Vande Mataram 150: ಬ್ರಿಟೀಷರ ನಿದ್ದೆಗೆಡಿಸಿದ್ದ ವಂದೇ ಮಾತರಂ ರಾಷ್ಟ್ರಕ್ಕೆ ಸ್ಪೂರ್ತಿ: ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 08: ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ್ದ 'ವಂದೇ ಮಾತರಂ' ಗೀತೆಯನ್ನು ಮಹಾತ್ಮ ಗಾಂಧೀಜಿ ಅವರು ತಮ್ಮ ಪತ್ರಿಕೆಯಲ್ಲಿ ಹೊಗಳಿದ್ದರು. ಅದರೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮುಸ್ಲಿಂ ಲೀಗ್ ವಿರುದ್ಧ ರಾಷ್ಟ್ರೀಯ ಗೀತೆಯನ್ನು ಸಮರ್ಥಿಸಿಕೊಳ್ಳಲಿಲ್ಲ. ದೇಶದ ಸ್ವಾತಂತ್ರ್ಯದ ಬಲಿದಾನ ಮಂತ್ರವಾಗಿದ್ದ ವಂದೇ ಮಾತರಂ ಅನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ಅದು ಭವಿಷ್ಯಕ್ಕೆ, ಯುವ ಪೀಳಿಗೆಗೆ ಸ್ಪೂರ್ತಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ 2025 ದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಭಾಷಣದಲ್ಲಿ ವಂದೇ ಭಾರತ್ ಹಾಡಿನ 150 ನೇ ವಾರ್ಷಿಕೋತ್ಸವ ಬಗ್ಗೆ ಮಾತನಾಡಿದರು. ಆ ಚರ್ಚೆಯ ಬಗ್ಗೆ ತಮ್ಮ ಭಾಷಣದಲ್ಲಿ ಶ್ಲಾಘಿಸಿದರು. ಈ ಚರ್ಚೆಯು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವಿನ ಸೈದ್ಧಾಂತಿಕ ಚರ್ಚೆಗೆ ಇಂಧನ ತುಂಬುವ ಸಾಧ್ಯತೆಯಿದೆ. ವಂದೇ ಮಾತರಂ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೆಚ್ಚು ಹಾಡಿದ ಹಾಡುಗಳಲ್ಲಿ ಒಂದಾಗಿದೆ.

ಕೇಸರಿ ಪಕ್ಷದ ನಾಯಕರು ಈ ಗೀತೆಯ ಸಾಂಸ್ಕೃತಿಕ ಭಾಗವನ್ನು ತೆಗೆದುಹಾಕಿದ್ದಾರೆ ಎಂದು ವಿಪಕ್ಷದವರು ಆರೋಪಿಸಿದರು. ಅಲ್ಲದೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದರು. ಆದರೆ ಕೇಂದ್ರ ಸರ್ಕಾರ, ಕೇಸರಿ ಪಡೆ ಮೊದಲು ಮೊದಲು ವಂದೇ ಮಾತರಂ ಬಗ್ಗೆ ಚರ್ಚೆ ಆಗಲಿದೆ ಎಂದು ಆಗ್ರಹಿಸಿದರು. ಇದೇ ವೇಳೆ ತಮ್ಮ ಭಾಷಣದುದ್ದಕ್ಕೂ ವಂದೇ ಮಾತರಂ ಕುರಿತು ಸಾಕಷ್ಟು ವಿಷಯಗಳನ್ನು ಪ್ರಧಾನಿ ಮೋದಿ ಮಾತನಾಡಿದ್ದು ಗಮನ ಸೆಳೆಯಿತು.
ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದ ಗೀತೆ: ಪ್ರಧಾನಿ
ಪ್ರಧಾನಿ ಮೋದಿಯವರು, ಮಹಾತ್ಮ ಗಾಂಧಿ ಸಾವಿರಾರು ವರ್ಷಗಳಿಂದ ಭಾರತದ ರಕ್ತಪ್ರವಾಹದಲ್ಲಿ ವಾಸಿಸುತ್ತಿದ್ದ ಚಿಂತನೆಯನ್ನು ಪುನರುಜ್ಜೀವನಗೊಳಿಸಿದರು. ಅವರು ಸಹ ತಮ್ಮ ಪತ್ರಿಕೆಯಲ್ಲಿ ವಂದೇ ಮಾತರಂ ಅನ್ನು ಶ್ಲಾಘಿಸಿದ್ದರು. ಆದರೆ ಈ ಕೆಲಸ ಜವಾಹರ್ ಲಾಲ್ ನೆಹರು ಅವರು ಮಾಡಲಿಲ್ಲ ಎಂದರು.
