4 ವರ್ಷದ ಮಗುವಿನ ಕ್ಯಾನ್ಸರ್ ಚಿಕಿತ್ಸೆಗೆ ನಿಮ್ಮ ನೆರವು ಬೇಕಿದೆ

Posted By:
Subscribe to Oneindia Kannada

"ಮೇಡಂ ನಾಲ್ಕು ಹೆಜ್ಜೆ ದೊಡ್ಡದಾಗಿ ಮುಂಭಾಗಕ್ಕೆ ಇಡಿ ಮತ್ತು ಎಡಭಾಗಕ್ಕೆ ಎರಡು ಹೆಜ್ಜೆ- ಇದು ನನ್ನ ಮನೆಯ ಅಳತೆ. ಇದನ್ನೇ ಮಾರಿದರೂ ನನ್ನ ಮಗಳ ಚಿಕಿತ್ಸೆಗೆ ಹಣ ಒದಗಿಸುವ ಭರವಸೆ ಇಲ್ಲ"

ಸಹಾಯ ದೊರೆಯಬಹುದಾದ ಎಲ್ಲ ಮೂಲಗಳಿಂದಲೂ ನೆರವು ಪಡೆದ ನಂತರ ಜಾವೇದ್ ಮಲಿಕ್ ಮಗಳ ಚಿಕಿತ್ಸೆಗಾಗಿ Ketto.org ಮೂಲಕ ನೆರವು ಪಡೆಯಲು ಮುಂದಾದರು. ಆಸ್ಪತ್ರೆಯ ಹೊರಗೆ ಮಗಳಿಗೆ ಇತರ ಮಕ್ಕಳಂತೆಯೇ ಬಾಲ್ಯ ಅನುಭವಿಸುವ ಅವಕಾಶ ಸಿಗಬಹುದೆಂಬ ಆಸೆ ಜಾವೇದ್ ಮಲಿಕ್ಅವರದು.

Please help Alia for her cancer treatment

ಜಾವೇದ್ ಮಲಿಕ್ಅವರ ಕಣ್ಣಾಲಿಗಳು ಒದ್ದೆಯಾದವು. ಅವರಿಗೆ ಸಾಂತ್ವನ ನೀಡಲು ಪ್ರಯತ್ನ ಪಡಲಾಯಿತು. ಈ ಇಪ್ಪತ್ತೆಂಟು ವರ್ಷದ ತಂದೆಯ ಮತ್ತು ಆ ಯುವ ಕುಟುಂಬದ ಪಾಲಿಗೆ ಹೇಗೆ ನೆರವಾಗಬಹುದು ಎಂಬ ಚಿಂತೆ ಶುರುವಾಯಿತು. ಒಂದು ದಿನ ಕೆಲಸಕ್ಕೆ ಹೋಗುವ ಮುನ್ನ ಜಾವೇದ್ ಮಲಿಕ್ ರನ್ನು ಭೇಟಿ ಮಾಡಿದೆ.

ತುಂಬ ಗಾಬರಿ ಹಾಗೂ ಹತಾಶರಾಗಿದ್ದ ಅವರು ತಮ್ಮ ಬ್ಯಾಗ್ ನಿಂದ ಮಗಳ ಹೆಲ್ತ್ ರಿಪೋರ್ಟ್ ತೆಗೆದು ಓದುವಂತೆ ಹೇಳಿದರು. ಅದನ್ನು ನೋಡಿದಾಗ ಅಲ್ಲಿರುವ ಬಹಳ ಸಂಗತಿಗಳು ಅರ್ಥವೇ ಆಗಲಿಲ್ಲ. ಆದರೆ ಇಂಗ್ಲಿಷ್ ನ ದಪ್ಪಕ್ಷರದಲ್ಲಿ ಬರೆದಿದ್ದ ಕೆಲವು ಪದಗಳು ಆತನ ಸ್ಥಿತಿಯನ್ನು ತಿಳಿಸುತ್ತಿದ್ದವು.

Please help Alia for her cancer treatment

ಆತನ ಜಗತ್ತು ಬದಲಾದ ರೀತಿಯನ್ನು ಹೇಳಿದರು. ಕೆಲ ತಿಂಗಳ ಹಿಂದೆ, ಮಗಳು ಆಲಿಯಾಳ ನಾಲ್ಕನೇ ವರ್ಷದ ಹುಟ್ಟುಹಬ್ಬದ ಕೆಲ ದಿನದ ಮುಂಚೆ ಆಕೆ ವಿಪರೀತ ಹೊಟ್ಟೆ ನೋವು ಎಂದಳು. ಕೆಲ ಪರೀಕ್ಷೆಗಳನ್ನು ಮಾಡಿದ ನಂತರ ಜಾವೇದ್ ಮತ್ತು ಅವರ ಪತ್ನಿಗೆ ವೈದ್ಯರು ಹೇಳಿದರು: ಇಂಟ್ರಾ ಅಬ್ಡ್ ನ್ಯೂರೋಬ್ಲಾಸ್ಟೋಮಾ+ ಬಿಎಂ ಇನ್ ವಾಲ್ವ್ ಮೆಂಟ್.

