PM Kisan: ದೇಶದ ರೈತರಿಗೆ ಗುಡ್ ನ್ಯೂಸ್, 21ನೇ ಕಿಸಾನ್ ಯೋಜನೆ ಹಣ ಬಿಡುಗಡೆ ಅಪ್ಡೇಟ್ಸ್
ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan Scheme) 2019ರಿಂದ ದೇಶದ ಲಕ್ಷಾಂತರ ರೈರಿತೆ ಆರ್ಥಿಕ ಸಹಾಯ ನೀಡುತ್ತಿದೆ. ಇದೀಗ 2025ರಲ್ಲಿನ 21ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಪ್ರತಿ ನಾಲ್ಕು ತಿಂಗಳಿಗೆ 2000 ರೂಪಾಯಿ ವಿತರಿಸುತ್ತಾ ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2019ರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6000 ರೂಪಾಯಿ ರೈತರಿಗೆ ನೆರವು ನೀಡುತ್ತಾ ಬಂದಿದೆ. ಇಲ್ಲಿಯವರೆಗೆ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಕೇಂದ್ರದಿಂದ ಆರ್ಥಿಕ ಸಹಾಯ ನೀಡಿದೆ. ಈವರೆಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಒಟ್ಟು 20 ಕಂತುಗಳ ಮೂಲಕ 3.70 ಲಕ್ಷ ಕೋಟಿ ರೂ. ಹಣ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಮುಂದಿನ 21ನೇ ಕಂತಿನ ಹಣವು ರೈತರ ಖಾತೆಗೆ ನೀಡಲು ನವೆಂಬರ್ 19ರಂದು ದಿನಾಂಕ ಫಿಕ್ಸ್ ಮಾಡಲಾಗಿದೆ. ಅಂದು ಪ್ರಧಾನಿ ಮೋದಿಯವರು ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ರೈತರು ಪಡೆಯುವ ಈ ಹಣ ಸಣ್ಣ ಹಿಡುವಳಿದಾರರಿಗೆ ಆರ್ಥಿಕ ಸಹಾಯ, ಕೃಷಿಗೆ ಬಳಕೆ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಇತರ ಉದ್ದೇಶಗಳಿಗೆ, ಹೆಚ್ಚುವರಿ ವೆಚ್ಚದ ಸವಾಲು ಎದುರಿಸಲು ಸಹಾಯವಾಗುತ್ತಿದೆ.
ರೈತರಿಗೆ ಮೊಬೈಲ್ ಆಪ್, 24/7 ಸೇವೆ, ಸಹಾಯ
ರೈತರಿಗೆ ಈ ಕಂತುಗಳ ಮೂಲಕ ಆರ್ಥಿಕ ಸೇವೆ ಒದಗಿಸಲು ತಂತ್ರಜ್ಞಾನ ಬಳಸುತ್ತಿದೆ. ಕೊನೆಯ ಮೈಲಿನ ರೈತರಿಗೂ ಯೋಜನೆ ಫಲಾನುಭವಿ ಆಗುವಂತೆ ನೋಡಿಕೊಂಡಿದೆ. ಆಧಾರ್ ಆಧಾರಿತ ಇ-ಕೆವೈಸಿ, ಒಟಿಪಿ, ಬಯೋಮೆಟ್ರಿಕ್ ಅಥವಾ ಮುಖದ ದೃಢೀಕರಣದ (Face authentication) ಸೇರಿ ಸುರಕ್ಷಿತ ವಿಧಾನ ಒಳಗೊಂಡಿದೆ. ರೈತರು ಮನೆಯಿಂದಲೇ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್, ಪೋರ್ಟಲ್ ರೈತರಿಗೆ ತಮ್ಮ ಪಾವತಿ ಸ್ಥಿತಿ ಪರಿಶೀಲನೆ, ಸ್ವಯಂ-ನೋಂದಣಿ ಮಾಡಲು, ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುತ್ತಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಪ್ರಯೋಜನ ಸ್ವೀಕೃತಿಗಾಗಿ ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಪರಿಗಣಿಸಲಾಗಿದೆ. ಬಹುಭಾಷಾ AI-ಚಾಲಿತ ಕಿಸಾನ್-ಇ-ಮಿತ್ರ ಚಾಟ್ಬಾಟ್ ಆರಂಭಿಸಿದ್ದು, ಇದು ರೈತರ ಕುಂದುಕೊರತೆ ಪರಿಹರಿಸುತ್ತದೆ. 11 ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ 24/7 ರೈತರಿಗೆ ಸಹಾಯ ನೀಡುತ್ತದೆ. ಭಾಷೆಗಳ ತೊಂದರೆ ಇಲ್ಲದೇ ಅಗತ್ಯವಿದ್ದಾಗ ಸಹಾಯ ಪಡೆಯಬಹುದಾಗಿದೆ.
ಪಿಎಂ ಕಿಸಾನ್ ಯೋಜನೆಯು ರೈತರ ಖಾತೆಗೆ ನೇರ ಹಣ ವರ್ಗಾವಣೆ, ಪ್ರಯೋಜನ ನೇರವಾಗಿ ಫಲಾನುಭವಿಗಳಿಗೆ ಸಿಗಲಿದೆ. ದೇಶದ ಬೆನ್ನೆಲುಬು ಕೃಷಿ, ರೈತರನ್ನು ಬಲಪಡಿಸುತ್ತಿದೆ. ಅವರ ಜೀವನೋಪಾಯ ಸುಧಾರಿಸುತ್ತಿದೆ. ರೈತರಿಗೆ ಈ ಅಪ್ಲಿಕೇಷನ್ನಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ ರೈತರು ಕೆವೈಸಿ,ಓಟಿಪಿ, ಬಯೋಮೆಟ್ರಿಕ್ ಸ್ಕ್ಯಾನಿಂಗ್ ಇತರ ಗುರುತುಗಳನ್ನು ಮನೆಯಿಂದಲೇ ಮಾಡಬಹುದಾಗಿದೆ. ಮುಂದಿನ ಕಂತಿನ ಹಣದ ಸ್ಟೇಟಸ್ ಬಗ್ಗೆ ಕ್ಷಣಮಾತ್ರದಲ್ಲಿ ಪರಿಶೀಲಿಸಬಹುದಾಗಿದೆ. ತೊಂದರೆ ಮುಕ್ತ ಸೇವೆ ನೀಡುತ್ತಿದೆ.
-
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications