ನ್ಯೂಕ್ಲಿಯಾರ್ ಬಾಂಬಿಡಲು ಕಾರ್ಯಗತನಾಗಿದ್ದೆ- ಯಾಸಿನ್
ನವದೆಹಲಿ,ಡಿ. 30: ಖೂಬ್ ಸೂರತ್ ನಗರವೆನಿಸಿರುವ, ವಜ್ರ ವ್ಯಾಪಾರಿಗಳಿಂದ ಫಳಫಳಿಸುತ್ತಿರುವ ಸೂರತ್ ಗೆ ನ್ಯೂಕ್ಲಿಯರ್ ಬಾಂಬಿಡಲು ಕಾರ್ಯಗತನಾಗಿದ್ದೆ ಎಂದು ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಯಾಸಿನ್ ಭಟ್ಕಳ ರಾಷ್ಟ್ರೀಯ ತನಿಖಾ ದಳದ (NIA) ಕಿವಿಯಲ್ಲಿ ಉಸುರಿದ್ದಾನೆ.
ಅಲ್ಲಿಗೆ ಭಯೋತ್ಪಾದಕ ಪೀಡೆಗಳ ಕೈಗೆ ನ್ಯೂಕ್ಲಿಯರ್ ಅಸ್ತ್ರಗಳೂ ಸುಲಭವಾಗಿ ಸಿಗುತ್ತವೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಇಂತಿಪ್ಪ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಪೀಡೆ ಯಾಸಿನ್ ಭಟ್ಕಳ ಅಲಿಯಾಸ್ ಅಹಮದ್ ಅಜರ್ ಸಿದ್ದಿಬಾಪಾನನ್ನು ಆಗಸ್ಟ್ 27ರಂದು ಬಂಧಿಸಿದ್ದು, ರಾಷ್ಟ್ರೀಯ ತನಿಖಾ ದಳದ ಸೆರೆಯಲ್ಲಿದ್ದಾನೆ. ಮೊನ್ನೆಯಷ್ಟೇ ಚಿಕ್ಕಮಗಳೂರಿನ ಕೊಪ್ಪಕ್ಕೂ ಈ ಉಗ್ರನನ್ನು ಕರೆತರಲಾಗಿತ್ತು.

ಫೋನ್ ಮೂಲಕ ನಮ್ಮಿಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ನನ್ನ ಕೋರಿಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರಿಯಾಜ್, 'ಭಾಯ್! ಪಾಕಿಸ್ತಾನದಲ್ಲಿ ಏನು ಬೇಕಾದರೂ ಮಾಡಬಹುದು. ಇಲ್ಲಿ ಎಲ್ಲವೂ ಸಿಗುತ್ತದೆ' ಎಂದು ಮಾರುತ್ತರ ನೀಡಿದ್ದನಂತೆ.
'ಭಯೋತ್ಪಾದಕ ದಾಳಿಗಳಿಗೆ ನ್ಯೂಕ್ಲಿಯರ್ ಬಾಂಬುಗಳನ್ನು ಬಳಸಬಹುದು ಎಂದು ರಿಯಾಜ್ ಹೇಳಿದ್ದ. ಹಾಗಾದರೆ ಸೂರತ್ ನಗರವನ್ನು ಉಡಾಯಿಸಲು ಒಂದು ನ್ಯೂಕ್ಲಿಯಾರ್ ಬಾಂಬ್ ಅನ್ನು ಕಳಿಸಿಕೊಡು ಎಂದು ರಿಯಾಜ್ ಗೆ ಸೂಚಿಸಿದ್ದೆ ಎಂದು NIA ಅಧಿಕಾರಿಗಳ ಎದುರು ಯಾಸಿನ್ ಭಟ್ಕಳ ಹೇಳಿದ್ದಾನೆ. ಅಂದಹಾಗೆ ಸೂರತ್ ಸದಾ ಯಾಸಿನ್ ಭಟ್ಕಳನ ಕಣ್ಣಂಚಿನಲ್ಲೇ ಇತ್ತು.