ಆ ಮಾತುಗಳಿಂದ ದಂಪತಿಗೆ ಏನೇನೂ ಅರ್ಥವಾಗಲಿಲ್ಲ. ಒಟ್ಟು ಸಾರಾಂಶ ಆ ಮಗು ಆಲಿಯಾಗೆ ನರಮಂಡಲದ ಕ್ಯಾನ್ಸರ್ ಜತೆಗೆ ಅಸ್ಥಿ ಮಜ್ಜೆಯಲ್ಲೂ ಸಮಸ್ಯೆಯಾಗಿತ್ತು. ಅದೂ ತುಂಬ ಉಲ್ಬಣಿಸಿತ್ತು. ಜಾವೇದ್ ರ ಮನವಿಗೆ ಸಂಬಂಧಿಸಿದಂತೆ ketto.org ವೈದ್ಯರು ನೀಡಿದ ಒಕ್ಕಣೆಯಲ್ಲಿ ಅಲಿಯಾಗೆ ಇರುವ ಚಿಕಿತ್ಸೆ ತುರ್ತಿನ ಬಗ್ಗೆ ಸ್ಪಷ್ಟವಾಗಿ ಬರೆದಿದ್ದರು.

ವೈದ್ಯರು ನೀಡಿದ ಪತ್ರ ಹಿಡಿದು ಜಾವೇದ್ ಸಾಕಷ್ಟು ಅಲೆದಾಡಿದ್ದಾರೆ. ಮಗುವಿನ ಕಾಯಿಲೆಯ ಗಾಂಭೀರ್ಯವನ್ನು ಇತರರು ತಿಳಿದುಕೊಳ್ಳಲು ವೈದ್ಯರ ಪತ್ರದಿಂದ ನೆರವಾಗಿದೆ.

"ನನಗೆ ಮೂರು ವಿಚಾರಗಳು ಖಚಿತವಾಗಿ ಗೊತ್ತಿದೆ. ಒಂದು, ಇದು ಕ್ಯಾನ್ಸರ್. ಇದು ತುಂಬ ಗಂಭೀರವಾದದ್ದು ಮತ್ತು ಚಿಕಿತ್ಸೆಗೆ ತುಂಬ ದುಡ್ಡು ಬೇಕಾಗುತ್ತದೆ" ಎನ್ನುತ್ತಾರೆ ಜಾವೇದ್.

Please help Alia for her cancer treatment

"ಆಲಿಯಾ ಭಟ್ ಹೆಸರನ್ನು ಆ ಮಗುವಿಗೆ ಇಟ್ಟೆವು. ಅವಳು ಕೂಡ ಅದೇ ರೀತಿ ಮಿಂಚಲಿ, ಹೆಸರು ಮಾಡಲಿ ಎಂಬ ಕಾರಣಕ್ಕೆ. ಅವಳ ಭವಿಷ್ಯ ಹೇಗಿದೆಯೋ ಏನೋ? ನಾನು ಶ್ರಮ ಪಡುವುದನ್ನು ಮುಂದುವರಿಸಿದ್ದೀನಿ. ನನ್ನ ಕೆಲಸವು ಸಮಾಧಾನವನ್ನು ಕೊಡುತ್ತದೆ. ನಮ್ಮ ಮನೆ ಮಗಳ ನಗು ಹಾಗೂ ಅಳುವಿನಿಂದ ತುಂಬಿತ್ತು. ಅವಳಿಲ್ಲದ ಬದುಕು ಊಹಿಸಲೂ ಸಾಧ್ಯವಿಲ್ಲ" ಎನ್ನುತ್ತಾರೆ ಜಾವೇದ್.

Sai Sri tragic end | Mother Sumasri reveals shocking truths

ಚಿಕಿತ್ಸೆಗೆ ಬೇಕಾದ ಅಂದಾಜು ಮೊತ್ತ ನಾಲ್ಕು ಲಕ್ಷ ರುಪಾಯಿ. Ketto.org ಅಲ್ಲಿ ನೀವು ನೀಡುವ ಸಣ್ಣ ನೆರವು ಕೂಡ ಜಾವೇದ್ ನ ಹೊರೆಯನ್ನು ಇಳಿಸುತ್ತದೆ ಮತ್ತು ಅವರ ಮಗಳು ಆಲಿಯಾಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Alia- 4 year old girl suffering from cancer. Her parents are not in a position to pay money for treatment. So, please help her.
Please Wait while comments are loading...