• search

ಅವಳಿ ಮಕ್ಕಳ ಪೈಕಿ ಉಳಿದ ಒಂದನ್ನು ಉಳಿಸಿಕೊಳ್ಳಲು ನೆರವು ನೀಡಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೂರು ಬಾರಿ ನನ್ನ ಪತ್ನಿಗೆ ಗರ್ಭಪಾತ ಆದ ನಂತರ ನವೆಂಬರ್ 8, 2016ರಲ್ಲಿ ದೇವರ ದಯೆಯಿಂದ ಅವಳಿ ಮಕ್ಕಳಾದವು. ನಮ್ಮ ಪ್ರಾರ್ಥನೆಗೆ ಅಂತೂ ಫಲ ಸಿಕ್ಕಿತು. ಆದರೆ 24 ವಾರ ತುಂಬಿ ಮೂರು ದಿನಕ್ಕೆ ಹೆರಿಗೆ ಆಯಿತು. ಆದ್ದರಿಂದ ನಮ್ಮ ಮಕ್ಕಳು ತೀರಾ ಅವಧಿಗೆ ಮುನ್ನ ಜನಿಸಿದ್ದರು ಹಾಗೂ ಸರಿಯಾದ ಬೆಳವಣಿಗೆ ಆಗಿರಲಿಲ್ಲ.

  ಒಂದು ತಿಂಗಳ ನಂತರ ಒಂದು ಮಗುವನ್ನು ಕಳೆದುಕೊಂಡೆ. ಆದರೆ ಎರಡು ಮಕ್ಕಳನ್ನೂ ಕಳೆದುಕೊಳ್ಳುವ ಹಂತಕ್ಕೆ ನನ್ನನ್ನು ಆ ದೇವರು ತಂದು ನಿಲ್ಲಿಸಿದ್ದಾರೆ. ನನ್ನ ಮಗನಿಗೆ ವೀರ ಅಂತ ಹೆಸರಿಡಲು ನಿರ್ಧರಿಸಿದ್ದೇನೆ. ಏಕೆಂದರೆ ಅವನು ಹೋರಾಟಗಾರ. ಅವನೀಗ ಬದುಕಿಗಾಗಿ ಹೋರಾಟ ನಡೆಸಿದ್ದಾನೆ. ನನಗೆ ಹಾಗೂ ನನ್ನ ಹೆಂಡತಿಗೆ ಈ ಹೋರಾಟದಲ್ಲಿ ಶಕ್ತಿ ತುಂಬಿರುವವನು ಅವನೇ.

  Please help this couple to save the child

  ಆ ಮಗು ನಮ್ಮ ಜೀವನದೊಳಗೆ ಬಂದು ವರ್ಷವಾಯಿತು. ಈ ವರೆಗೆ ಅವನು ನೋಡಿರುವುದು ನಾಲ್ಕು ಗಾಜುಗಳ ಮಕ್ಕಳ ತೀವ್ರ ನಿಗಾ ಘಟಕವನ್ನಷ್ಟೇ. ವೆಂಟಿಲೇಟರ್ ನ ಸಹಾಯದಿಂದ ನನ್ನ ಮಗ ಉಸಿರಾಡುತ್ತಿದ್ದಾನೆ. ಅದು ಧೈರ್ಯವಂತ ಮಗು. ನನ್ನ ಮಗನನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಬೇಕಿದೆ. ಆದರೆ ಅಷ್ಟು ಸಲೀಸಲ್ಲ.

