ಪ್ಲಾಸ್ಟಿಕ್ ನೋಟಿನ ಸಾಧಕ-ಬಾಧಕಗಳೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 10: ಸಂಸತ್ ಗೆ ಶುಕ್ರವಾರ ಸರಕಾರ ನೀಡಿದ ಮಾಹಿತಿ ಪ್ರಕಾರ ಪ್ಲಾಸ್ಟಿಕ್ ನೋಟುಗಳ ಮುದ್ರಣಕ್ಕೆ ತಯಾರಿ ನಡೆದಿದೆ. ಅದರ ಪ್ರಕ್ರಿಯೆ ಅರಂಭವಾಗಿದೆ ಎಂದು ವಿತ್ತ ಸಚಿವಾಲಯವು ಲೋಕಸಭೆಯಲ್ಲಿ ಮಾಹಿತಿ ನೀಡಿತು. ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳನ್ನು ಮುದ್ರಿಸುವ ಬಗ್ಗೆ ನಿರ್ಧಾರವಂತೂ ಮಾಡಿಯಾಗಿದೆ.

ಅದಕ್ಕೆ ಬೇಕಾದ ವಸ್ತುಗಳನ್ನು ಒಟ್ಟು ಮಾಡುವ ಕೆಲಸ ಶುರುವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಲೋಕಸಭೆಗೆ ಲಿಖಿತವಾಗಿ ತಿಳಿಸಿದ್ದಾರೆ. ನಕಲಿ ನೋಟುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಮೊದಲಿಗೆ ಪ್ಲಾಸ್ಟಿಕ್ ನೋಟು ಬಂದಿದ್ದು ಆಸ್ಟ್ರೇಲಿಯಾದಲ್ಲಿ.[ಮೈಸೂರು : ಜನರ ಕೈಗೆ 10 ರೂ. ಪ್ಲಾಸ್ಟಿಕ್ ನೋಟು]

RBI

ಪ್ಲಾಸ್ಟಿಕ್ ನೋಟು ಮುದ್ರಣದ ಉದ್ದೇಶವನ್ನು ಈಗಾಗಲೇ ತಿಳಿಸಲಾಗಿದೆ. ಮತ್ತು ಪ್ಲಾಸ್ಟಿಕ್ ನೋಟನ್ನು ಪರೀಕ್ಷೆಯನ್ನು ಕೊಚ್ಚಿ, ಮೈಸೂರು, ಶಿಮ್ಲಾ ಹಾಗೂ ಭುವನೇಶ್ವರದಲ್ಲಿ ಮಾಡಲಾಗಿದೆ. ಅಂದಹಾಗೆ ಪ್ಲಾಸ್ಟಿಕ್ ನೋಟಿನ ಸಾಧಕ-ಬಾಧಕಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಸಾಧಕ
-ನಕಲು ಮಾಡುವುದು ಕಷ್ಟ. ಅದರಲ್ಲಿನ ಸುರಕ್ಷತಾ ಕ್ರಮಗಳಿಂದ ಸುಲಭವಾಗಿ ನಕಲಿ ನೋಟು ಪತ್ತೆ ಹಚ್ಚಬಹುದು
-ಪ್ಲಾಸ್ಟಿಕ್ ನೋಟುಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ. ಅದನ್ನು ಬದಲಿಸುವ ವೆಚ್ಚ ಕಡಿಮೆ
-ನೋಟು ತುಂಬ ಸ್ವಚ್ಛವಾಗಿರುತ್ತದೆ. ಯಾಕೆಂದರೆ ಅವು ದೂಳು, ತೇವಾಂಶದಿಂದ ಸಂಪೂರ್ಣ ಸುರಕ್ಷಿತವಾಗಿರುತ್ತದೆ.
-ನೋಟುಗಳು ವಾಟರ್ ಪ್ರೂಫ್
-ಪರಿಸರದ ಪರಿಣಾಮ ನೋಟುಗಳ ಮೇಲೆ ಕಡಿಮೆ ಆದ್ದರಿಂದ ದೀರ್ಘ ಕಾಲ ಬಾಳಿಕೆ

ಬಾಧಕ
-ಮುದ್ರಣ ವೆಚ್ಚ ದುಬಾರಿ
-ಮಡಚುವುದು ಕಷ್ಟ
-ಎಣಿಕೆ ಮಾಡುವುದು ಕಷ್ಟ, ಏಕೆಂದರೆ ಸುಲಭವಾಗಿ ಜಾರಿ ಹೋಗುತ್ತದೆ
-ಇನ್ನು ಈಗಿರುವ ಲಕ್ಷಗಟ್ಟಲೆ ಎಟಿಎಂ ಯಂತ್ರಗಳನ್ನು ಪ್ಲಾಸ್ಟಿಕ್ ನೋಟಿಗೆ ಮರು ಹೊಂದಾಣಿಕೆ ಮಾಡುವುದು ತುಂಬ ಖರ್ಚಿನ ಬಾಬ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In 2014 the government had informed the Lok Sabha about its intent to introduce plastic notes. A field trial was undertaken at Kochi, Mysuru, Jaipur, Shimla and Bhubaneswar. Let us find out what are the pros and cons of plastic notes.
Please Wait while comments are loading...