ಮೋದಿ ಜಾದೂವಿನಿಂದ ಗುಜರಾತ್ ನ ಹಣವೆಲ್ಲ ಮಾಯ: ರಾಹುಲ್ ಗಾಂಧಿ

Posted By:
Subscribe to Oneindia Kannada

ಕಳೆದ ಎರಡು ದಶಕಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಜಾದೂ' ಮೂಲಕ ಇಲ್ಲಿನ ಹಣವನ್ನು 'ಮಾಯ' ಮಾಡಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆರೋಪ ಮಾಡಿದ್ದಾರೆ.

ಬಿಜೆಪಿ ಏನಾದರೂ ಹೇಳಿಕೊಳ್ಳಲಿ, ನಾನು ಶಿವನ ಭಕ್ತ: ರಾಹುಲ್ ಗಾಂಧಿ

ಗುಜರಾತ್ ನ ಹರಿಜ್ ಗ್ರಾಮದಲ್ಲಿ ಜಾದೂ ಪ್ರದರ್ಶನ ವೀಕ್ಷಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ಆ ಹಳ್ಳಿಯಲ್ಲಿ ಹಾವಾಡಿಸುವ ವ್ಯಕ್ತಿಯೊಬ್ಬ ತಾನು ಜಾದೂ ಪ್ರದರ್ಶನ ಮಾಡುತ್ತೀನಿ ಎಂದು ರಾಹುಲ್ ಮುಂದೆ ಹೇಳಿದಾಗ, ಕೆಲವು ಆಟ ತೋರಿಸುವಂತೆ ಕೇಳಿದ್ದಾರೆ.

PM made money vanish from Gujarat, says Rahul

ಆತ ಆ ಮಾತಿಗೆ ಒಪ್ಪಿ, ಗಾಳಿಯಲ್ಲಿ ಹಣ ಸೃಷ್ಟಿಸುವುದು ಸೇರಿ ಹಲವು ತಂತ್ರಗಳನ್ನು ಪ್ರದರ್ಶಿಸಿದ್ದಾನೆ. ಆ ನಂತರ ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನೀವು ಮಾಡಿದಂತೆಯೇ ನರೇಂದ್ರ ಮೋದಿ ಗುಜರಾತ್ ನಲ್ಲಿ ಇಪ್ಪತ್ತೆರಡು ವರ್ಷ ಜಾದೂ ಮಾಡಿದ್ದಾರೆ. ವ್ಯತ್ಯಾಸ ಏನೆಂದರೆ ನೀವು ಹಣವನ್ನು ಸೃಷ್ಟಿ ಮಾಡಿದಿರಿ, ಮೋದಿ ಹಣ ಮಾಯ ಮಾಡಿದ್ದಾರೆ" ಎಂದಿದ್ದಾರೆ.

ರಾಹುಲ್ ಪಟ್ಟಾಭಿಷೇಕ ತಾತ್ಕಾಲಿಕವಾಗಿ ಮುಂದೂಡಿಕೆ!

ಅಲ್ಲಿನ ಸ್ಥಳೀಯ ಜನರ ಸಮಸ್ಯೆಗಳನ್ನು ನಿವಾರಣೆ ಮಾಡಲು ಪಕ್ಷದಿಂದ ಪ್ರಯತ್ನ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice-president Rahul Gandhi on Monday alleged that Prime Minister Narendra Modi had made money “disappear” from Gujarat through “magic” in the last two decades of BJP rule.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