• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ಜಾಲತಾಣ ಉಸಾಬರಿಯಿಂದ ದೂರ ಉಳಿಯುವ ಮನಸ್ಸು ಮಾಡಿದ ಪ್ರಧಾನಿ ಮೋದಿ

|

ನವದೆಹಲಿ, ಮಾರ್ಚ್ 2: ಸಾಮಾಜಿಕ ಜಾಲತಾಣದ ಅಗ್ರಗಣ್ಯ ರಾಜಕೀಯ ನಾಯಕ ಎನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇವುಗಳಿಂದ ದೂರವಾಗುವ ಮುನ್ಸೂಚನೆಯನ್ನು ನೀಡಿದ್ದಾರೆ.

ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಹಾಗೂ ಯೂ ಟ್ಯೂಬ್ ಸಾಮಾಜಿಕ ಜಾಲತಾಣ ಖಾತೆಯಿಂದ ದೂರ ಸರಿಯುತ್ತಿರುವ ಅರ್ಥ ಬರುವಂತಹ ರೀತಿಯಲ್ಲಿ ಟ್ವೀಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.

ಮೋದಿಯವರು ಇನ್ನು ನಮೋ app ನಲ್ಲಿ ಮಾತ್ರ ಕಾಣಿಸಿಕೊಳ್ಳಬಹುದು ಅಂತ ಬಿಜೆಪಿಯ ಐ.ಟಿ. ಸೆಲ್ ನ.ಮುಖ್ಯಸ್ಥ ಅಮೀತ್ ಮಾಳವೀಯ ಹೇಳಿದ್ದಾರೆ.

ಈ ಬಗ್ಗೆ ಈ ಭಾನುವಾರ ಉಳಿದೆಲ್ಲಾ ಮಾಹಿತಿಗಳನ್ನು ನೀಡುತ್ತಿದ್ದೇನೆ ಎಂದು ದೇಶದ ಜನರಲ್ಲಿ ಹಾಗೂ ಕೋಟ್ಯಂತರ ಹಿಂಬಾಲಕರಿಗೆ ಶಾಕಿಂಗ್ ಸುದ್ದಿಯನ್ನು ಪ್ರಧಾನಿ ನರೇಂದ್ರ ಮದಿ ನೀಡಿದ್ದಾರೆ. ಆದರೆ ಈ ಬಗ್ಗೆ ಈ ಖಾತೆಗಳಿಂದ ದೂರ ಸರಿಯಲು ಸ್ಪಷ್ಟ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ.

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ ದೇಶ-ವಿದೇಶಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ಸಾಕಷ್ಟು ದ್ವೇಷದ ಸಂದೇಶವನ್ನು ಕಳುಹಿಸುತ್ತಿರುವ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ನೂರಾರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ದುರ್ಬಳಕೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂತಹದೊಂದು ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ದೆಹಲಿ ಗಲಭೆಗೂ ಹಾಗೂ ಪ್ರಧಾನಿ ನಿರ್ಧಾರಕ್ಕೂ ಸಂಬಂಧವಿದೆಯೇ ಅಥವಾ ಇನ್ಯಾವುದೇ ನಿರ್ದಿಷ್ಟ ಕಾರಣವಿದೆಯೇ ಎಂಬುದು ತಿಳಿದುಬಂದಿಲ್ಲ.

ಯಾವಾಗಲೂ ದಿಢೀರ್ ನಿರ್ಣಯಗಳಿಂದಲೇ ದೇಶದ ಜನರನ್ನು ಹಾಗೂ ಹಿಂಬಾಲಕರನ್ನು ಆಶ್ವರ್ಯಚಕಿತರನ್ನಾಗಿ ಮಾಡುವ ಮೋದಿ ಈಗ ಸಾಮಾಜಿಕ ಜಾಲತಾಣದಲ್ಲಿ ಇಂತಹ ಘೋಷಣೆ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಬುದ್ಧಿ ಕಲಿಸುವ ತಂತ್ರವೇ?: ಸಾಮಾಜಿಕ ಜಾಲತಾಣ ದುರ್ಬಳಕೆ ಸಂಬಂಧಿಸಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಯಾವುದೇ ನಿರ್ಧಾರಗಳಾಗುತ್ತಿಲ್ಲ. ಸರ್ಕಾರದಿಂದ ಸಾಕಷ್ಟು ಕಠಿಣ ನಿಯಮಗಳು ಆಗಿದ್ದರೂ ಕೂಡ ದುರ್ಬಳಕೆ ಕಡಿಮೆಯಾಗುತ್ತಿಲ್ಲ.

ಟ್ರಂಪ್ ಬಂದು ಹೋದ ಮೇಲೆ; ವೈರಲ್ ಆಯಿತು ಅದೊಂದು ವಿಡಿಯೋ

ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂತಹ ನಿರ್ಧಾರ ಮಾಡಿರುವ ಸಾಧ್ಯತೆಯೂ ಇದೆ ಎಂದು ಚರ್ಚೆಗಳು ನಡೆಯುತ್ತಿದೆ. ಆದರೆ ಭಾನುವಾರವೇ ಇದರ ಬಗ್ಗೆ ಸ್ಪಷ್ಟ ನಿರ್ಧಾರಗಳು ಹೊರಬರಲಿವೆ.

ಪ್ರಧಾನಿ ನರೇಂದ್ರ ಮೋದಿಯವರು 2,373 ಮಂದಿಯನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ, ಮೋದಿಯವರನ್ನು 53.3 ಮಿಲಿಯನ್ ಅಂದರೆ 5.33 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಅಗ್ರಗಣ್ಯ ನಾಯಕ: ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಪ್ರಧಾನಿ ಮೋದಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಬಹುದು ಎಂದು ಹಾಗೂ ರಾಜಕೀಯ ಪ್ರಚಾರಕ್ಕೆ ಇದನ್ನು ವೇದಿಕೆ ಎಂದೂ ರ ಚುನಾವಣೆಯಿಂದ ಇಲ್ಲಿಯವರೆಗೆ ಮಾಡಿ ತೋರಿಸಿ ಸಾಮಾಜಿಕ ಜಾಲತಾಣಗಳ ಮೂಲಕವೇ ಜನರನ್ನು ತಲುಪುವಂತಹ ರಾಜಕೀಯ ವೇದಿಕೆಯನ್ನು ಪ್ರಧಾನಿ ಮೋದಿ ಮಾಡಿಕೊಟ್ಟಿದ್ದಾರೆ.

ಆದರೆ ಈಗ ಅವರೇ ಇದರಿಂದ ದೂರವಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ.

English summary
Prime Minister Narendra Modi gave a hint to giveup social media accounts like Facebook ,Twitter, Instagram ,YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X