ಗುಜರಾತ್: ಆಜಾನ್ ಗಾಗಿ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಮೌನರಾದ ಮೋದಿ!
ನವಸಾರಿ(ಗುಜರಾತ್), ನವೆಂಬರ್ 30: ಗುಜರಾತಿನ ನವರಾಸಿಯಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಆಜಾನ್ (ಮುಸ್ಲಿಮರ ಪ್ರಾರ್ಥನೆ) ಕೇಳುತ್ತಿದ್ದಂತೆಯೇ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಆಜಾನ್ ಮುಗಿಯುವವರೆಗೂ ಕಾಯುವ ಮೂಲಕ ಮುಸ್ಲಿಂ ಬಾಂಧವರ ಮೆಚ್ಚುಗೆ ಗಳಿಸಿದ್ದಾರೆ.
ಇದಕ್ಕೂ ಮೊದಲೂ ಒಮ್ಮೆ, ಪಶ್ಚಿಮ ಬಂಗಾಳದ ಖಾರಗ್ಪುರದಲ್ಲಿಯೂ ಮಾತನಾಡುತ್ತಿದ್ದ ಮೋದಿ, ಆಜಾನ್ ಕೇಳುತ್ತಿದ್ದಂತೆಯೇ ತಮ್ಮ ಮಾತನ್ನು ನಿಲ್ಲಿಸಿ, ಪ್ರಾರ್ಥನೆಗೆ ಗೌರವ ಸಲ್ಲಿಸಿದ್ದರು.

ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಒಂದರ ಹಿಂದೊಂದರಂತೇ ಸಾರ್ವಜನಿಕ ಸಭೆಗಳಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ.
PM Narendra Modi pauses speech during Navsari rally yesterday on hearing the Azaan #GujaratElection2017 pic.twitter.com/MfwN4orIyH
— ANI (@ANI) November 30, 2017












Click it and Unblock the Notifications