ಅರುಣಾಚಲ ಪ್ರದೇಶದಲ್ಲಿ ವಾಜಪೇಯಿ ಅವರನ್ನು ನೆನೆದ ಮೋದಿ

ನವದೆಹಲಿ, ಏಪ್ರಿಲ್ 03: "'ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ"ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಅವರನ್ನು ನೆನೆದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅರುಣಾಚಲ ಪ್ರದೇಶದ ಪಾಸಿಘಾಟ್ ನಲ್ಲಿ ಬುಧವಾರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕಿಗಾಗಿ ಕೆಲಸ ಮಾಡುತ್ತದೆ, ನಾವು ಈಶಾನ್ಯ ರಾಜ್ಯದ ಜನರ ಉದ್ಧಾರಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದಂತೆಯೇ ಅದರ ಪ್ರಣಾಳಿಕೆಯೂ ಭ್ರಷ್ಟಾಚಾರ, ಅಪ್ರಾಮಾಣಿಕತೆಯಿಂದ ಕೂಡಿದೆ. ಅದನ್ನು ಪ್ರಣಾಳಿಕೆ ಎನ್ನುವ ಬದಲು ವಂಚನೆ ಎಂದರೆ ಸರಿ ಹೊಂದುತ್ತದೆ ಎಂದು ಅವರು ಹೇಳಿದರು.

PM Modi addresses a rally in Arunachal Pradesh

ಹಿಂದಿನ ಸರ್ಕಾರ ಅರುಣಾಚಲ ಪ್ರದೇಶವನ್ನು ಹೇಗೆಲ್ಲ ನಿರ್ಲಕ್ಷ್ಯಿಸಿತ್ತು ಎಂಬುದು ನಿಮಗೆಲ್ಲ ಗೊತ್ತು. ಆದರೆ ಕೊನೆಗೂ ನಿಮ್ಮನ್ನು ಎಲ್ಲರಂತೆಯೇ ಕಾಣುವ ಸರ್ಕಾರವೊಂದು ಬಂದಿದೆ. ನಿಮ್ಮ ಕನಸುಗಳನ್ನು ಅರ್ಥಮಾಡಿಕೊಳ್ಳುವವರು ಮತ್ತು ಅದರ ಈಡೇರಿಕೆಗೆ ಶ್ರಮಿಸುವವರು ಯಾರು ಎಂಬುದು ನಿಮಗೆ ಗೊತ್ತಾಗಿದೆ ಎಂದು ಅವರು ಹೇಳಿದರು.

ನಾವು ಎಂದಿಗೂ ರೈತರ ಹೆಸರಿನಲ್ಲಿ ಮತ ಕೇಳಿಲ್ಲ, ಆದರೂ ರೈತರಿಗಾಗಿ ಸಾಕಷ್ಟು ಮಾಡಿದ್ದೇವೆ . 70,000 ಕ್ಕೂ ಹೆಚ್ಚು ಮಹಿಳೆಯರಿಗೆ ಎಉಚಿತ ಗ್ಯಾಸ್ ಸಂಪರ್ಕ ನೀಡಿದ್ದೇವೆ. ಈ ಚುನಾವಣೆ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವಿನ ಸ್ಪರ್ಧೆ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+