  ಏಕೆಂದರೆ ಅದಕ್ಕಾಗಿ ಆಕ್ಸಿಜನ್ ಕಾನ್ಸನ್ ಟ್ರೇಟರ್, ದಿನದ ಇಪ್ಪತ್ನಾಲ್ಕು ಗಂಟೆಯೂ ಅವನನ್ನು ನೋಡಿಕೊಳ್ಳಲು ಶುಶ್ರೂಷಕರು, ಕೆಲವು ಆಕ್ಸಿಜನ್ ಸಿಲಿಂಡರ್ ಎಲ್ಲವೂ ಬೇಕಿದೆ. ಇದು ನನ್ನ ಮಗುವನ್ನು ಉಳಿಸಿಕೊಳ್ಳಲು ಬೇಕಾದ ಸೌಕರ್ಯಗಳು. ಇವೆಲ್ಲವೂ ಬೇಕೆಂದರೆ 7,20,000 ರುಪಾಯಿ ಬೇಕು. ಆಗಷ್ಟೇ ಆಸ್ಪತ್ರೆಯೆಂಬ ಈ ಸೆರೆಯಿಂದ ಅವನನ್ನು ಬಿಡುಗಡೆ ಮಾಡಬಹುದು. ದೇಣಿಗೆ ಮೂಲದಿಂದ ನೀವು ಮಾಡುವ ಸಹಾಯದಿಂದ ಅಂತಿಮವಾಗಿ ನನ್ನ ಮಗನನ್ನು ಮನೆಗೆ ಕರೆದುಕೊಂಡು ಹೋಗಬಹುದು.

  Please help this couple to save the child

  ನನ್ನ ಹೆಸರು ಯೋಗೇಶ್ ಖನ್ನಾ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಉದ್ಯೋಗ. ತಿಂಗಳಿಗೆ 28,000 ಸಂಬಳ. ಹೆಂಡತಿ ಹಾಗೂ ಪೋಷಕರ ಜತೆಗೆ ಚೆನ್ನೈನಲ್ಲಿ ವಾಸವಾಗಿದ್ದೇನೆ. ಆ ದೇವರು ಒಂದು ಬಾಗಿಲನ್ನು ಮುಚ್ಚಿದರೆ ಮತ್ತೊಂದು ತೆರೆಯುತ್ತಾನೆ ಎಂಬುದು ನನ್ನ ನಂಬಿಕೆ. ಆದ್ದರಿಂದಲೇ ಜೀವನದಲ್ಲಿ ಇಷ್ಟೆಲ್ಲ ಕಷ್ಟ ಕಂಡ ನಂತರವೂ ಭರವಸೆಯನ್ನು ಬಿಟ್ಟಿಲ್ಲ.

  ಬಹಳ ಕಾಲದಿಂದ ನಾನು-ನನ್ನ ಹೆಂಡತಿ ಒಂದು ಮಗುವಿಗಾಗಿ ಕಾತರಿಸುತ್ತಿದ್ದಿವಿ. ಆದ್ದರಿಂದಲೇ ನಮ್ಮ ಮಗುವನ್ನು ಉಳಿಸಿಕೊಳ್ಳುವ ಯಾವ ಅವಕಾಶವನ್ನೂ ಬಿಟ್ಟಿಲ್ಲ. ನಮ್ಮ ಮಗುವಿಗಾಗಿ ಎಷ್ಟು ಖರ್ಚು ಮಾಡಿದ್ದೀನಿ ಎಂಬ ಬಗ್ಗೆ ಮಾತನಾಡುವುದೇ ಇಷ್ಟವಿಲ್ಲ. ನನ್ನ ಮಗುವಿಗೆ ಇಷ್ಟು ಖರ್ಚು ಮಾಡದೆ ಎಂದು ಹೇಳಿಕೊಳ್ಳುವುದೇ ಸರಿಯಲ್ಲ.

  ನಮ್ಮ ಬಳಿಯಿದ್ದ ಎಲ್ಲ ಆಭರಣ ಮಾರಿಯಾಗಿದೆ. ಉಳಿಸಿದ್ದ ಹಣವೆಲ್ಲ ಖರ್ಚಾಗಿದೆ. ಬಿಲ್ ಪಾವತಿಸುವುದಕ್ಕೆ ಮೂರು ಬ್ಯಾಂಕ್ ನಿಂದ ಪಡೆದ ಸಾಲವೂ ಖರ್ಚಾಗಿದೆ. ಇನ್ನೂ ಒಂದು ಕಡೆ ಸಾಲಕ್ಕೆ ಅರ್ಜಿ ಹಾಕಿಕೊಂಡಿದ್ದೀನಿ. ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಈಗ ನನನ್ ಬಳಿ ಏನೂ ಉಳಿದಿಲ್ಲ. ನಾನು ನಿಮ್ಮ ಬಳಿ ಸಹಾಯಕ್ಕಾಗಿ ಯಾಚಿಸುತ್ತಿದ್ದೇನೆ ಅಂದರೆ ನಿಮಗೆ ನನ್ನ ಅಸಹಾಯಕತೆ ಮತ್ತು ಜೀವನದ ಕಥೆ ಗೊತ್ತಾಗಬೇಕು.

  Please help this couple to save the child

  ಈವರೆಗೆ ಭೇಟಿ ಮಾಡಲು ಸಾಧ್ಯವಾಗದ ಅಥವಾ ಕನಿಷ್ಠ ಕೈಗಳಿಂದ ಎತ್ತಿಕೊಳ್ಳಲಾಗದ ನನ್ನ ಮಗುವಿಗಾಗಿ 12 ಲಕ್ಷ ಖರ್ಚು ಮಾಡಿದ್ದೇನೆ. ವೀರನಿಗಾಗಿ 53 ಲಕ್ಷ ಖರ್ಚಾಗಿದೆ. ವೀರನಿಗಾಗಿ ಅಂದರೆ ತೀವ್ರ ನಿಗಾ ಘಟಾಕಕ್ಕೆ ದಿನಕ್ಕೆ 15 ಸಾವಿರ ಬೇಕು. ವೀರನ ಶ್ವಾಸಕೋಶ ಬೆಳವಣಿಗೆ ಆಗಿಲ್ಲ. ಆದ್ದರಿಂದ ಉಳಿದ ಮಕ್ಕಳಿಗಿಂತ ಹೆಚ್ಚಿನ ನೆರವು ಇವನಿಗೆ ಬೇಕು.

  ಒಂದು ಸಲ ವೀರನನ್ನು ಕನಿಷ್ಠ ಆರು ತಿಂಗಳು ಮನೆಗೆ ಕರೆದುಕೊಂಡು ಹೋಗಬೇಕೆಂದರೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಎಂಬ ಮಶೀನ್ ಖರೀದಿಸಬೇಕು. ಅದಕ್ಕೆ 2 ಲಕ್ಷ ಬೇಕು. ನಮಗೆ ಇಷ್ಟು ಹಣ ಕೊಡುವ ಚೈತನ್ಯ ಇಲ್ಲ. ಆದ್ದರಿಂದ ತಿಂಗಳಿಗೆ 18 ಸಾವಿರ ಬಾಡಿಗೆ ಕೊಟ್ಟು ಮಶೀನ್ ತರಬೇಕು ಅಂದುಕೊಂಡಿದ್ದೀವಿ.

  ಪ್ರತಿ 4 ಗಂಟೆಗೆ ಒಮ್ಮೆ ವೀರನಿಗೊಂದು ಚಿಕಿತ್ಸೆ ಬೇಕಾಗುತ್ತದೆ. ಅದನ್ನು ನರ್ಸ್ ರಿಂದ ಮಾತ್ರ ಮಾಡಲು ಸಾಧ್ಯ. ಅದಕ್ಕಾಗಿ ಅವರಿಗೆ ತಿಂಗಳಿಗೆ 50 ಸಾವಿರ ಪಾವತಿಸಬೇಕಾಗುತ್ತದೆ. ಇದರ ಜತೆಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿಸಬೇಕು. ಒಂದು ಖರೀದಿ ಮಾಡಿದರೆ ಸಾಲುವುದಿಲ್ಲ. ಎರಡು ಹೆಚ್ಚುವರಿಯಾಗಿ ಇಟ್ಟುಕೊಂಡಿರಬೇಕು. ನನ್ನ ಮಗುವಿನ ಉಸಿರಾಟ ಮುಂದುವರಿಯುವುದಕ್ಕೆ ಇದು ಅನಿವಾರ್ಯ.

  Please help this couple to save the child

  ವೈದ್ಯರು ಆಸ್ಪತ್ರೆ ಸಮೀಪದಲ್ಲೇ ಮನೆ ಮಾಡಿ ಅಂತ ಸಲಹೆ ಮಾಡಿದ್ದಾರೆ. ಆದರೆ ಆ ಪ್ರದೇಶದಲ್ಲಿ ತಿಂಗಳ ಬಾಡಿಗೆಯೇ 30 ಸಾವಿರ ಆಗುತ್ತದೆ. ಅವರ ಪ್ರಕಾರ, ವೀರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ 10 ನಿಮಿಷದೊಳಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಇರಬೇಕು. ಇಲ್ಲದಿದ್ದರೆ ಅವನ ಜೀವಕ್ಕೆ ಅಪಾಯವಾಗುತ್ತದೆ.

