ಕರುಣಾನಿಧಿ ಭೇಟಿಗೆ ಹೃದಯಸ್ಪರ್ಶಿ ಟಚ್ ನೀಡಿದ ಪ್ರಧಾನಿ ಮೋದಿ

Posted By:
Subscribe to Oneindia Kannada

ತಮಿಳು ದೈನಿಕ ದಿನತಂತಿ ಪತ್ರಿಕೆಯ 75ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕರುಣಾನಿಧಿ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಕ್ಷದ ಮೂಗುದಾರವನ್ನು ಮೋದಿ ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿಯ ನಡುವೆ, ಮೋದಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರನ್ನು ಭೇಟಿಯಾಗಿದ್ದಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವಿಶ್ರಾಂತಿಗೆ ನಮ್ಮ ಮನೆಗೆ ಬನ್ನಿ', ಕರುಣಾನಿಧಿಗೆ ಮೋದಿ ಆಹ್ವಾನ

ಇದಕ್ಕಿಂತಲೂ ಹೆಚ್ಚಾಗಿ ಹಿರಿಯ ರಾಜಕಾರಣಿ ಕರುಣಾನಿಧಿಯವರನ್ನು ದೆಹಲಿಯ ನನ್ನ ನಿವಾಸಕ್ಕೆ ಬಂದು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಪ್ರಧಾನಿ ಆಹ್ವಾನಿಸಿ, ಕರುಣಾನಿಧಿ ಜೊತೆಗಿನ ಭೇಟಿಗೆ ಹೃದಯಸ್ಪರ್ಶಿ ಟಚ್ ನೀಡಿದ್ದಾರೆ. ಈ ಭೇಟಿ, ಏನು ಮಾಡಿದರೂ , ಮೋದಿ ಕೃಪಾಕಟಾಕ್ಷ ನಮಗಿದೆ ಎನ್ನುವ ಗುಂಗಿನಲ್ಲಿರುವ ಎಐಎಡಿಎಂಕೆ ಮುಖಂಡರಿಗೆ 'ವಾರ್ನಿಂಗ್' ಎನ್ನುವ ಮಾತು ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ.

ಚೆನ್ನೈ ಪ್ರವಾಸ ಪೂರ್ವನಿಗದಿತವಾಗಿದ್ದರೂ, ಕರುಣಾನಿಧಿಯವರನ್ನು ಭೇಟಿಯಾಗುವ ಮಾಹಿತಿ ಭಾನುವಾರ (ನ 5) ಮಧ್ಯಾಹ್ನದ ಹೊತ್ತಿಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಡಿಎಂಕೆ ಪ್ರಧಾನ ಕಚೇರಿಗೆ ಬಂದಿದ್ದು. ವಿಷಯ ತಿಳಿದ, ಕರುಣಾನಿಧಿ ಪುತ್ರ ಸ್ಟಾಲಿನ್, ಶಾರ್ಜಾ ಪ್ರವಾಸವನ್ನು ಮೊಟಕುಗೊಳಿಸಿ ಚೆನ್ನೈಗೆ ವಾಪಸ್ ಆಗಿದ್ದರು.

ಸುಮಾರು ಹದಿನೈದು ನಿಮಿಷ ಕರುಣಾನಿಧಿ ಮನೆಯಲ್ಲಿದ್ದ ಮೋದಿ, ಸ್ಟಾಲಿನ್ ಬಳಿ ಅವರ ತಂದೆಯ ಆರೋಗ್ಯದ ಮಾಹಿತಿಯನ್ನು ಪಡೆದರು. ಚೆನ್ನೈನ ಗೋಪಾಲಪುರಂ ನಿವಾಸದಲ್ಲಿ ಕರುಣಾನಿಧಿಯವರನ್ನು ಸೋಮವಾರ (ನ 6) ಭೇಟಿಯಾದ ಮೋದಿ, ಕರುಣಾನಿಧಿಯವರ ಕೈಹಿಡಿದು ಆರೋಗ್ಯ ವಿಚಾರಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬನ್ನಿ ದೆಹಲಿಯ ನನ್ನ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ, ಮುಂದೆ ಓದಿ..

ದೆಹಲಿಯ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ

ದೆಹಲಿಯ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ

ತೀವ್ರ ಅನಾರೋಗ್ಯ ಪೀಡಿತರಾಗಿರುವ ಕರುಣಾನಿಧಿಯವರನ್ನು ಪ್ರಧಾನಿ ಮೋದಿ, ದೆಹಲಿಯ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನಿಸಿದರು. ದೆಹಲಿಗೆ ಬಂದು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಪ್ರಧಾನಿ ಮೋದಿ, ಸ್ಟಾಲಿನ್ ಮೂಲಕ ಕರುಣಾನಿಧಿಗೆ ತಿಳಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೌಂದರರಾಜನ್ ಮಾಧ್ಯಮದವರಿಗೆ ಹೇಳಿದ್ದಾರೆ.