ಸ್ವಾತಂತ್ರ್ಯದ ನಂತರ ವಂದೇ ಮಾತರಂ ಗೀತೆಗೆ ಯಾರು ದ್ರೋಹ ಬಗೆದರು? ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ. ಕೆಲವರು ರಾಷ್ಟ್ರೀಯ ಗೀತೆಗೆ ದ್ರೋಹ ಮಾಡಲು ಪ್ರಯತ್ನಿಸಿದ್ದಾರೆ. ಈ ಗೀತೆಗೆ ಮುಸ್ಲಿಂ ಲೀಗ್ ನ ವಿರೋಧವಿತ್ತು. ರಾಷ್ಟ್ರವನ್ನು ಒಗ್ಗೂಡಿಸಿದ್ದ ಈ ವಂದೇ ಮಾತರಂ ಹಾಡು ಮಹತ್ವದ ಪಾತ್ರ ವಹಿಸಿತ್ತು. ಅಂದಿನಿಂದ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಅವರು ತಿಳಿಸಿದರು.
ಇಲ್ಲಿ ಯಾವುದೇ ನಾಯಕತ್ವ ಮತ್ತು ವಿರೋಧವಿಲ್ಲ. ವಂದೇ ಮಾತರಂಗೆ 150 ವರ್ಷವಾಗಿದೆ. ಅದರ ಋಣವನ್ನು ಸಾಮೂಹಿಕವಾಗಿ ಶ್ಲಾಘಿಸಲು, ಸ್ವೀಕರಿಸಲು ನಾವು ಇಲ್ಲಿದ್ದೇವೆ. ಇದೊಂದು ಪವಿತ್ರ ಸಂದರ್ಭಕ್ಕಾಗಿಯೇ ನಾವು ಇಲ್ಲಿ ಸೇರಿದ್ದೇವೆ ಎಂದು ಬಣ್ಣಿಸಿದರು.
ದೇಶಾಭಿವೃದ್ಧಿಗೆ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ
ಸ್ವಾತಂತ್ರ್ಯದ ಹೊತ್ತಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ರಾಷ್ಟ್ರ ಒಂದುಗೂಡಿಸುವ ಕೆಲಸ ಮಾಡಿತು. ಮತ್ತೆ ಎಲ್ಲರೂ ಒಟ್ಟಾಗಿ ಸಾಗುವ ಸಮಯ ಬಂದಿದೆ. ಈ ಹಾಡು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಬೇಕು. 2047 ರ ವೇಳೆಗೆ ನಮ್ಮ ರಾಷ್ಟ್ರವನ್ನು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದುವಂತೆ ಮಾಡುವ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.
ಅಂದು ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿದ್ದ 'ವಂದೇ ಮಾತರಂ' ಗೀತೆಯನ್ನು ಬ್ರಿಟಿಷರು ನಿಷೇಧಿಸಲು ಪ್ರಯತ್ನಿಸಿದರು. ಅಂತಹ ಶಕ್ತಿ ಈ ಗೀತೆಯಲ್ಲಿ ಇದ್ದಿದ್ದರಿಂದಲೇ ಬ್ರಿಟಿಷರು ಭಯಭೀತರಾಗಿದ್ದರು. ಅದು ಬ್ರಿಟಿಷರಿಗೆ ನಿದ್ದೆಯಿಲ್ಲದಂತೆ ಮಾಡಿತ್ತು. ಗೀತೆ ಹಾಡಿದ್ದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಕಠಿಣ ಕ್ರಮ ಸಹ ಕೈಗೊಂಡರು.
ತುರ್ತು ಪರಿಸ್ಥಿತಿ ನೆನಪಿಸಿದ ಪ್ರಧಾನಿ
ಈ ಹಾಡು ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿ ನೀಡಿತು. ಇದರಿಂದ ಪ್ರೇರಣೆ ಪಡೆದು ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಟಕ್ಕೆ ಧುಮುಕಿದ್ದರು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಇಂತಹ ಗೀತೆಗೆ 50 ವರ್ಷ ತುಂಬಿದಾಗ ಭಾರತವು ಗುಲಾಮಗಿರಿಯ ಸಂಕೋಲೆಯಲ್ಲಿತ್ತು. ದೇಶವು ರಾಷ್ಟ್ರೀಯ ಗೀತೆಯ 100 ವರ್ಷಗಳನ್ನು ಆಚರಿಸಿದ ಹೊತ್ತಿನಲ್ಲಿ ದೇಶವು ಕಾಂಗ್ರೆಸ್ ಸರ್ಕಾರದ ಹೇರಿದ್ದ ತುರ್ತು ಪರಿಸ್ಥಿತಿ ಕಾಣುವಂತಾಯಿತು ಎಂದು ಅವರು ಕಾಂಗ್ರೆಸ್ ವಿರುದ್ಧ ಕುಟುಕಿದರು. ಈ ಗೀತೆಯ ಬಗ್ಗೆ ಎಲ್ಲರು ಹೆಮ್ಮ ಪಡೆಬೇಕು ಎಂದು ತಿಳಿಸಿದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications