ಸೈನಿಕರು ಬಿಜೆಪಿ ರಾಜಕೀಯ ಪ್ರಚಾರಕರು, ಏಜೆಂಟರು: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ನವದೆಹಲಿ, ಅಕ್ಟೋಬರ್ 22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ಕಾರಿ ಅಧಿಕಾರಿಗಳನ್ನು ಮತ್ತು ಸೈನಿಕರನ್ನು ಬಿಜೆಪಿಯ 'ರಾಜಕೀಯ ಕಾರ್ಯಕರ್ತರು' ಮತ್ತು 'ಮಾರ್ಕೆಟಿಂಗ್ ಏಜೆಂಟ್‌ಗಳು" ಆಗಿ ಪರಿವರ್ತಿಸಲಾಗಿದೆ. ಇವರನ್ನು ಬಿಜೆಪಿ ಪ್ರಚಾರಕರಾಗಿ ಮಾರ್ಪಡಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸುವ ಜೊತೆಗೆ ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.
ಈ ಕುರಿತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷರು, ಬಿಜೆಪಿಯ ಕಳೆದ ಒಂಬತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸಲು ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳನ್ನು ರಥ ಪ್ರಭಾರಿಗಳಾಗಿ ಮಾಡಲು ನಿರ್ಧರಿಸಿದೆ. ವಾರ್ಷಿಕ ರಜೆ ಮೇಲೆ ಸೈನಿಕರಿಗೆ ಸರ್ಕಾರದ ಯೋಜನೆ ಪ್ರಚಾರ ಕೊಡುವಂತೆ ಉತ್ತೇಜಿಸುವ ಪ್ರಧಾನಿ ನರೇದ್ರ ಮೋದಿ ವಿರುದ್ಧ ಪತ್ರದಲ್ಲಿ ಅವರು ಕಟುವಾಗಿ ಟೀಕಿಸಿದ್ದಾರೆ.

ಸಾರ್ವಜನಿರಕ ಸೇವಕರು ಮತ್ತು ಸೈನಿಗರು ಸರ್ಕಾರಿ ಆಡಳಿತಯ ಯಂತ್ರದ ರಾಜಕೀಯದಿಂದ ಹೊರಗಿಡಬೇಕಿರುವುದು ಅಗತ್ಯ. ಅದರಲ್ಲೂ ಚುನಾವಣೆ ಮುಂಚಿತವಾಗಿ ಹೊರಗಿಡಬೇಕು.
For the Modi Govt, all agencies, institutions, arms, wings, and departments of the government are now officially 'Pracharaks' !
— Mallikarjun Kharge (@kharge) October 22, 2023
In view of protecting our democracy and our Constitution, it is imperative that the orders which would lead to the politicising of Bureaucracy and our… pic.twitter.com/t9hq0N4Ro4
ಬಿಜೆಪಿಗಾಗಿ ಕೇಂದ್ರದ ಸಂಸ್ಥೆಗಳು ಕೆಲಸ
ಒಂದು ಸಮಯದಲ್ಲಿ ಜಾರಿ ನಿರ್ದೇಶನಾಲಯ (ED), ಆದಾಯ ತೆರಿಗೆ ಇಲಾಖೆ (IT) ಚುನಾವಣಾ ಇಲಾಖೆಗಳು ಈಗಾಗಲೇ ಬಿಜೆಪಿಗಾಗಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಇತ್ತೀಚಿನ ನಿರ್ಧಾರಗಳು ಕೇಂದ್ರ ಬಿಜೆಪಿ ಪರವಾಗಿ ಯಂತ್ರದಂತೆ, ಏಜೆಂಟರಂತೆ ಅವರು ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಸರ್ಕಾರ ಹೊರಡಿಸಿರುವ ಎರಡು ಆದೇಶಗಳನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.
