ದೇಶಕ್ಕೆ ಸರ್ದಾರ್ ಸರೋವರ್ ಅಣೆಕಟ್ಟೆ ಸಮರ್ಪಿಸಿದ ಮೋದಿ

Posted By:
Subscribe to Oneindia Kannada

ಕೆವಾಡಿಯಾ(ಗುಜರಾತ್), ಸೆ. 17: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದರು.

ಸರ್ದಾರ್ ಅಣೆಕಟ್ಟಿನ ಬಗೆಗಿನ 10 ವಿಶಿಷ್ಟ ವಿಚಾರ

ನರೇಂದ್ರ ಮೋದಿ ಅವರು 2017ರ ಸೆಪ್ಟೆಂಬರ್ 17ರಂದು ಗುಜರಾತಿನ ಕೆವಾಡಿಯಾದಲ್ಲಿ ಸರ್ದಾರ್ ಸರೋವರವನ್ನು ದೇಶಕ್ಕೆ ಸಮರ್ಪಿಸಿದರು.

ಈ ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ.

ಬದುಕೇ ನೀರು ಪಾಲಾಗುವ ಸಂದರ್ಭದಲ್ಲೂ ಹೋರಾಟ ನಿಲ್ಲಿಸದ ನೀರೆ!

ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರಕುವ ನಿರೀಕ್ಷೆ ಇದೆ.

67ನೇ ವಸಂತಕ್ಕೆ ಕಾಲಿಟ್ಟ ಮೋದಿಯನ್ನು ಹರಿಸಿದ ಅಮ್ಮ ಹೀರಾ

ನಂತರ ಪ್ರಧಾನಮಂತ್ರಿಯವರು ನರ್ಮದಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲೂ ಭಾಗಿಯಾಗಲಿದ್ದಾರೆ ಮತ್ತು ದಭೋಲಿಯಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಪ್ರದರ್ಶನಕ್ಕೆ ಅವರು ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.

ನಂತರ ಪ್ರಧಾನಿಯವರು ಅರ್ಮೇಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಎ.ಪಿ.ಎಂ.ಸಿ. ಮೈದಾನದಲ್ಲಿ ನೂತನ ಮಾರುಕಟ್ಟೆಯನ್ನು ಉದ್ಘಾಟಿಸಲಿದ್ದಾರೆ. ಅಮರ್ ಡೈರಿಯ ನೂತನ ಘಟಕವನ್ನೂ ಅವರು ಉದ್ಘಾಟಿಸಲಿದ್ದಾರೆ ಮತ್ತು ಜೇನು ಉತ್ಪಾದನೆ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅರ್ಮೇಲಿಯಲ್ಲಿ ಸರ್ಕಾರ್ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅತಿ ದೊಡ್ಡ ಯೋಜನೆ

ಅತಿ ದೊಡ್ಡ ಯೋಜನೆ

ನೀರಿನ ಸರಬರಾಜಿಗೆ ಮಾನವ ಪ್ರಯತ್ನದ ಈವರೆಗಿನ ಅತಿ ದೊಡ್ಡ ಯೋಜನೆ. ಯೋಜನೆಯಿಂದ ವಾರ್ಷಿಕ ಶತಕೋಟಿ ಯುನಿಟ್ ಜಲ ವಿದ್ಯುತ್ ಉತ್ಪಾದನೆಯಾಗುತ್ತದೆಂದು ನಿರೀಕ್ಷಿಸಲಾಗಿದೆ.4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ) ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ ಈ ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿದೆ. ಇದರಿಂದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಬಳಕೆದಾರರಿಗೆ ಲಾಭವಾಗಲಿದೆ.

ಸರ್ದಾರ್ ಸರೋವರ ಅಣೆಕಟ್ಟು ಯೋಜನೆ

ಸರ್ದಾರ್ ಸರೋವರ ಅಣೆಕಟ್ಟು ಯೋಜನೆ

ಸರ್ದಾರ್ ಸರೋವರ ಅಣೆಕಟ್ಟು ಯೋಜನೆ ಅಡಿಯಲ್ಲಿ ಎರಡು ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದ್ದು, 2005ರ ಆಗಸ್ಟ್‌ನಿಂದ ಈ ಘಟಕಗಳು ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಸರ್ದಾರ್ ಸರೋವರ ಡ್ಯಾಂಗೆ ಒಟ್ಟು 30 ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಲು ಸುಮಾರು 1 ಗಂಟೆ ಬೇಕಾಗುತ್ತದೆ.

ಎರಡನೇ ಅತಿದೊಡ್ಡ ಅಣೆಕಟ್ಟೆ

ಎರಡನೇ ಅತಿದೊಡ್ಡ ಅಣೆಕಟ್ಟೆ

ಸರ್ದಾರ್‌ ಸರೋವರ ಡ್ಯಾಂ ಅನ್ನು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಅಣೆಕಟ್ಟೆ ಎಂಬ ಖ್ಯಾತಿ ಪಡೆದಿದೆ. ನಿರ್ಮಾಣಕ್ಕೆ ಬಳಸಲಾಗಿರುವ ಕಾಂಕ್ರೀಟ್‌ನ ಅಳತೆಯಲ್ಲಿ ಇದನ್ನು ಜಗತ್ತಿನ ಎರಡನೇ ಅತಿದೊಡ್ಡ ಅಣೆಕಟ್ಟೆ ಎಂದು ಕರೆಯಲಾಗುತ್ತಿದೆ. ಅಮೆರಿಕಾದ ಕೊಲಂಬಿಯಾ ನದಿಗೆ ಕಟ್ಟಲಾಗಿರುವ ಗ್ರ್ಯಾಂಡ್ ಕೂಲೀ ಅಣೆಕಟ್ಟು ಜಗತ್ತಿನ ಅತಿದೊಡ್ಡ ಡ್ಯಾಂ

ನರ್ಮದಾ ಬಚಾವೋ ಆಂದೋಲನ

ನರ್ಮದಾ ಬಚಾವೋ ಆಂದೋಲನ

ಸರ್ದಾರ್‌ ಸರೋವರ ಅಣೆಕಟ್ಟು ನಿರ್ಮಾಣದಿಂದ ನೂರಾರು ಹಳ್ಳಿಗಳು ಮುಳುಗಡೆಯಾಗಲಿದ್ದು, ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ ಎಂದು ಆಕ್ಷೇಪಿಸಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ ಆರಂಭಿಸಿ 1996ರಲ್ಲಿ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ಈಗಲೂ ಪ್ರತಿಭಟನೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Sunday inaugurated the Sardar Sarovar dam in Gujarat's Narmada district. The dam is the second biggest dam in the world after Grand Coulee Dam in the US.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