ಲಾಕ್‌ಡೌನ್ 4.0: ಆಯ್ದ ನಗರಗಳಲ್ಲಿ ವಿಮಾನ, ರೈಲು, ಬಸ್ ಸಂಚಾರಕ್ಕೆ ಅನುಮತಿ?
ನವದೆಹಲಿ, ಮೇ 15: ಲಾಕ್‌ಡೌನ್ 4.0ದಲ್ಲಿ ಆಯ್ದ ನಗರಗಳಲ್ಲಿ ವಿಮಾನ, ರೈಲು, ಬಸ್ ಸಂಚಾರಕ್ಕೆ ಅನುಮತಿ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದೊಮ್ಮೆ ಮೊದಲ ಹಂತದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದರೆ ಆಯಾ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಅರಂಭವಾಗಲಿದೆ. ಆದರೆ 4.0 ಅಧಿಕೃತ ಮಾರ್ಗಸೂಚಿ ಇನ್ನೂ ಹೊರಬಿದ್ದಿಲ್ಲ.
ಬೆಂಗಳೂರಿನಲ್ಲಿ ಕ್ವಾರೆಂಟೈನ್ ಗೆ ಒಪ್ಪದ 45 ಮಂದಿ ದೆಹಲಿಗೆ ವಾಪಸ್!
ಮೇ 17 ರಂದು ಲಾಕ್‌ಡೌನ್ ಮುಕ್ತಾಯಗೊಳ್ಳಲಿದ್ದು ಇದಾದ ಬಳಿಕವಷ್ಟೇ ಮುಂದಿನ ದಾರಿ ಏನು ಎನ್ನುವುದು ತಿಳಿದುಬರಲಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ 4.0 ಲಾಕ್‌ಡೌನ್ ತುಂಬಾ ವಿಶೇಷವಾಗಿರಲಿದೆ.
ರೆಡ್‌ಝೋನ್, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಸ್‌ಗಳ ಸಂಚಾರ ಆರಂಭಗೊಳ್ಳಲಿದೆ ಆದರೆ ಬೆರಳೆಣಿಕೆ ಬಸ್‌ಗಳು ಮಾತ್ರ ಸಂಚರಿಸಲಿದೆ.
ಹಾಗೆಯೇ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆಗೂ ಅನುಮತಿ ನೀಡುವ ಸಾಧ್ಯತೆ ಇದೆ.
ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ಹೆಚ್ಚಿದ್ದರೆ, ಗುಜರಾತ್ ದ್ವಿತೀಯ ಸ್ಥಾನ ಪಡೆದಿದೆ. 9268 ಮಂದಿಗೆ ಕೊರೊನಾ ಇದೆ. 2,08,537 ಮಂದಿ ಕ್ವಾರಂಟೈನ್ ಅಲ್ಲಿದ್ದಾರೆ. ಶೇ.80 ರಷ್ಟು ಪ್ರಕರಣಗಳು ಅಹಮದಾಬಾದಿನಲ್ಲಿದೆ.
ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಗುಜರಾತ್, ದೆಹಲಿ ಚಟುವಟಿಕೆಗಳನ್ನು ಆರಂಭಿಸುವತ್ತ ಒಲವು ತೋರಿವೆ. ಕೇರಳವು ರೈಲು, ವಿಮಾನ, ರೆಸ್ಟೋರೆಂಟ್, ಹೋಟೆಲ್ ಗಳನ್ನು ಆರಂಭಿಸುವ ಕುರಿತು ಮನವಿ ಮಾಡಿದೆ.