ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವರದಿಗಾರಿಕೆ: ಹಳೆಯ ಸೊಗಡಿಲ್ಲ; ಹೊಸ ಸೊಗಸು!

By Srinath
|
Google Oneindia Kannada News

ನವದೆಹಲಿ, ಜೂನ್ 2: ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳ ವರದಿಗಾರಿಕೆಗೆ ಹೊಸ ಭಾಷ್ಯ ಬರೆದಿದ್ದಾರೆ. ಪತ್ರಕರ್ತರು ಇದುವರೆಗೂ 'ಎಂದು ಹೇಳಿದರು, ಎಂದು ತಿಳಿಸಿದರು, ಬಲ್ಲ ಮೂಲಗಳು, ಖಚಿತ ಮೂಲಗಳು, ನಂಬಲರ್ಹ ಮೂಲಗಳು ಹೇಳಿವೆ' ಎಂಬ ಕೆಲ ಪದಪುಂಜಗಳನ್ನು ಢಾಳಾಗಿ ಬಳಸುತ್ತಾ ವರದಿಗಾರಿಕೆ ಮಾಡುತ್ತಾ ಬಂದಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಅದರಲ್ಲೂ ದೇಶದ ನೂತನ ಭರವಸೆಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ವರದಿಗಾರಿಕೆಗೆ ಅಲಿಖಿತವಾಗಿ ಬಂದಿದ್ದ ಈ ಸೊಗಡನ್ನು ಮರೆಮಾಚಿಸಿ, ಹೊಸ ಸೊಗಸನ್ನು ತುಂಬಿದ್ದಾರೆ. ಗಮನಾರ್ಹವೆಂದರೆ ಇದಕ್ಕೆ ನೂತನ ತಂತ್ರಜ್ಞಾನ ಅಂದರೆ ಮಾಹಿತಿ ತಂತ್ರಜ್ಞಾನ ಸಾಥ್ ನೀಡಿರುವುದು ವಿಶೇಷವಾಗಿದೆ.

ಐಟಿ ಗಾವರ್ನೆನ್ಸ್:

India PM Narendra Modi gives new air and dimension to media reporting with IT touch
ಏನಪ್ಪಾ ಅಂದರೆ ದೆಹಲಿಯ ವರದಿಗಾರರಿಗಿನ್ನು 'ಪ್ರಧಾನಿ ಮೋದಿ ಹೇಳಿದರು/ತಿಳಿಸಿದರು' ಎಂದು ಬರೆಯುವ ಪ್ರಮೇಯ ಬರುವುದಿಲ್ಲ. ಏನಿದ್ದರೂ 'ಮೋದಿ ಟ್ವೀಟ್ ಮಾಡಿದರು, ಮೋದಿ ಫೇಸ್ ಬುಕ್ ಪೋಸ್ಟ್ ಹೇಳಿದೆ' ಎಂದಷ್ಟೇ ಹೇಳುವ ಅವಕಾಶಕ್ಕೆ ತೃಪ್ತಿಪಡಬೇಕಿದೆ.

ಹಾಗೆ ನೋಡಿದರೆ ಮೋದಿ ಅವರು ವಾರದ ಹಿಂದೆ 12 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ ಇದನ್ನೇ ಮಾಡಿಕೊಂಡು ಬಂದಿದ್ದರು. ಅವರು ಮಾಧ್ಯಮಗಳನ್ನು ಡೇ-ಟು-ಡೇ ಆದರಿಸುತ್ತಿರಲಿಲ್ಲ. ಆದರೆ ತಾವು ಹೇಳಬೇಕಿರುವುದನ್ನು ಸುಸ್ಪಷ್ಟವಾಗಿ/ ಖಚಿತವಾಗಿ, ಅನುಮಾನಗಳಿಗೆ/ವಿವಾದಗಳಿಗೆ ಎಡೆಮಾಡಿಕೊಡದೆ ಕ್ಷಿಪ್ರವಾಗಿ ಹೇಳುತ್ತಾ rather ಟ್ವೀಟ್ ಮಾಡುತ್ತಾ/ ಫೇಸ್ ಬುಕ್ ಗೋಡೆಯ ಮೇಲೆ ಸ್ಟೇಟಸ್ ಪೋಸ್ಟ್ ಮಾಡುತ್ತಾ ಬಂದಿದ್ದಾರೆ.

ಪಾರದರ್ಶಕತೆಯ ಪರಮಾವಧಿ:
ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಾರ್ಯಾಲಯವು ಸಾಲುಸಾಲಾಗಿ ಟ್ವಿಟ್ಟರ್, ಫೇಸ್ ಬುಕ್ ಖಾತೆಗಳನ್ನು ತೆರೆಯಲಾಗಿದೆ. ಜತೆಗೆ ತಮ್ಮ ಮಂತ್ರಿಮಂಡಲ/ ಸಂಸದರಿಗೂ ಟ್ವಿಟ್ಟರ್, ಫೇಸ್ ಬುಕ್ ಖಾತೆ ತೆರೆಯುವಂತೆ ಅವರು ತಾಕೀತು ಮಾಡಿದ್ದಾರೆ.

ನರೇಂದ್ರ ಮೋದಿ ಮತ್ತು ಪ್ರಧಾನಿ ಕಾರ್ಯಾಲಯದ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಗಳ ಹ್ಯಾಂಡಲ್ಸ್ ಇಲ್ಲಿವೆ:
* ನರೇಂದ್ರ ಮೋದಿ ಟ್ವಿಟ್ಟರ್ ಪುಟ
* ನರೇಂದ್ರ ಮೋದಿ ಫೇಸ್ ಬುಕ್ ಪುಟ
* ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ಪುಟ
* ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಪುಟ

English summary
India PM Narendra Modi gives new air and dimension to media reporting with IT touch using tools like twitter and facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X