ಆದರೆ ಆವಾಗ ರಿಯಾಜ್ ಒಂದು ಆತಂಕವನ್ನು ತೋಡಿಕೊಂಡಿದ್ದ. ಭಯ್ಯಾ, ನ್ಯೂಕ್ಲಿಯರ್ ಬಾಂಬ್ ಹಾಕಿದರೆ ಮುಸ್ಲಿಮರೂ ಸಾಯುತ್ತಾರಲ್ಲಾ ಎಂದು ಗಾಬರಿಪಟ್ಟಿದ್ದ. ಅದಕ್ಕೆ ಅವನ ಆತಂಕವನ್ನು ದೂರ ಮಾಡುತ್ತಾ ಮಸೀದಿಗಳಲ್ಲಿ ಪೋಸ್ಟರುಗಳನ್ನು ಅಂಟಿಸಿ, ಮುಸಲ್ಮಾನ ಬಾಂಧವರಿಗೆ ಒಂದು ಮನವಿ ಮಾಡಿಕೊಂಡರೆ ಆಯಿತು. ಎಲ್ಲ ಮುಸ್ಲಿಂ ಕುಟುಂಬಗಳೂ ಸೈಲೆಂಟಾಗಿ ನಗರವನ್ನು ಬಿಟ್ಟು ದೂರ ಹೋಗಿ' ಎಂದು ಸೂಚಿಸಿದರೆ ಆದೀತು ಎಂದು ರಿಯಾಜ್ ಗೆ ಸಮಾಧಾನ ಮಾಡಿದ್ದಾಗಿ ಪಾಪಿ ಯಾಸಿನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸರಿ, ಪ್ಲಾನ್ ಏನಾಯ್ತು!?
Man proposes, God disposes. ಭಯೋತ್ಪಾದಕರ ಅಂದ್ಕೊಂಡಂಗೆಲ್ಲಾ ಆಗುವಂತಿದ್ದರೆ....! ಬೇಹುಗಾರಿಕೆ ದಳ ಅವನ ಚಲನವಲನದ ಮೇಲೆ ಕಣ್ಣಿಟ್ಟು ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬುಗಳು ಹಸ್ತಾಂತರವಾಗುವುದಕ್ಕೂ ಮುನ್ನ ಯಾಸಿನ್ ಭಟ್ಕಳನನ್ನು ಹೆಡೆಮುರಿಗೆ ಕಟ್ಟುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದಂತಿದೆ. ಸದ್ಯ! ಯಾಸಿನ್ ಭಟ್ಕಳನ ಕೈಗೆ ನ್ಯೂಕ್ಲಿಯಾರ್ ಬಾಂಬು ಸಿಗಲಿಲ್ಲ' ಎಂದು NIA ಅಧಿಕಾರಿಗಳು ನಿಟ್ಟಿಸಿರುಬಿಟ್ಟಿದ್ದಾರೆ.
ಯುದ್ಧೋಪಾದಿಯಲ್ಲಿ ಉಗ್ರ ತರಬೇತಿ:
ಪಾಕಿಸ್ತಾನದಲ್ಲಿ ಭಯೋತ್ಪಾದಕ ಕ್ಯಾಂಪ್ ಗಳಲ್ಲಿ ಸದಸ್ಯರಿಗೆಲ್ಲಾ ಸೈನಿಕರಿಗೆ ಸರಿಸಮನಾಗಿ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ PT ಇರುತ್ತದೆ. ಅದಾದ ಮೇಲೆ IED, pistols, revolvers, AK-47 ಇವೇ ಮುಂತಾದ ಮಾರಕ ಆಯುಧಗಳನ್ನು ಬಳಸುವುದು ಹೇಗೆ ಎಂದು ಹೇಳಿಕೊಡಲಾಗುತ್ತದೆ. ಇನ್ನು ಭಾರತದ ಆಯುಧಗಳಾದ LMG, SLR, sniper riflesಗಳ ಬಗ್ಗೆಯೂ ತರಬೇತಿಯಿರುತ್ತದೆ.
PE3A (black colour explosive), C4, C3, TNT ಮುಂತಾದವುಗಳ ಬಳಕೆಯ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಇದೆಲ್ಲಾ 50 ದಿನಗಳಲ್ಲೇ ಕರತಲಾಮಲಕವಾಗುವಂತೆ ಸಮರೋಪಾದಿಯಲ್ಲಿ ಹೇಳಿಕೊಡಲಾಗುತ್ತದೆ ಎಂದು ಯಾಸಿನ್ ಭಟ್ಕಳ NIA ಅಧಿಕಾರಿಗಳಿಗೆ ತಿಳಿಸಿದ್ದಾನೆ.












Click it and Unblock the Notifications