ಭಾರತ ಸಂಕಲ್ಪ ಯಾತ್ರೆಗೆ ಸಮನ್ವಯಗೊಳಿಸಲು 765 ಜಿಲ್ಲೆಗಳಲ್ಲಿ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು 'ರಥ ಪ್ರಭಾರಿಗಳಾಗಿ ನೇಮಿಸಿದ ಆದೇಶವನ್ನು ಖರ್ಗೆ ಪತ್ರದಲ್ಲಿ ಉಲ್ಲೇಕಿಸಿದ್ದಾರೆ. ಇಂತಹ ಆದೇಶಗಳಿಂದ ಸೇವಾ ನಿಯಮಗಳ ಉಲ್ಲಂಘನೆ ಆಗಿದೆ ಎಂದರು ತಿಳಿಸಿದರು.

ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಬಳಕೆ ಸೂಕ್ತವಲ್ಲ
ಸರ್ಕಾರದ ಅಧಿಕಾರಿಗಳು ಮಾಹಿತಿ ಪ್ರಸಾರ ಮಾಡುವುದು ಸ್ವೀಕಾರಾರ್ಹವಾದರೂ ಸಹಿತ ಅವರನ್ನು ಸರ್ಕಾರದ ಸಾಧನೆಗಳ ಪ್ರದರ್ಶನ, ಪಕ್ಷ\ರಾಜಕೀಯ ಪ್ರಚಾರಕ್ಕೆ ಬಳಸುವುದು ಸೂಕ್ತವಲ್ಲ. ಅವರನ್ನು ಕಾರ್ಯಕರ್ತರನ್ನಾಗಿ ಮಾಡುವುದು ಖಂಡನೀಯ ಎಂದು ಗುಡುಗಿದರು.
ಅಲ್ಲದೇ ಸರ್ಕಾರದ ರಾಜಕೀಯ ಕಾರ್ಯಗಳಿಗೆ (ಮಾರ್ಕೆಟಿಂಗ್ ಚಟುವಟಿಕೆ) ಗಾಗಿ ಹಿರಿಯ ಅಧಿಕಾರಿಗಳ ನಿಯೋಜಿಸಿದರೆ ಅದು ಮುಂದಿನ ಆರು ತಿಂಗಳ ಕಾಲ ದೇಶದ ಆಡಳಿತ ಸೂತ್ರದ ಮೇಲೆ ಪ್ರಭಾವ ಉಂಟು ಮಾಡಲಿದೆ.
ರಕ್ಷಣಾ ಸಚಿವಾಲಯವು ಅಕ್ಟೋಬರ್ 9ರಂದು ನೀಡಿದ ಆದೇಶದ ಮೇರೆಗೆ ವಾರ್ಷಿಕ ರಜೆಯಲ್ಲಿರುವ ಸೈನಿಕರಿಗೆ ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ನಿಯೋಜಿಸಬಾರದು. ರಾಜಕೀಯ ಉದ್ದೇಶಗಳಿಗೆ ಅವರ ರಜೆ ಹೈಜಾಕ್ ಮಾಡಬಾರದು. ಏಕೆಂದರೆ ರಜೆ ವೇಳೆ ಸೈನಿಕರು, ಅಧಿಕಾರಿಗಳು ಕುಟುಂಬದೊಂದಿಗೆ ಸಮಯ ಕಳೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.
ಸೈನಿಕರನ್ನು ಸರ್ಕಾರದ ಯೋಜನೆಗಳ ಮಾರ್ಕೆಟಿಂಗ್ ಏಜೆಂಟ್‌ಗಳು ಆಗುವಂತೆ ಒತ್ತಡ ತರಬಾರದು. ಪ್ರಜಾಪ್ರಭುತ್ವದಲ್ಲಿ ಸಶಸ್ತ್ರ ಪಡೆಗಳನ್ನು ರಾಜಕೀಯದಿಂದ ದೂರವಿಡಬೇಕು. ಸೈನಿಕರ ನಿಷ್ಠೆ ದೇಶ ಮತ್ತು ಸಂವಿಧಾನಕ್ಕೆ ಹೊರತು ರಾಜಕೀಯಕ್ಕೆ ಅಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications