ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿಯವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ಕೇಂದ್ರ ಸರ್ಕಾರದ ವತಿಯಿಂದ ಬುಧವಾರ ಮಂಡಿಲಾಗಿರುವ 2017-18ರ ವಿತ್ತೀಯ ವರ್ಷದ ಬಜೆಟ್ ಆಶಾದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

|
Google Oneindia Kannada News

ನವದೆಹಲಿ, ಫೆಬ್ರವರಿ 1: ಮಂಗಳವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ವಿತ್ತೀಯ ಹಾಗೂ ರೈಲ್ವೇ ಬಜೆಟ್ ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದ್ದು, ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಅಸ್ತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

PM Modi lauds Central budget for 2017

ಪ್ರಧಾನಿ ನೀಡಿರುವ ಪ್ರತಿಕ್ರಿಯೆಯ ಪ್ರಮುಖ ಅಂಶಗಳು ಇವು -

- ಈ ಬಾರಿ, ರೈಲ್ವೇ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನಲ್ಲಿ ಸಮ್ಮಿಳಿತಗೊಳಿಸಿರುವುದರಿಂದ ದೇಶದ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಗಣನೀಯ ಏರಿಕೆ ಕಾಣಲಿದೆ.

- ನಾವು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಈ ಬಜೆಟ್ ತಯಾರಿಸಲಾಗಿದೆ.

- ಗೃಹ ನಿರ್ಮಾಣ ಕ್ಷೇತ್ರ ಈ ಬಾರಿಯ ಬಜೆಟ್ ನಿಂದ ಸಾಕಷ್ಟು ಅನುಕೂಲ ಪಡೆಯಲಿದೆ.

- ರೈಲ್ವೇ ಬಜೆಟ್ ನಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ

- ರೈತರು, ಬಡವರು ಹಾಗೂ ಹಳ್ಳಿಗರಿಗೆ ಹೊಸ ಅನುಕೂಲಗಳನ್ನು ಕಲ್ಪಿಸಿದೆ.

- ದಲಿತರು, ಹಿಂದುಳಿದವರು, ಶೋಷಿತರ ಅಭಿವೃದ್ಧಿಗೆ ವಿಶೇಷ ಒತ್ತು

English summary
Prime minister Narendra Modi expressed satisfaction over the budget of 2017 that presented by finance minister Arun Jaitley on Wednessday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X