  ಒಂದು ವೇಳೆ ಅದೇ ಆಗಿಹೋದರೆ, ನನ್ನ ಬದುಕಿನ ಬಾಕಿ ಅವಧಿಗೆ ಏನನ್ನಾದರೂ ಎದುರಿಸುವ ಶಕ್ತಿ ಅಥವಾ ಧೈರ್ಯ ಮುಂದೆಂದೂ ಬರಲಾರದು. ನಮ್ಮ ಕುಟುಂಬಕ್ಕೆ ಕಣ್ಣೆದುರೇ ಕಾಣುತ್ತಿರುವ ಈ ದೊಡ್ಡ ನಷ್ಟದಿಂದ ಕಾಪಾಡುವ ಶಕ್ತಿ ಇದ್ದರೆ ಅದು ನಿಮ್ಮ ನೆರವಿನಿಂದ ಮಾತ್ರ.

  ನಮಗೆ ಗೊತ್ತಿರುವ ಎಲ್ಲರೂ, ಅಷ್ಟೇ ಏಕೆ ನಮ್ಮ ಪೋಷಕರು ಸಹ ಆ ಮಗುವಿನ ಆಸೆ ಕೈ ಬಿಟ್ಟುಬಿಡಿ ಅಂತಲೇ ಅಂದರು. ಅವರಿಗೆಲ್ಲ ವೈದ್ಯಕೀಯ ಚಿಕಿತ್ಸಾ ವೆಚ್ಚದ ಬಗ್ಗೆಯೇ ಗಾಬರಿ. ಆದರೆ ಅವರೆಲ್ಲರ ಮಾತಿಗೆ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ. 740 ಗ್ರಾಮ್ ತೂಕವಿದ್ದ ವೀರ ಇಂದಿಗೆ 5.5 ಕೆ.ಜಿ ಇದ್ದಾನೆ.

  ಈ ವರೆಗೆ ನಮಗೆ ಅವನ ಬೆಂಬಲ ಸಿಕ್ಕಿದೆ. ನಾವೀಗ ಹೋರಾಟದ ಅಂತಿಮ ಹಂತದಲ್ಲಿದ್ದೇವೆ. ಅವನ ಮೊದಲ ವರ್ಷದ ಜನ್ಮದಿನದ ಕೊಡುಗೆಯಾಗಿ ಮನೆಗೆ ಕರೆದುಕೊಂಡು ಹೋಗಿ, ಸಂತೋಷ ನೀಡಬೇಕು. ಅವನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ನೀವಿನ್ನೂ ನನ್ನ ಮಗನ ಬಗ್ಗೆ ಓದುತ್ತಿದ್ದೀರಿ ಮತ್ತು ಅವನು ಬದುಕಲು ಒಂದು ಅವಕಾಶ ಪಡೆಯಲು ಅರ್ಹ ಇದ್ದಾನೆ ಅಂದರೆ ಅವನ ಜನ್ಮದಿನದ ಕೊಡುಗೆ ನೀಡಲು ದಯವಿಟ್ಟು ಸಹಾಯ ಮಾಡಿ- ನಾನು ನಿಮಗೆ ಋಣಿಯಾಗಿರುತ್ತೇನೆ.

  ಯೋಗೇಶ್ ಗಾಗಿ ದೇಣಿಗೆ ಸಂಗ್ರಹ ಮಾಡುತ್ತಿರುವ ಕೆಟ್ಟೋ ಮೂಲಕ ನೀವು ಸಹಾಯ ಮಾಡಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Once we take Veera home, for at least six months, we’ll have to buy a machine called the oxygen concentrator that costs about Rs. 2 lakh. We cannot afford to pay for this machine so we’re planning to rent one at Rs. 18,000 per month. Every 4 hours, Veera needs suction - this is something that can be performed only by a nurse, so we’ll also have to pay for her services at Rs. 50,000 per month.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more