ಬಸವ ಜಯಂತಿಯಲ್ಲಿ 'ತ್ರಿವಳಿ ತಲಾಖ್' ಮಂತ್ರ ಪಠಿಸಿದ ಮೋದಿ
ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕು ಎಂದ ನರೇಂದ್ರ ಮೋದಿ, ತ್ರಿವಳಿ ತಲಾಖ್ ನ ಸಮಸ್ಯೆಯಿಂದ ಮಹಿಳೆಯರನ್ನು ಬಿಡುಗಡೆ ಮಾಡಲು ಸಮುದಾಯದ ಸುಧಾರಣಾವಾದಿಗಳು ಮುಂದೆ ಬರುವುದಾಗಿ ನಂಬಿದ್ದೇನೆ ಎಂದರು.
ನವದೆಹಲಿ, ಏಪ್ರಿಲ್ 29: ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಬಸವ ಜಯಂತಿ ಆಚರಣೆ ವೇಳೆ ನರೇಂದ್ರ ಮೋದಿ ತ್ರಿವಳಿ ತಲಾಖ್ ವಿಚಾರ ಪ್ರಸ್ತಾಪಿಸಿದರು.
ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ವಿಷಯ ಪ್ರಸ್ತಾಪಿಸಿದ ನರೇಂದ್ರ ಮೋದಿ ತ್ರಿವಳಿ ತಲಾಖ್ ನ ಸಮಸ್ಯೆಯಿಂದ ಮಹಿಳೆಯರನ್ನು ಬಿಡುಗಡೆ ಮಾಡಲು ಸಮುದಾಯದ ಸುಧಾರಣಾವಾದಿಗಳು ಮುಂದೆ ಬರುವುದಾಗಿ ನಾನು ನಂಬಿದ್ದೇನೆ ಎಂದು ಹೇಳಿದರು.[ಬಸವ ಜಯಂತಿ: 'ಕಾಯಕವೇ ಕೈಲಾಸ' ಎಂದ ಪ್ರಧಾನಿ ಮೋದಿ]

ಇದೇ ಸಂದರ್ಭದಲ್ಲಿ ಸಮಸ್ಯೆಗಳನ್ನು ರಾಜಕೀಯ ಕನ್ನಡಕದಿಂದ ನೋಡಬೇಡಿ ಎಂದೂ ಅವರು ಮನವಿ ಮಾಡಿಕೊಂಡರು.
ಬಸವಣ್ಣನವರ ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಸಹೋದರಿಯರಿಗೂ ನ್ಯಾಯ ಸಿಗುವಂತಾಗಬೇಕು ಎಂದು ಹೇಳಿದರು. ಯಾರ ಮೇಲೆಯೂ ದೌರ್ಜನ್ಯ ನಡೆಸಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.[ವಚನಗಳಲ್ಲಿ ನಾಮಾಮೃತ ತುಂಬಿದ ಅಣ್ಣ ಬಸವಣ್ಣ]
ತ್ರಿವಳಿ ತಲಾಕ್ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದೊಳಗೆ ಬಿಕ್ಕಟ್ಟು ಸೃಷ್ಟಿಸುವುದು ನಮಗೆ ಬೇಕಿಲ್ಲ. ಸಾಮಾಜದಲ್ಲಿ ಯಾವುದೇ ಕೆಟ್ಟ ಪದ್ಧತಿಗಳಿದ್ದರೆ ನಾವು ಸಮಾಜವನ್ನು ಎಚ್ಚರಿಸಬೇಕಾಗುತ್ತದೆ. ಅವರಿಗೆ ನ್ಯಾಯ ಕೊಡಲು ಪ್ರಯತ್ನ ಪಡೆಬೇಕಾಗುತ್ತದೆ ಎಂದು ಹೇಳಿದರು.[ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ?]
ಇದೇ ರೀತಿ ಒಡಿಶಾದ ಭುವನೇಶ್ವರಲ್ಲಿ ಇತ್ತೀಚೆಗೆ ಕೊನೆಗೊಂಡ ಬಿಜೆಪಿ ಕಾರ್ಯಕಾರಿಣಿ ಸಮಾರೋಪ ಭಾಷಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ತ್ರಿವಳಿ ತಲಾಖ್ ವಿಷಯ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications