ಶತಮಾನದಲ್ಲಿ ಭಾರತದ ವಿಜ್ಞಾನಿಗಳು ವಿದೇಶದಲ್ಲಿ ಕೈಗೊಂಡ ಸಂಶೋಧನೆಯನ್ನು ತಾವು ಕೈಗೆತ್ತಿಕೊಳ್ಳು ವರ್ಷಗಳ ಕಾಲ ಕಾಯಬೇಕಾಗಿತ್ತು. ಆದರೆ ಈಗ ಭಾರತದ ವಿಜ್ಞಾನಿಗಳೇ ಸಂಶೋದನೆಯಲ್ಲಿ ಮುಂದಿದ್ದಾರೆ. ವಿದೇಶಗಳ ವಿಜ್ಞಾನಿಗಳ ಸಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.

PM Modi Praised Indian scientists for developing vaccine against Covid-19

''ವಿದೇಶದ ವಿಜ್ಞಾನಿಗಳ ವೇಗದಲ್ಲೇ ನಮ್ಮ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಮೋದಿ, ಒಂದು ಶತಮಾನದಲ್ಲಿ ಜಗತ್ತು ಅತಿದೊಡ್ಡ ಸವಾಲನ್ನು ಎದುರಿಸುತ್ತಿದೆ. ಆದರೆ ಇದನ್ನು ಸಮರ್ಥವಾಗಿ ವೈಜ್ಞಾನಿಕ ಸಮುದಾಯ ಎದುರಿಸಿದೆ. ಒಂದು ವರ್ಷದೊಳಗೆ ಲಸಿಕೆಗಳನ್ನು ತಯಾರಿಸುವುದು ಅಭೂತಪೂರ್ವ ಬೆಳವಣಿಗೆ'' ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ''ಈ ಸಂದರ್ಭದಲ್ಲೇ ಆತ್ಮನಿರ್ಭರ ಭಾರತದ ಘೋಷವಾಕ್ಯವನ್ನು ಪುನರ್‌ ಉಚ್ಛರಿಸಿದ ಪ್ರಧಾನಿ ಮೋದಿ, ಭಾರತವು ಈಗ ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಶಕ್ತಿಯ ಮೂಲಕ ಜಗತ್ತಿಗೆ ದಾರಿ ತೋರಿಸುತ್ತಿದೆ. ಸಾಫ್ಟ್‌ವೇರ್ ಮತ್ತು ಉಪಗ್ರಹ ಅಭಿವೃದ್ಧಿಯ ಮೂಲಕ ಇತರ ದೇಶಗಳಲ್ಲಿ ಪ್ರಗತಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ'' ಎಂದು ಹೇಳಿದರು.

''ಕೋವಿಡ್‌ -19 ಬಿಕ್ಕಟ್ಟು ಅದರ ವೇಗವನ್ನು ನಿಧಾನಗೊಳಿಸಬಹುದು ಆದರೆ ನಮ್ಮ ಸಂಕಲ್ಪ ಒಂದೇ ಆಗಿರುತ್ತದೆ. ಭಾರತವು ಕೃಷಿಯಿಂದ ಹಿಡಿದು ಖಗೋಳವಿಜ್ಞಾನ, ವಿಪತ್ತು ನಿರ್ವಹಣೆ, ರಕ್ಷಣಾ ತಂತ್ರಜ್ಞಾನ, ಲಸಿಕೆ ವರ್ಚುವಲ್ ರಿಯಾಲಿಟಿ, ಮತ್ತು ಜೈವಿಕ ತಂತ್ರಜ್ಞಾನದಿಂದ ಬ್ಯಾಟರಿ ತಂತ್ರಜ್ಞಾನದವರೆಗೆ ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಗಳಾಗಿರಲು ಭಾರತ ಬಯಸಿದೆ'' ಎಂದು ಮೋದಿ ಪ್ರತಿಪಾದಿಸಿದರು.

(ಒನ್ಇಂಡಿಯಾ ಸುದ್ದಿ)

English summary
PM Narendra Modi praised Indian scientists for developing vaccine and boosting other measures to fight against covid-19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X