 ತಮ್ಮ ನಿವಾಸಕ್ಕೆ ವಿಶ್ರಾಂತಿ ತೆಗೆದುಕೊಳ್ಳಲು ಮೋದಿ ಆಹ್ವಾನ

ತಮ್ಮ ನಿವಾಸಕ್ಕೆ ವಿಶ್ರಾಂತಿ ತೆಗೆದುಕೊಳ್ಳಲು ಮೋದಿ ಆಹ್ವಾನ

ಪ್ರಧಾನಿ ಕರುಣಾನಿಧಿಯವರನ್ನು ಭೇಟಿಯಾಗಿದ್ದಕ್ಕಿಂತಲೂ ಹೆಚ್ಚಾಗಿ, ದೆಹಲಿಯ ತಮ್ಮ ನಿವಾಸಕ್ಕೆ ವಿಶ್ರಾಂತಿ ತೆಗೆದುಕೊಳ್ಳಲು ಮೋದಿ ಆಹ್ವಾನಿಸುವ ಮೂಲಕ, ತಮಿಳುನಾಡು ಜನರಿಗೆ ಭಾವನಾತ್ಮಕವಾಗಿ ಟಚ್ ನೀಡಿದ್ದಾರೆ. ಮೋದಿಯನ್ನು ವಿರೋಧಿಸುವವರೂ ಇದೊಂದು ' Good gesture' ಎಂದು ಹೊಗಳುತ್ತಿದ್ದಾರೆ.

ಮೋದಿ, ಕರುಣಾನಿಧಿಯವರನ್ನು ಭೇಟಿಯಾಗಿದ್ದು ಸೌಜನ್ಯಕ್ಕಾಗಿ

ಮೋದಿ, ಕರುಣಾನಿಧಿಯವರನ್ನು ಭೇಟಿಯಾಗಿದ್ದು ಸೌಜನ್ಯಕ್ಕಾಗಿ

ಪ್ರಧಾನಿ ಮೋದಿ, ಕರುಣಾನಿಧಿಯವರನ್ನು ಭೇಟಿಯಾಗಿದ್ದು ಸೌಜನ್ಯಕ್ಕಾಗಿ, ಇಲ್ಲಿಗೆ ಬಂದು ಕರುಣಾನಿಧಿಯವರ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆಂದು ಡಿಎಂಕೆ ಮುಖಂಡ ಇಳಂಗೋವನ್ ಹೇಳಿಕೆ ನೀಡಿದ್ದಾರೆ. ಭೇಟಿಯ ವೇಳೆ ಯಾವುದೇ ರಾಜಕೀಯದ ಮಾತುಕತೆ ನಡೆದಿಲ್ಲ ಎಂದು ಡಿಎಂಕೆ ಮುಖಂಡರು ಸ್ಪಷ್ಟ ಪಡಿಸಿದ್ದಾರೆ.

ಗುಜರಾತ್ ನಲ್ಲಿ ಬಂದು ನೆಲೆಸಿ ಎಂದು ಗೌಡರಿಗೆ ಆಹ್ವಾನ ನೀಡಿದ್ದ ಮೋದಿ

ಗುಜರಾತ್ ನಲ್ಲಿ ಬಂದು ನೆಲೆಸಿ ಎಂದು ಗೌಡರಿಗೆ ಆಹ್ವಾನ ನೀಡಿದ್ದ ಮೋದಿ

ಕಳೆದ ಲೋಕಸಭಾ ಚುನಾವಣೆಯ ವೇಳೆ, ಮೋದಿ ಪ್ರಧಾನಿಯಾದರೆ ಕರ್ನಾಟಕದಲ್ಲಿ ಇರುವುದಿಲ್ಲ ಎಂದಿದ್ದ ದೇವೇಗೌಡರನ್ನು, ನಾನು ನಿಮ್ಮ ಮಗನ ಹಾಗೇ. ಬನ್ನಿ ಗುಜರಾತ್ ನಲ್ಲಿ ಬಂದು ನೆಲೆಸಿ. ನಿಮ್ಮನ್ನು ನನ್ನ ತಂದೆಯಂತೆ ನೋಡಿಕೊಳ್ಳುತ್ತೇನೆ ಎಂದು ಪಿಎಂ ಅಭ್ಯರ್ಥಿಯಾಗಿದ್ದ ಮೋದಿ, ಗೌಡರನ್ನು ಆಹ್ವಾನಿಸಿದ್ದರು.

ಕರುಣಾನಿಧಿಯವರ ಜೊತೆ ಸೌಜನ್ಯದ ಭೇಟಿ

ಕರುಣಾನಿಧಿಯವರ ಜೊತೆ ಸೌಜನ್ಯದ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿಯ ಚೆನ್ನೈನಲ್ಲಿ ಕರುಣಾನಿಧಿಯವರ ಜೊತೆ ಸೌಜನ್ಯದ ಭೇಟಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Monday (Nov 6) called on DMK president M Karunanidhi during his brief visit to the city. BJP leaders said it was a courtesy call.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